ಆಸ್ಟ್ರೇಲಿಯಾ ವಿರುದ್ಧ 2-0 ಅಂತರದಲ್ಲಿ ಟಿ20 ಸರಣಿ ಗೆದ್ದ ಭಾರತ

Posted By:
Subscribe to Oneindia Kannada

ಮೆಲ್ಬೋರ್ನ್, ಜ.29: ಭಾರತ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಗೆಲ್ಲಲು ಆಸ್ಟ್ರೇಲಿಯಾಕ್ಕೆ 185 ರನ್ ಟಾರ್ಗೆಟ್ ನೀಡಲಾಗಿತ್ತು. ಆದರೆ, ಆಸ್ಟ್ರೇಲಿಯಾ ರನ್ ಚೇಸ್ ನಲ್ಲಿ ಉತ್ತಮ ಆರಂಭ ಪಡೆದರೂ 20 ಓವರ್ ಗಳಲ್ಲಿ 157/8 ಸ್ಕೋರ್ ಮಾಡಿ, ಸೊಲೊಪ್ಪಿಕೊಂಡಿತು. ಮೆಲ್ಬೋರ್ನ್ ಟಿ20 ಪಂದ್ಯ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಯನ್ನು ಧೋನಿ ಪಡೆ 2-0 ಅಂತರದಿಂದ ಗೆದ್ದುಕೊಂಡಿದೆ.

ರೋಹಿತ್ ಹಾಗೂ ಶಿಖರ್ ಧವನ್ ಜೋಡಿ ಆರಂಭದಿಂದಲೂ 7 ರನ್ ಸರಾಸರಿಯಲ್ಲಿ ಸ್ಕೋರ್ ಮಾಡುತ್ತಿದ್ದು, 6 ಓವರ್ ಗಳಲ್ಲೇ ತಂಡದ ಮೊತ್ತವನ್ನು 50 ರನ್ ದಾಟಿಸಿದರು. ಇದೇ ಲಯದಲ್ಲಿ ಮುಂದುವರೆದು 10 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 85ರನ್ ಸ್ಕೋರ್ ಮಾಡಿದ್ದಾರೆ. ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 3/184ಸ್ಕೋರ್ ಮಾಡಿದೆ. ಧೋನಿ 14ರನ್, ವಿರಾಟ್ ಕೊಹ್ಲಿ ಅಜೇಯ 59 ರನ್, ರೋಹಿತ್ ಶರ್ಮ 60ರನ್ ಗಳಿಸಿದರು. ಶಿಖರ್ ಧವನ್ 42ರನ್ ಬಾರಿಸಿದರು.

ಪಂದ್ಯದ ಸ್ಕೋರ್ ಕಾರ್ಡ್

ಶುಕ್ರವಾರ (ಜನವರಿ 29) ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ) ದಲ್ಲಿ ನಡೆದಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲ್ಯಾಂಡ್, ಆಂಡ್ರ್ಯೂ ಟೈ ಹಾಗೂ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಅವರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

2nd T20I

ಗಾಯಗೊಂಡು ಮೊದಲ ಪಂದ್ಯದಿಂದ ಹೊರಗುಳಿದಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಈ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. [ಟೆನಿಸ್ ನೋಡಲು ಹೋದ ಕೊಹ್ಲಿ-ಯುವಿ ಸೆಲ್ಫಿ]

ಇದೇ ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಭಾರತದ ಮಹಿಳೆಯರ ತಂಡ ಗೆಲ್ಲುವ ಮೂಲಕ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.[ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಭಾರತದ ಮಹಿಳೆಯರ ತಂಡ]

Rohith Sharma

ಆಸ್ಟ್ರೇಲಿಯಾ XI: ಅರೋನ್ ಫಿಂಚ್ (ನಾಯಕ), ಗ್ಲೆನ್ ಮ್ಯಾಕ್ಸ್ ವೆಲ್, ಶಾನ್ ಮಾರ್ಷ್, ಕ್ರಿಸ್ ಲಿನ್, ಜೇಮ್ಸ್ ಫಾಲ್ಕ್ನರ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ನಾಥನ್ ಲಿಯಾನ್, ಜಾನ್ ಹೇಸ್ಟಿಂಗ್ಸ್, ಸ್ಕಾಟ್ ಬೋಲ್ಯಾಂಡ್, ಆಂಡ್ರ್ಯೂ ಟೈ, ಶೇನ್ ವಾಟ್ಸನ್. [ಟಿ20 ಮಾದರಿಯಲ್ಲಿ ಏಷ್ಯಾಕಪ್, ಸಂಪೂರ್ಣ ವೇಳಾಪಟ್ಟಿ]

ಭಾರತ: ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್ ಅಶ್ವಿನ್, ಜಸ್ಪ್ರೀತ್ ಬೂಮ್ರಾ, ಅಶೀಶ್ ನೆಹ್ರಾ

ಮೂರನೇ ಹಾಗೂ ಅಂತಿಮ ಟಿ20ಐ ಪಂದ್ಯ ಸಿಡ್ನಿಯಲ್ಲಿ ಜನವರಿ 31 (ಭಾನುವಾರ) 2.08 ISTಗೆ ಆರಂಭವಾಗುತ್ತದೆ (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Australia captain Aaron Finch won the toss again and as in the previous game opted to field first in the 2nd Twenty20 International against India at the Melbourne Cricket Ground (MCG) here on Friday (January 29).
Please Wait while comments are loading...