ಭಾರತ ವಿರುದ್ಧ ಅಮೆರಿಕದಲ್ಲಿ ಟಿ20 ಸರಣಿ ಗೆದ್ದ ವೆಸ್ಟ್ ಇಂಡೀಸ್

Posted By:
Subscribe to Oneindia Kannada

ಫೋರ್ಟ್ ಲಾರ್ಡಾರ್ ಡೇಲ್(ಯುಎಸ್ಎ), ಆಗಸ್ಟ್ 28: ಅಮೆರಿಕದ ಪ್ಲೋರಿಡಾದಲ್ಲಿ ನಡೆದ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯನ್ನು ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ವಶಪಡಿಸಿಕೊಂಡಿದೆ. ಭಾರತದ ವಿರುದ್ಧದ ಎರಡನೇ ಪಂದ್ಯ ಮಳೆಗೆ ಆಹುತಿಯಾದ ಹಿನ್ನೆಲೆಯಲ್ಲಿ ಎರಡು ಪಂದ್ಯಗಳ ಟಿ20 ಸರಣಿಯನ್ನು ಬ್ರಥ್ ವೈಟ್ ಪಡೆ 1-0 ಅಂತರದಿಂದ ಗೆದ್ದುಕೊಂಡಿದೆ.

ಎರಡನೇ ಟಿ20 ಸ್ಕೋರ್ ಕಾರ್ಡ್ | ಮೊದಲ ಪಂದ್ಯದ ಲೈವ್ ವರದಿ

ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ರೋಚಕವಾಗಿ ಜಯಗಳಿಸಿತ್ತು. ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 143 ರನ್ ಗಳಿಸಿ ಆಲೌಟ್ ಆಗಿತ್ತು. ಆಶ್ವಿನ್ ಹಾಗೂ ಅಮಿತ್ ಮಿಶ್ರಾ ಸ್ಪಿನ್ ದಾಳಿಯಿಂದ ವಿಂಡೀಸ್ ರನ್ ವೇಗಕ್ಕೆ ನಿಯಂತ್ರಣ ಬಿದ್ದಿತ್ತು.

ರನ್ ಚೇಸ್ ಆರಂಭಿಸಿದ ರೋಹಿತ್ ಶರ್ಮ 10 ರನ್, ರಹಾನೆ 4 ರನ್ ಗಳಿಸಿದ್ದರು. 2 ಓವರ್ ನ ಅಂತ್ಯಕ್ಕೆ ತಂಡದ ಸ್ಕೋರ್ 15 ಆಗಿದ್ದಾಗ ಜೋರಾಗಿ ಮಳೆ ಸುರಿಯಲಾರಂಭಿಸಿತು.

ಸಾಧ್ಯತೆ ಏನಿತ್ತು?: ಮಳೆಯಿಂದ ಪಂದ್ಯಕ್ಕೆ ಅಡ್ಡಿ ಉಂಟಾಯಿತು. ಕನಿಷ್ಠ 5 ಓವರ್ ಗಳನ್ನಾದರೂ ಆಡಿದರೆ ಮಾತ್ರ ಪಂದ್ಯದ ಫಲಿತಾಂಶ ಲೆಕ್ಕಕ್ಕೆ ಸಿಗಲಿದೆ. ಡಿಎಲ್ ಎಸ್ ನಿಯಮದ ಪ್ರಕಾರ 5 ಓವರ್ ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 27 ರನ್ ಗಳಿಸಿದರೆ ಭಾರತ ಈ ಪಂದ್ಯದಲ್ಲಿ ಜಯಿಸಬಹುದಾಗಿತ್ತು.

ಎರಡನೇ ಪಂದ್ಯದಲ್ಲೂ ವಿಂಡೀಸ್ ಪರ ಚಾರ್ಲ್ಸ್ ಉತ್ತಮ ಆಟವಾಡಿ 25 ಎಸೆತಗಳಲ್ಲಿ 43 ರನ್ ಗಳಿಸಿದರು. ಮೊದಲ ಪಂದ್ಯ ವೆಸ್ಟ್ ಇಂಡೀಸ್ ಪಾಲಾಗಿದ್ದು ನೋಡಿರಬಹುದು. [ಸೆಹ್ವಾಗ್ ಸ್ಟೈಲಲ್ಲಿ ಸೆಂಚುರಿ ಬಾರಿಸಿದ ರಾಹುಲ್ ಗೆ ಬಹುಪರಾಕ್]

ಆದರೆ, ಕಳೆದ ಪಂದ್ಯದ ಶತಕ ವೀರ 7 ರನ್ ಗಳಿಸಿ ಔಟಾದರು. ಉಳಿದಂತೆ ಸ್ಯಾಮುಯಲ್ಸ್ 19, ನಾಯಕ ಬ್ರಥ್ ವೈಟ್ 18 ರನ್ ಗಳಿಸಿದರು. ಅಮಿತ್ ಮಿಶ್ರಾ 3, ಅಶ್ವಿನ್, ಬೂಮ್ರಾ ಹಾಗೂ ಶಮಿ ತಲಾ 2 ವಿಕೆಟ್ ಹಾಗೂ ಭುವನೇಶ್ವರ್ 1 ವಿಕೆಟ್ ಪಡೆದರು.

2nd T20I: Ashwin, Mishra star as bowlers restrict West Indies to 143

ಮೊದಲ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರ ಅಮೋಘ ಶತಕದ ನಡುವೆಯೂ ಭಾರತ ವಿರುದ್ಧ ವೆಸ್ಟ್ ಇಂಡೀಸ್ ಗೆ 1 ರನ್ ಗಳ ರೋಚಕ ಜಯ ಗಳಿಸಿತ್ತು.[ಅಮೆರಿಕದಲ್ಲಿ 'ವಿಶ್ವದಾಖಲೆ' ಬರೆದ ಧೋನಿ]

ಭಾರತ : ಎಂಎಸ್ ಧೋನಿ (ವಿಕೆಟ್ ಕೀಪರ್, ನಾಯಕ), ರೋಹಿತ್ ಶರ್ಮ, ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಆರ್ ಅಶ್ವಿನ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ಭುವನೆಶ್ವರ್ ಕುಮಾರ್.

ವೆಸ್ಟ್ ಇಂಡೀಸ್ : ಕಾರ್ಲೊಸ್ ಬ್ರಥ್ ವೈಟ್ (ನಾಯಕ), ಜಾನ್ಸನ್ ಚಾರ್ಲ್ಸ್, ಆಂಡ್ರೆ ಫ್ಲೆಚರ್(ವಿಕೆಟ್ ಕೀಪರ್), ಇವಿನ್ ಲೂಯಿಸ್, ಮರ್ಲಾನ್ ಸ್ಯಾಮುಯಲ್ಸ್, ಲೆಂಡ್ಲ್ ಸಿಮನ್ಸ್, ಕಿರಾನ್ ಪೊಲ್ಲಾರ್ಡ್, ಆಂಡ್ರೆ ರಸೆಲ್, ಡ್ವಾಯ್ನೆ ಬ್ರಾವೊ, ಸುನಿಲ್ ನರೇನ್, ಸ್ಯಾಮುಯಲ್ ಬದ್ರಿ (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a heartbreak for the fans, the 2nd Twenty20 game between India and West Indies was called off by the umpires due to wet outfield following rain at the Central Broward Regional Park Stadium Turf Ground here on Sunday (August 28).
Please Wait while comments are loading...