ಸಿಡ್ನಿ: ಪಿಂಕ್ ಟೆಸ್ಟ್ ನಂತರ ಪಿಂಕ್ ಟ್ವೆಂಟಿ20 ಪಂದ್ಯ

Posted By:
Subscribe to Oneindia Kannada

ಸಿಡ್ನಿ, ಜ.18: ಪ್ರತಿವರ್ಷ ನಡೆಯಲಿರುವ ಪಿಂಕ್ ಟೆಸ್ಟ್ ಪಂದ್ಯ ಮಳೆಯಿಂದ ರದ್ದಾದ ಹಿನ್ನಲೆಯಲ್ಲಿ ಪ್ರವಾಸಿ ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯವನ್ನು ಪಿಂಕ್ ಟ್ವೆಂಟಿ20 ಪಂದ್ಯವನ್ನಾಗಿಸಲು ಆಸ್ಟ್ರೇಲಿಯಾ ಮುಂದಾಗಿದೆ. ಇದಕ್ಕೆ ಟೀಂ ಇಂಡಿಯಾ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಏನಿದು ಪಿಂಕ್ ಪಂದ್ಯ ಮುಂದೆ ಓದಿ...

ಮೆಕ್‌ಗ್ರಾತ್ ಫೌಂಡೇಶನ್‌ಗೆ ಬೆಂಬಲ ನೀಡುವ ಸಲುವಾಗಿ ಮುಂಬರುವ ಭಾರತ ಹಾಗೂ ಆಸ್ಟ್ರೇಲಿಯ ನಡುವೆ ನಡೆಯಲಿರುವ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯ ಗುಲಾಬಿ ಬಣ್ಣದಿಂದ ಕೂಡಿರಲಿದೆ. ಪಿಂಕ್ ಚೆಂಡುಗಳನ್ನು ಬಳಸಲಾಗುತ್ತದೆ.[ಭಾರತ vs ಆಸ್ಟ್ರೇಲಿಯಾ ಸಂಪೂರ್ಣ ವೇಳಾಪಟ್ಟಿ]

Pink for McGrath Foundation

ಆಸ್ಟ್ರೇಲಿಯಾ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಸಿಡ್ನಿ ಟೆಸ್ಟ್‌ ಮೂಲಕ ಮೆಕ್‌ಗ್ರಾತ್ ಫೌಂಡೇಶನ್ 3,80,000 ಡಾಲರ್ ನಿಧಿ ಸಂಗ್ರಹಿಸಲು ಉದ್ದೇಶಿಸಿತ್ತು. ಆದರೆ, ಈ ಪಿಂಕ್ ಟೆಸ್ಟ್ ಮಳೆಯಿಂದಾಗಿ ನಡೆಯಲಿಲ್ಲ. [ಗ್ಯಾಲರಿ : ಭಾರತ vs ಆಸ್ಟ್ರೇಲಿಯಾ ಸರಣಿ]

ಹೀಗಾಗಿ ಅಗತ್ಯವಾದ ನಿಧಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಸಿಡ್ನಿ ಟೆಸ್ಟ್‌ನಲ್ಲಿ ಪದೇ ಪದೇ ಮಳೆ ಅಡ್ಡಿಪಡಿಸಿದ ಹೊರತಾಗಿಯೂ 250,000 ಡಾಲರ್ ನಿಧಿ ಮಾತ್ರ ಸಂಗ್ರಹವಾಗಿತ್ತು

ಮೆಕ್‌ಗ್ರಾತ್ ಫೌಂಡೇಶನ್ ಕ್ಯಾನ್ಸರ್ ಪೀಡಿತರಿಗೆ ನೆರವು ನೀಡಲು ಕಳೆದ ಕೆಲವು ವರ್ಷಗಳಿಂದ ನಿಧಿ ಸಂಗ್ರಹಿಸುವ ಅಭಿಯಾನ ನಡೆಸುತ್ತಿದೆ. ಜನವರಿ 31 ರಂದು ನಡೆಯಲಿರುವ 3ನೆ ಟ್ವೆಂಟಿ-20 ಪಂದ್ಯದಲ್ಲಿ ಮೆಕ್‌ಗ್ರಾತ್ ಫೌಂಡೇಶನ್‌ಗೆ ನಿಧಿ ಸಂಗ್ರಹಿಸುವ ಗುರಿ ಹೊಂದಿದ್ದೇವೆಎಂದು ಕ್ರಿಕೆಟ್ ಆಸ್ಟ್ರೇಲಿಯದ ಸಿಇಒ ಜೇಮ್ಸ್ ಸದರ್ನ್‌ಲೆಂಡ್ ತಿಳಿಸಿದ್ದಾರೆ. ಜನವರಿ 26ರಂದು ಅಡಿಲೇಡ್ ನಲ್ಲಿ ಟ್ವೆಂಟಿ20 ಸರಣಿ ಆರಂಭವಾಗಲಿದೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The third and final match of the upcoming Twenty20 International series between India and Australia will turn pink to support the McGrath Foundation after rain washed out a large part of the annual Pink Test here.
Please Wait while comments are loading...