2ನೇ ಟೆಸ್ಟ್: ಅಶ್ವಿನ್ ಗೆ 5 ವಿಕೆಟ್, ಭಾರತಕ್ಕೆ 200 ರನ್ ಗಳ ಮುನ್ನಡೆ

Written By: Ramesh
Subscribe to Oneindia Kannada

ವಿಶಾಖಪಟ್ಟಣಂ, ನವೆಂಬರ್. 19 : 3ನೇ ದಿನವಾದ ಶನಿವಾರ ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಸ್ಪಿನ್ನರ್ ಆರ್.ಅಶ್ವಿನ್ ಅವರ ಸ್ಪಿನ್ ಮೋಡಿಗೆ 255 ರನ್ ಗಳಿಗೆ ಸರ್ವಪತನ ಕಂಡಿದೆ. ಇದರಿಂದ ಟೀಂ ಇಂಡಿಯಾ 200 ರನ್ ಗಳಿಂದ ಮುನ್ನಡೆ ಸಾಧಿಸಿತು.

ವಿಶಾಖ ಪಟ್ಟಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 455 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಂಟಿಂಗ್ ಮಾಡಿ ಇಂಗ್ಲೆಂಡ್ 102. 5 ಓವರ್ ಗಳಲ್ಲಿ 255 ರನ್ ಗಳಿಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡು 200 ರನ್ ಗಳ ಹಿನ್ನಡೆ ಸಾಧಿಸಿತು. ಆರ್ ಅಶ್ವಿನ್ 5 ವಿಕೆಟ್ ಪಡೆದು ಮಿಂಚಿದರು. [ಚಿತ್ರಗಳಲ್ಲಿ: ಕೊಹ್ಲಿ ಹಾಗೂ ಪೂಜಾರ ಶತಕ, ಅಶ್ವಿನ್ ಅರ್ಧಶತಕ]

Day 3: Ashwin takes 5 wickets to hand India 200-run lead

ಶುಕ್ರವಾರ 2ನೇ ದಿನದಂದು 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್, 3ನೇ ದಿನ ಉತ್ತಮ ಬ್ಯಾಟಿಂಗ್ ಮಾಡುತಿದ್ದ ಸ್ಟೋಕ್ಸ್ (70) ಮತ್ತು ಬೈರ್ಸ್ಟೋವ್ (53) ಜೋಡಿಯನ್ನು ಅಶ್ವಿನ್ ಸ್ಟೋಕ್ಸ್ ಅವರನ್ನು ಎಬಿ ಬಲೆಗೆ ಕೆಡವಿ ಬ್ರೇಕ್ ಹಾಕಿದರು.

ಅರ್ಧ ಶತಕಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತಿದ್ದ ಬೈರ್ಸ್ಟೋವ್ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಬ್ಯಾಟಿಂಗ್ ಗೆ ಬಂದ ರಶೀದ್ (32) ರನ್ ಗಳಿಸಿ ನಾಟೌಟ್ ಆಗಿ ಉಳಿದರು.

ಭಾರತ ಪರ ಅಶ್ವಿನ್ 5, ಶಮಿ, ಜಯಂತ್, ಜಡೇಜಾ, ಉಮೇಶ್ ಯಾದವ್ ತಲಾ ಒಂದು ವಿಕೆಟ್ ಪಡೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's first innings total of 455 on day three of the second Test here today (November 19). England were bowled out for 255 with India leading by 200 runs.
Please Wait while comments are loading...