2ನೇ ಟೆಸ್ಟ್ : ರಹಾನೆ ಅಜೇಯ ಶತಕ, ಭಾರತಕ್ಕೆ ಬೃಹತ್ ಮುನ್ನಡೆ

Posted By:
Subscribe to Oneindia Kannada

ಕಿಂಗ್ಸ್ಟನ್ (ಜಮೈಕಾ), ಆಗಸ್ಟ್ 02: ಅಜಿಂಕ್ಯ ರಹಾನೆ ಅವರ ಅಜೇಯ ಶತಕ (108) ದ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಬೃಹತ್ ಮುನ್ನಡೆ ಪಡೆದಿದೆ. ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಮಳೆಗೆ ಆಹುತಿಯಾದರೂ 308ರನ್ ಮುನ್ನಡೆಯನ್ನು ಕೊಹ್ಲಿ ಪಡೆ ಕಾಯ್ದುಕೊಂಡಿದೆ.

ಒಟ್ಟಾರೆ 171.1 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 500 ರನ್ ಗಳಿಸಿದ್ದಾಗ ಕೊಹ್ಲಿ ಅವರು ಇನ್ನಿಗ್ಸ್ ಡಿಕ್ಲೇರ್ಡ್ ಮಾಡಿದರು. 3ನೇ ದಿನದಾಟ ಆರಂಭದಲ್ಲೇ ವೃದ್ಧಿಮಾನ್ ಸಹಾ (47) ವಿಕೆಟ್ ಕಳೆದುಕೊಂಡಿತು.

ಆದರೆ, ರಹಾನೆ ಅವರು ಅಮಿತ್ ಮಿಶ್ರಾ ಮತ್ತು ಉಮೇಶ್ ಯಾದವ್ ಜತೆಗೂಡಿ ತಂಡದ ಮೊತ್ತವನ್ನು 500ರ ಗಡಿ ದಾಟಿಸಿದರು. ವೆಸ್ಟ್ ಇಂಡೀಸ್ ಪರ ಚೇಸ್ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

ಇದಕ್ಕೂ ಮುನ್ನ ಎರಡನೇ ದಿನದಂದು ಕೆಎಲ್ ರಾಹುಲ್ ಭರ್ಜರಿ ಶತಕದ ನೆರವಿನಿಂದ 88 ಓವರ್ ಗಳಲ್ಲಿ 232ರನ್ ಒಟ್ಟಾರೆ 5/358ರನ್ ಗಳಿಸಿತ್ತು.

ಮೂರನೇ ದಿನದಂದು ಮಳೆಯ ಅಡ್ಡಿ

ಮೂರನೇ ದಿನದಂದು ಮಳೆಯ ಅಡ್ಡಿ

ಮೂರನೇ ದಿನದಂದು ಚಹಾ ವಿರಾಮಕ್ಕೂ ಮುನ್ನ ಮಳೆ ಸುರಿದು ಪಂದ್ಯಕ್ಕೆ ಅಡ್ಡಿಯುಂಟಾಯಿತು. ನಾಲ್ಕನೇ ದಿನದಂದು ವಿಂಡೀಸ್ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲಿದೆ.

ಸಂಕ್ಷಿಪ್ತ ಸ್ಕೋರ್

ಸಂಕ್ಷಿಪ್ತ ಸ್ಕೋರ್

ವೆಸ್ಟ್ ಇಂಡೀಸ್ ಪ್ರಥಮ ಇನಿಂಗ್ಸ್ 52.3 ಓವರ್​ಗಳಲ್ಲಿ 196
ಭಾರತ ಪ್ರಥಮ ಇನಿಂಗ್ಸ್ 171.1 ಓವರ್​ಗಳಲ್ಲಿ 500 ಕ್ಕೆ 9 ಡಿಕ್ಲೇರ್ಡ್ (ಕೆಎಲ್ ರಾಹುಲ್ 158, ರಹಾನೆ ಅಜೇಯ 108, ವೃದ್ಧಿಮಾನ್ ಸಾಹಾ 47, ಚೇಸ್ 5/121)
ಚಿತ್ರದಲ್ಲಿ : ಚೇತೇಶ್ವರ್ ಪೂಜಾರಾ ರನ್ ಔಟ್ ಆಗಿದ್ದು

ರಹಾನೆ ಬೌಂಡರಿ ಬಾರಿಸಿದ್ದು ಹೀಗೆ

ರಹಾನೆ ಬೌಂಡರಿ ಬಾರಿಸಿದ್ದು ಹೀಗೆ

ವೆಸ್ಟ್ ಇಂಡೀಸ್ ನಾಯಕ ಜಾಸನ್ ಹೋಲ್ಡರ್ ಎಸೆತವನ್ನು ಬೌಂಡರಿಗೆ ಅಟ್ಟಿದ ಅಜಿಂಕ್ಯ ರಹಾನೆ

ಲೋಕೇಶ್ ರಾಹುಲ್ ಸಿಕ್ಸರ್ ಬಾರಿಸಿದ ರೀತಿ

ಲೋಕೇಶ್ ರಾಹುಲ್ ಸಿಕ್ಸರ್ ಬಾರಿಸಿದ ರೀತಿ

ವೆಸ್ಟ್ ಇಂಡೀಸ್ ನ ಸ್ಪಿನ್ನರ್ ದೇವೇಂದ್ರ ಬಿಶೂ ಅವರ ಎಸೆತವನ್ನು ಸಿಕ್ಸರ್ ಗೆ ಬಾರಿಸಿದ ಲೋಕೇಶ್ ರಾಹುಲ್

ಕೆಎಲ್ ರಾಹುಲ್ ಮೂರನೇ ಶತಕ

ಕೆಎಲ್ ರಾಹುಲ್ ಮೂರನೇ ಶತಕ

ಅಜಯ್ ಜಡೇಜ ಅವರು 1996-97 ರಲ್ಲಿ ಆರಂಭಿಕ ಆಟಗಾರ ಅಜಯ್ ಜಡೇಜ ಅವರು ಸೈಂಟ್ ಜಾನ್ಸ್ ನಲ್ಲಿ 96ರನ್ ಗಳಿಸಿದ ಸಾಧನೆಯನ್ನು ಕೆಎಲ್ ರಾಹುಲ್ ಸರಿಗಟ್ಟಿದರು.

ರಾಹುಲ್ ಗೆ ಸಾಥ್ ನೀಡಿದ ಪೂಜಾರಾ

ರಾಹುಲ್ ಗೆ ಸಾಥ್ ನೀಡಿದ ಪೂಜಾರಾ

ರಾಹುಲ್ ಗೆ ಸಾಥ್ ನೀಡಿದ ಪೂಜಾರಾ ಅವರು 159 ಎಸೆತಗಳಲ್ಲಿ 46 ರನ್ ಗಳನ್ನು ಗಳಿಸಿ ಅನಗತ್ಯ ರನ್ ಕದಿಯಲು ಯತ್ನಿಸಿ ಔಟಾದರು. 150ಕ್ಕೂ ಅಧಿಕ ಎಸೆತಗಳನ್ನು ಆಡಿ 28.93 ಸ್ಟೈಕ್ ರೇಟ್ ನಲ್ಲಿ ಗಳಿಸಿದ್ದು ಇದು ಅತ್ಯಂತ ಕಳಪೆ ಬ್ಯಾಟಿಂಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ.

ರಾಹುಲ್ ಆಟಕ್ಕೆ ಕೊಹ್ಲಿಯಿಂದ ಪ್ರಶಂಸೆ

ರಾಹುಲ್ ಆಟಕ್ಕೆ ಕೊಹ್ಲಿಯಿಂದ ಪ್ರಶಂಸೆ

ರಾಹುಲ್ ಹಾಗೂ ಕೊಹ್ಲಿ ಜೋಡಿ 69ರನ್ ಜೊತೆಯಾಟ ಕಲೆ ಹಾಕಿದರು. ನಂತರ ಕೊಹ್ಲಿ ಕೂಡಾ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ajinkya Rahane scored a century as India took a first innings lead of 304 runs and piled more pressure on the struggling West Indies unit before the final session on day three of the second Test was washed off.
Please Wait while comments are loading...