ಎರಡನೇ ಟೆಸ್ಟ್ ಗೆಲ್ಲಲು ಇಂಗ್ಲೆಂಡಿಗೆ 405ರನ್ ಟಾರ್ಗೆಟ್

Posted By:
Subscribe to Oneindia Kannada

ವಿಶಾಖಪಟ್ಟಣಂ, ನವೆಂಬರ್ 20: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 204ರನ್ ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಈ ಪಂದ್ಯ ಗೆಲ್ಲಲು ಇಂಗ್ಲೆಂಡ್ ತಂಡಕ್ಕೆ 405ರನ್ ಟಾರ್ಗೆಟ್ ನೀಡಲಾಗಿದೆ. ಇಲ್ಲಿನ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ಭಾನುವಾರದಂದು 4ನೇ ದಿನದ ಆಟ ಜಾರಿಯಲ್ಲಿದೆ.

ಇಂಗ್ಲೆಂಡ್ ತಂಡ ಈ ಪಂದ್ಯವನ್ನು ಗೆಲ್ಲಲು 150 ಓವರ್ ಗಳಿದ್ದು, ಇಲ್ಲಿ ತನಕ ಭಾರತದಲ್ಲಿ ಯಾವ ತಂಡ ಕೂಡಾ 387ರನ್ ಗಳಿಗೂ ಅಧಿಕ ಮೊತ್ತ ಚೇಸ್ ಮಾಡಿದ ಉದಾಹರಣೆಗಳಿಲ್ಲ. ನಾಲ್ಕನೇ ದಿನದ ಮೊತ್ತಕ್ಕೆ 106ರನ್ ಸೇರಿಸಿದ ಭಾರತ ತಂಡ 7 ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.

2nd-test-india-vs-england-match-report-day-4-visakhapatnam

4ನೇ ದಿನದ ಆರಂಭದಲ್ಲಿ 98/3 ಸ್ಕೋರಿನೊಂದಿಗೆ ಕ್ರೀಸ್ ಗಿಳಿದ ಅಜಿಂಕ್ಯ ರಹಾನೆ (26), ನಾಯಕ ವಿರಾಟ್ ಕೊಹ್ಲಿ (81) ನಾಲ್ಕನೇ ವಿಕೆಟ್ ಗೆ 77ರನ್ ಕಲೆ ಹಾಕಿದರು.

ಸ್ಟುವರ್ಟ್ ಬ್ರಾಡ್ ಅವರು ರಹಾನೆ ವಿಕೆಟ್ ಪಡೆಯುತ್ತಿದ್ದಂತೆ ಆರ್ ಅಶ್ವಿನ್ 7, ವೃದ್ಧಿಮಾನ್ ಸಹಾ 2, ರವೀಂದ್ರ ಜಡೇಜ 14ರನ್ ಗಳಿಸಿ ಔಟಾದರು. ಆಫ್ ಸ್ಪಿನ್ನರ್ ಜಯಂತ್ ಯಾದವ್ ಅವರು 27ರನ್ ಗಳಿಸಿ ಅಜೇಯರಾಗಿ ಉಳಿದರೆ, ವೇಗಿ ಶಮಿ 19ರನ್ ಗಳಿಸದರು.

ಇಂಗ್ಲೆಂಡ್ ಪರ ಬ್ರಾಡ್ ಹಾಗೂ ಅದಿಲ್ ರಶೀದ್ ಅವರು ತಲಾ 4 ವಿಕೆಟ್ ಪಡೆದರೆ, ಜೇಮ್ಸ್ ಆಂಡರ್ಸನ್ ಹಾಗೂ ಮೊಯಿನ್ ಅಲಿ ತಲಾ 1 ವಿಕೆಟ್ ಗಳಿಸಿದರು. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
England bowled India out for 204 in the second innings minutes before lunch and thereby need 405 runs to win the second Test match at the ACA-VDCA Cricket Stadium here on Sunday (Nov 20).
Please Wait while comments are loading...