350ಕ್ಕಿಂತ ಹೆಚ್ಚು ಸ್ಕೋರ್ ಗಳಿಕೆ, ಟೀಂ ಇಂಡಿಯಾ ಅಗ್ರಸ್ಥಾನಕ್ಕೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 20: ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅತಿಹೆಚ್ಚು ಬಾರಿ 350ಕ್ಕಿಂತ ಹೆಚ್ಚು ಸ್ಕೋರ್ ಮಾಡಿದ ತಂಡಗಳ ಪೈಕಿ ಭಾರತ ಈಗ ಅಗ್ರಸ್ಥಾನಕ್ಕೇರಿ ದಾಖಲೆ ಬರೆದಿದೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದ ಸ್ಕೋರ್ ಸೇರದಂತೆ, ಒಟ್ಟು 23 ಪಂದ್ಯಗಳಲ್ಲಿ 350ಕ್ಕಿಂತ ಅಧಿಕ ರನ್ ಗಳಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡದ ದಾಖಲೆಯನ್ನು ಕೊಹ್ಲಿ ಪಡೆ ಹಿಂದಿಕ್ಕಿದೆ.

ಕಟಕ್​ನಲ್ಲಿ ಗುರುವಾರದಂದು ಇಂಗ್ಲೆಂಡ್ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 381 ರನ್​ಗಳಿಸಿತ್ತು. ಈ ಮೂಲಕ ಹೊಸ ದಾಖಲೆ ಬರೆಯಿತು. ದಕ್ಷಿಣ ಆಫ್ರಿಕಾ ತಂಡ ಇದುವರೆಗೆ 22 ಏಕದಿನ ಪಂದ್ಯಗಳಲ್ಲಿ 350ಕ್ಕಿಂತ ಹೆಚ್ಚು ರನ್ ದಾಖಲಿಸಿದೆ.

350-plus totals scores in ODIs India top the list

ಭಾರತ ಕಂಡ ಯಶಸ್ವಿ ನಾಯಕ ಸೌರವ್ ಗಂಗೂಲಿ ನೇತೃತ್ವದಲ್ಲಿ 1999ರ ವಿಶ್ವಕಪ್​ನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ಮೊದಲ ಬಾರಿಗೆ 350 ರನ್​ಗಳ ಗಡಿ ದಾಟಿದ ಸಾಧನೆ ಮಾಡಿತ್ತು. ನಾಯಕ ಗಂಗೂಲಿ(183) ಮತ್ತು ರಾಹುಲ್ ದ್ರಾವಿಡ್(145) ಅಮೋಘ 318 ರನ್​ಗಳ ಜತೆಯಾಟದ ಮೂಲಕ ಇತಿಹಾಸ ನಿರ್ವಿುಸಿದ್ದರು.

ಹೈದರಾಬಾದ್​ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 376 ರನ್​ಗಳನ್ನು ಪೇರಿಸಿದ್ದರು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್(186*) ಮತ್ತು ರಾಹುಲ್ ದ್ರಾವಿಡ್(153) ಜೋಡಿ ಮೋಡಿ ಮಾಡಿತ್ತು. ಸಚಿನ್-ದ್ರಾವಿಡ್ ಜತೆಯಾಟದಲ್ಲಿ 331 ರನ್​ಗಳು ಸೇರ್ಪಡೆಗೊಂಡಿತ್ತು.

8 ವರ್ಷಗಳ ನಂತರ 2007ರ ವಿಶ್ವಕಪ್​ನಲ್ಲಿ 400 ರನ್​ಗಳ ಗಡಿ ದಾಟುವ ಮೂಲಕ ಭಾರತ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ದಾಖಲೆ ಸೃಷ್ಟಿಸಿತು. ಟ್ರಿನಿಡಾಡ್​ನ ಬರ್ಮುಡಾಡಾದಲ್ಲಿ ನಡೆದ ಪಂದ್ಯದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 413 ರನ್​ಗಳನ್ನು ಬಾರಿಸಿತ್ತು. ನಂತರದ ದಶಕದಲ್ಲಿ ಅನೇಕ ಬಾರಿ 350 ರನ್​ಗಳ ಗಡಿ ದಾಟುವಲ್ಲಿ ಭಾರತ ಯಶಸ್ವಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India scores 350-plus 23 times in ODIs which is most among all teams. Team India now gone past South Africa's 22 instances. India have never lost an ODI after scoring 350-plus in an innings in an ODI.
Please Wait while comments are loading...