ರಾಂಚಿ ಟಿ20: ಶ್ರೀಲಂಕಾ ವಿರುದ್ಧ ಭಾರತಕ್ಕೆ 69 ರನ್ ಗಳಿಂದ ಜಯ

Posted By:
Subscribe to Oneindia Kannada

ರಾಂಚಿ, ಫೆ. 12: ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯ ಗೆದ್ದ ಆತ್ಮವಿಶ್ವಾಸದಿಂದ ಶ್ರೀಲಂಕಾ ತಂಡ ರಾಂಚಿಯಲ್ಲಿ ಕಣಕ್ಕಿಳಿದಿತ್ತು. ಆದರೆ, ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿ 69 ರನ್ ಗಳಿಂದ ಪಂದ್ಯಗೆದ್ದು ಮೂರು ಟಿ20 ಪಂದ್ಯಗಳ ಸರಣಿಯನ್ನು 1-1 ಸಮ ಮಾಡಿಕೊಂಡಿದೆ.

ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಂಡಿಮಾಲ್ ಅವರು ಭಾರತಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದ್ದನ್ನು ಸದುಪಯೋಗ ಪಡಿಸಿಕೊಂಡು ನಿಗದಿತ 20 ಓವರ್ ಗಳಲ್ಲಿ 196/6 ಸ್ಕೋರ್ ಮಾಡಿದೆ. ಲಂಕಾ ಪರ ಪೆರೆರಾ ಹ್ಯಾಟ್ರಿಕ್ ಸಾಧಿಸಿದ್ದು ವಿಶೇಷವಾಗಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೊನೆಗೆ ರನ್ ಗತಿ ಹೆಚ್ಚಿಸಲು ಆಗದೆ ನಿಗದಿತ 20 ಓವರ್ ಗಳಲ್ಲಿ 127/9 ಮಾಡಿ ಸೋಲೊಪ್ಪಿಕೊಂಡಿತು.

ಲೈವ್ ಸ್ಕೋರ್ ಕಾರ್ಡ್ ನೋಡಿ | ಸರಣಿ ಫೋಟೋ ಗ್ಯಾಲರಿ

ಶ್ರೀಲಂಕಾ ರನ್ ಚೇಸ್: 20 ಓವರ್ ಗಳಲ್ಲಿ 127/9 ಶ್ರೀಲಂಕಾ ವಿರುದ್ಧ ಭಾರತಕ್ಕೆ 69 ರನ್ ಗಳಿಂದ ಜಯ.
* ಆರಂಭಿಕ ಮೂರು ವಿಕೆಟ್ ಗಳು ಮೊದಲ ಮೂರು ಓವರ್ ಗಳಲ್ಲೇ ಕಳೆದುಕೊಂಡ ಶ್ರೀಲಂಕಾ.
* ಚಾಂಡಿಮಾಲ್ 30 ಎಸೆತಗಳಲ್ಲಿ 31 ರನ್
* ಕಪುಗಡೆರ 27 ಎಸೆತಗಳಲ್ಲಿ 32 ರನ್
* ಸಿರಿವರ್ದನೆ ಅಜೇಯ 20 ಎಸೆತಗಳಲ್ಲಿ 27 ರನ್
* ಶನಕ 18 ಎಸೆತಗಳಲ್ಲಿ 27 ರನ್
* ಭಾರತ ಪರ ಬೌಲಿಂಗ್ ಆರಂಭಿಸಿದ ಆರ್ ಅಶ್ವಿನ್ 4 ಓವರ್ ಗಳಲ್ಲಿ 14/3
* ನೆಹ್ರಾ, ಬೂಮ್ರಾ, ಜಡೇಜಗೆ ತಲಾ 2 ವಿಕೆಟ್ ಲಭಿಸಿತು.

Rohit and Dhawan

ಭಾರತದ ಇನ್ನಿಂಗ್ಸ್: ಶಿಖರ್ ಧವನ್ ಪ್ರಥಮ ಬಾರಿಗೆ ಟಿ20 ಪಂದ್ಯದಲ್ಲಿ ಅರ್ಧಶತಕ ಬಾರಿಸಿದರು.
* ಶಿಖರ್ ಧವನ್ 25 ಎಸೆತಗಳಲ್ಲಿ 51 ರನ್
* ರೋಹಿತ್ ಶರ್ಮ 36 ಎಸೆತಗಳಲ್ಲಿ 43 ರನ್
* ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 27 ರನ್
* ಸುರೇಶ್ ರೈನಾ 19 ಎಸೆತಗಳಲ್ಲಿ 30 ರನ್
* ಶ್ರೀಲಂಕಾ ಪರ ಥಿಸರಾ ಪೆರೆರಾ ಕೊನೆ ಓವರ್ ನಲ್ಲಿ ಸತತ ಮೂರು ವಿಕೆಟ್(ಪಾಂಡ್ಯ, ರೈನಾ ಹಾಗೂ ಯುವರಾಜ್) ಪಡೆದು 3/33 ಗಳಿಸಿದರು.
* ಪೆರೆರಾ ಪಡೆದ ಹ್ಯಾಟ್ರಿಕ್ ಟಿ20 ಇತಿಹಾಸದಲ್ಲಿ ನಾಲ್ಕನೇ ಹ್ಯಾಟ್ರಿಕ್ ಎನಿಸಿದೆ.

ಶ್ರೀಲಂಕಾ ತಂಡದಲ್ಲಿ ನಿರೋಶನ್ ಡಿಕ್ವೆಲ್ಲಾ ಬದಲಿಗೆ ತಿಲಕರತ್ನೆ ದಿಲ್ಶನ್ ಬಂದಿದ್ದಾರೆ. ಫೆಬ್ರವರಿ 12 ರ ಈ ಪಂದ್ಯಕ್ಕೆ ಭಾರತ ಯಾವುದೇ ಬದಲಾವಣೆ ಇಲ್ಲದೆ ಆಡುತ್ತಿದೆ.

Sri Lanka win toss, send unchanged India to bat

ಪುಣೆಯಲ್ಲಿ ನಡೆದ ಮೊದಲ ಪಂದ್ಯ ಫೆಬ್ರವರಿ 9 (ಮಂಗಳವಾರ) ರಂದು ಟೀಂ ಇಂಡಿಯಾ 101ರನ್ ಗೆ ಸರ್ವಪತನ ಕಂಡಿತ್ತು.

ಹಸಿರು ಪಿಚ್ ನಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿಯನ್ನು ಲಂಕಾ ತಂಡ ತಲುಪಿತ್ತು.

ಮೂರನೇ ಹಾಗೂ ಅಂತಿಮ ಪಂದ್ಯ ವಿಶಾಖಪಟ್ಟಣಂ (ಫೆಬ್ರವರಿ 14) ನಲ್ಲಿ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India regained their winning touch with a spectacular all-round display as they thrashed Sri Lanka by 69 runs in the second Twenty20 International to level the three-match series here tonight (February 12).
Please Wait while comments are loading...