2ನೇ ಟೆಸ್ಟ್: ಕೊಹ್ಲಿ,ಪೂಜಾರ ಬೊಂಬಾಟ್ ಆಟ, 317/4 ರನ್

Written By: Ramesh
Subscribe to Oneindia Kannada

ವಿಶಾಖಪಟ್ಟಣಂ: ನವೆಂಬರ್. 17 : ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಜುಗಲ್ ಬಂದಿ ನೆರವಿನಿಂದ ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 317 ರನ್ ಗಳಿಸಿದೆ.

ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಬ್ಯಾಟಿಂಗ್ ಆರಂಭಸಿದ ಟೀಂ ಇಂಡಿಯಾ ಆರಂಭದಲ್ಲಿಯೇ ಮುರಳಿ ವಿಜಯ್ ಹಾಗೂ ಭರವಸೆ ಆಟಗಾರ ಕೆಎಲ್ ರಾಹುಲ್ ಜೋಡಿ ಬಹುಬೇಗನೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕೊಂಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಜೊತೆಗೂಡಿದ ನಾಯಕ ಕೊಹ್ಲಿ ಹಾಗೂ ಪೂಜಾರ ಜೋಡಿ ಆಂಗ್ಲ ಬೌಲರ್ ಗಳನ್ನು ಬೆವರಿಳಿಸಿದರು. [ಮಿಶ್ರಾ ಬದಲಿಗೆ ಜಯಂತ್ ಎಂಟ್ರಿ ಏಕೆ, ಟ್ವಿಟ್ಟರ್ ನಲ್ಲಿ ಪ್ರಶ್ನೆ]

ವಿರಾಟ್ ಟೆಸ್ಟ್ ವೃತ್ತಿ ಬದುಕಿನ 14ನೇ ಶತಕ ಭಾರಿಸಿ ತಂಡಕ್ಕೆ ನೆರವಾದರೆ, ಇನ್ನು ಪೂಜಾರ ತಮ್ಮ 10ನೇ ಶತಕ ಭಾರಿಸಿ ಸಂಭ್ರಮಿಸಿದರು. ಈ ಇಬ್ಬರು ಶತಕಗಳ ನೆರವಿನಿಂದ ಬಾರತ ಮೊದಲನೇ ದಿನ 317 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದೆ. [ಅವಧಿಗೆ ಮುನ್ನ ಪೆವಿಲಿಯನ್ ಗೆ ಆಟಗಾರರನ್ನು ಓಡಿಸಿದ ನಾಯಿ!]

2nd Test: India win toss, elect to bat against England; Jayant Yadav makes debut

ತಂಡದ ಮೊತ್ತ ಕೇವಲ 6 ರನ್ ಗಳಾಗಿದ್ದಾಗ ಬ್ರಾಡ್ ಎಸೆದ ಎರಡನೇ ಓವರ್ ನಲ್ಲಿಯೇ ರಾಹುಲ್ ಸ್ಟೋಕ್ಸ್ ಗೆ ಕ್ಯಾಚಿತ್ತು ಹೊರನಡೆದರು. ಬಳಿಕ ಮುರಳಿ ವಿಜಯ್ ಕೂಡ 20 ರನ್ ಗಳಿಸಿ ಆ್ಯಂಡರ್ಸನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.

ಚೇತೇಶ್ವರ ಪೂಜಾರ 119 ರನ್ ಹಾಗೂ ಅಜಿಂಕ್ಯಾ ರಹಾನೆ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರೆ, ಮುರಳಿ ವಿಜಯ್ 20 ಹಾಗೂ ರಾಹುಲ್ ಖಾತೆ ತೆರೆಯದೆ ಪೇವಿಲಿಯನ್ ಸೇರಿದರು.

ಇನ್ನು ನಾಯಕ ವಿರಾಟ್ ಅಜೇಯ 151 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ರವಿಚಂದ್ರನ್ ಅಶ್ವಿನ್ 1 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಆಡರ್ಸನ್ 3 ವಿಕೆಟ್ ಹಾಗೂ ಬ್ರಾಡ್ 1 ವಿಕೆಟ್ ಪಡೆದಿದ್ದಾರೆ.

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಈ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಜಯಂತ್ ಯಾದವ್ ಅವರಿಗೆ ತಂಡದಲ್ಲಿ ಅವಕಾಶ ನೀಡಿದ್ದು. ಜಯಂತ್ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ.

ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಅವರ ಬದಲಿಗೆ ಜಯಂತ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಆರಂಭಿಕ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಅವರ ಬದಲಿಗೆ ಕೆಎಲ್ ರಾಹುಲ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

2nd Test: India win toss, elect to bat against England; Jayant Yadav makes debut

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Recovering from early jolts, India scored 317/4 at stumps on the opening day of the second Test against England at the ACA-VDCA Cricket Stadium here on Wednesday.
Please Wait while comments are loading...