2ನೇ ಟೆಸ್ಟ್: ಭಾರತಕ್ಕೆ 246 ರನ್ ಗಳ ಜಯ, 1-0 ಮುನ್ನಡೆ

Written By: Ramesh
Subscribe to Oneindia Kannada

ವಿಶಾಖಪಟ್ಟಣಂ, ನವೆಂಬರ್. 21 : ಪ್ರವಾಸಿ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಕೊನೆ ದಿನವಾದ ಸೋಮವಾರ ಭಾರತದ ಬೌಲರ್ ಗಳು ಇಂಗ್ಲೆಂಡ್ ತಂಡವನ್ನು 158 ರನ್ ಗಳಿಗೆ ಕಟ್ಟಿ ಹಾಕಿದರು. ಇದರಿಂದ ಟೀಂ ಇಂಡಿಯಾ 246 ರನ್ ಗಳ ಬೃಹತ್ ಮೊತ್ತದಿಂದ ಗೆಲುವು ಸಾಧಿಸಿ ಸರಣಿಯಲ್ಲಿ 1-೦ ಮುನ್ನಡೆ ಸಾಧಿಸಿತು.

ವಿಶಾಖಪಟ್ಟಣಂನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿದ್ದ 405 ರನ್ ಗಳ ಗೆಲುವಿನ ಗುರಿಯನ್ನು ಮುಟ್ಟದೆ ಇಂಗ್ಲೆಂಡ್ 158 ರನ್ ಗಳಿಗೆ ಸರ್ವಪತನ ಕಂಡಿದೆ. ಇದರಿಂದ ಭಾರತ ಗೆಲುವಿನ ನಗೆ ಬೀರಿತು. ಅಶ್ವಿನ್ 2ನೇ ಟೆಸ್ಟ್ ನಲ್ಲಿ 8 ವಿಕೆಟ್ ಪಡೆದು ಆಂಗ್ಲರಿಗೆ ಕಂಟಕವಾದರು. [ಟೆಸ್ಟ್ ದಿಗ್ಗಜರ ಸಾಲಿಗೆ ವಿಶ್ವದ ನಂ.1 ಸ್ಪಿನ್ನರ್ ಆರ್ ಅಶ್ವಿನ್]

2nd Test: India thrash England by 246 runs, take 1-0 lead

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 455 ರನ್ ಗಳಿಸಿತ್ತು. ಇಂಗ್ಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್ ನಲ್ಲಿ 255 ರನ್ ಗಳಿಗೆ ಕಟ್ಟಿ ಹಾಕಿ ಭಾರತ 200 ರನ್ ಗಳ ಮುನ್ನಡೆ ಸಾಧಿಸಿ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 204 ರನ್ ಗಳಿ ಆಲೌಟ್ ಆಗಿತ್ತು.

ಇಂಗ್ಲೆಂಡ್ ತಂಡಕ್ಕೆ 405 ರನ್ ಗಳ ಗೆಲುವಿನ ಗುರಿ ನೀಡಿತ್ತು. ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 4ನೇ ದಿನ ಭಾನುವಾರ ಉತ್ತಮ ಆಟವಾಡುತಿದ್ದ ಕುಕ್(54) ಹಾಗೂ ಹಮೀದ್ (25) ಅವರನ್ನು ವಿಕೆಟ್ ಕಳೆದುಕೊಂಡಿತ್ತು.

ಸೋಮವಾರ ಕೊನೆದಿನದಂದು ಬಾರತ ಬೌಲರ್ ಗಳು ಆಂಗ್ಲರ ಮೇಲೆ ಸವಾರಿ ಮಾಡಿ 158 ರನ್ ಗಳಿಗೆ ಕಟ್ಟಿ ಹಾಕಿದರು. ಇದರಿಂದ 5 ಟೆಸ್ಟ್ ಪಂದ್ಯಗಳಲ್ಲಿ ಈಗಾಗಲೇ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಈಗ ಎರಡನೇ ಪಂದ್ಯದಲ್ಲಿ ಗೆದ್ದಿರುವ ಭಾರತ 1-0 ಅಂತರವನ್ನು ಕಾಯ್ದುಕೊಂಡಿದೆ.

ಸ್ಕೋರ್ ವಿವರ
ಭಾರತ: 455/204
ಇಂಗ್ಲೆಂಡ್: 255/158

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India bowlers put up a fantastic effort on fifth day as hosts thrashed England by a whopping margin of 246 runs in the second Test match at the ACA-VDCA cricket stadium on Monday (Nov 21).
Please Wait while comments are loading...