ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಿಂಬಾಬ್ವೆ ವಿರುದ್ಧ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ

By Mahesh

ಹರಾರೆ, ಜುಲೈ 12: ಸತತವಾಗಿ ಎರಡು ಪಂದ್ಯಗಳಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ನಾಯಕ ಎಲ್ಟಾನ್ ಚಿಂಗುಬುರಾ ಅವರು ಸತತ ಎರಡು ಪಂದ್ಯಗಳನ್ನು ಸೋತು ಸರಣಿಯನ್ನು ಪ್ರವಾಸಿ ಟೀಂ ಇಂಡಿಯಾ ಕೈಗಿತ್ತಿದ್ದಾರೆ. ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಒಡ್ಡಿದ್ದ 272 ರನ್ ಗುರಿಯನ್ನು ಬೆನ್ನು ಹತ್ತಿದ್ದ ಜಿಂಬಾಬ್ವೆ ತಂಡ 49 ಓವರ್ ಗಳಲ್ಲಿ 209 ರನ್ ಗಳಿಸಿ ಸೋಲೊಪ್ಪಿಕೊಂಡಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ 2-0 ಅಂತರದಿಂದ ತನ್ನದಾಗಿಸಿಕೊಂಡಿದೆ.

ಮೂರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಶುಕ್ರವಾರ ಜುಲೈ 10ರಂದು ನಡೆಯಿತು. ಭಾರತ ತಂಡ ಗೆಲ್ಲಲು ತಿಣುಕಾಡಿ ಪ್ರಯಾಸದ ಜಯ ಗಳಿಸಿತು. [ಪೂರ್ಣ ವರದಿ ಇಲ್ಲಿ ಓದಿ]

ಜಿಂಬಾಬ್ವೆ ಪರ ಚಿಭಾಭಾ 72 ರನ್ ಹಾಗೂ ಮುತುಮ್ಬಾಮಿ 32 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಹೆಚ್ಚು ಪ್ರತಿರೋಧ ಒಡ್ಡಲಿಲ್ಲ. ಭಾರತದ ಪರ ಭುವನೇಶ್ವರ್ ಕುಮಾರ್ 33 ರನ್ನಿತ್ತು 4 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು. ಮುರಳಿ ವಿಜಯ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.

ಸರಣಿಗೆ ಸಂಪೂರ್ಣ ಗೈಡ್</a>| <a class=ಹೊಸ ನಿಯಮಗಳು" />ಸರಣಿಗೆ ಸಂಪೂರ್ಣ ಗೈಡ್| ಹೊಸ ನಿಯಮಗಳು

ಭಾರತದ ಇನ್ನಿಂಗ್ಸ್: ರಹಾನೆ ಅಂಡ್ ಟೀಂ ಮತ್ತೊಮ್ಮೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿತು. ರಾಬಿನ್ ಉತ್ತಪ್ಪ ಓಪನಿಂಗ್ ಬಂದರೆ ಚೆನ್ನ ಎಂಬುದು ಅಭಿಮಾನಿಗಳ ಆಸೆ ಇತ್ತು. ಅದರೆ, ಎಂದಿನಂತೆ ರಹಾನೆ ಓಪನಿಂಗ್ ಗೆ ಬಂದರು. 63ರನ್ ಗಳಿಸಿ ನಾಯಕ ಅಜಿಂಕ್ಯ ರಹಾನೆ ಔಟಾದರು.

Team India


ಮುರಳಿ ವಿಜಯ್ ಚೊಚ್ಚಲ ಅರ್ಧಶತಕ (72 ರನ್, 95 ಎಸೆತ, 1x4,2x6) ದಾಖಲಿಸಿ ಪೆವಿಲಿಯನ್ ಸೇರಿದರು. ನಂತರ ಅಂಬಟಿ ರಾಯುಡು 41 ರನ್ ಗಳಿಸಿದರೆ, ಕೊನೆ ಹಂತದಲ್ಲಿ ಸ್ಟುವರ್ಟ್ ಬಿನ್ನಿ 16 ಎಸೆತಗಳಲ್ಲಿ 25ರನ್ ಗಳಿಸಿ ಟೀಂ ಇಂಡಿಯಾ ಮೊತ್ತವನ್ನು 50 ಓವರ್ಸ್ ನಲ್ಲಿ 271/8 ಸ್ಕೋರಿಗೇರಿಸಿದರು. ಜಿಂಬಾಬ್ವೆ ಪರ ಮಡ್ಜಿವಾ 49 ರನ್ನಿತ್ತು 4 ವಿಕೆಟ್ ಕಿತ್ತು ಮಿಂಚಿದರು.

ಟಾಸ್ ವರದಿ: ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜಿಂಬಾಬ್ವೆ ತಂಡದಲ್ಲಿ ತಿನಾಶೆ ಪಯ್ಯಂಗರ ಬದಲಿಗೆ ನೆವಿಲ್ ಮಡ್ಜಿವಾ ತಂಡ ಸೇರಿದ್ದಾರೆ. ಜಿಂಬಾಬ್ವೆ ನಾಯಕ ಎಲ್ಟಾನ್ ಚಿಂಗುಂಬುರಾ ಅವರು ಭಾರತ ವಿರುದ್ಧದ ಸತತ ಎರಡನೇ ಬಾರಿ ಟಾಸ್ ಗೆದ್ದಿದ್ದಾರೆ. ಮೊದಲ ಪಂದ್ಯದಂತೆ ಭಾನುವಾರದ ಎರಡನೇ ಪಂದ್ಯದಲ್ಲೂ ಮೊದಲಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Ajinkya Rahane

2013ರಲ್ಲಿ ನಡೆದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ತಂಡ 5-0 ಅಂತರದ ಸರಣಿ ಜಯ ದಾಖಲಿಸಿತ್ತು. ಟೆನ್ ಸ್ಫೋರ್ಟ್ಸ್/ ಟೆನ್ ಕ್ರಿಕೆಟ್ ನಲ್ಲಿ ಎಲ್ಲಾ ಪಂದ್ಯಗಳು ಪ್ರಸಾರವಾಗಲಿದೆ.

ಭಾರತ: ಅಜಿಂಕ್ಯ ರಹಾನೆ (ನಾಯಕ), ಮುರಳಿ ವಿಜಯ್, ಅಂಬಟಿ ರಾಯುಡು, ಮನೋಜ್ ತಿವಾರಿ, ಕೇದಾರ್ ಜಾಧವ್, ರಾಬಿನ್ ಉತ್ತಪ್ಪ, ಹರ್ಭಜನ್ ಸಿಂಗ್, ಅಕ್ಷರ್ ಪಟೇಲ್, ಧವಳ್ ಕುಲಕರ್ಣಿ, ಸ್ಟುವರ್ಟ್ ಬಿನ್ನಿ, ಭುವನೇಶ್ವರ್ ಕುಮಾರ್

ಜಿಂಬಾಬ್ವೆ: ಎಲ್ಟಾನ್ ಚಿಗುಂಬರಾ (ನಾಯಕ), ಸೀನ್ ವಿಲಿಯಮ್ಸ್, ಚಾಮು ಚಿಭಾಭಾ, ಗ್ರೀಮ್ ಕ್ರೇಮೆರ್, ನೆವಿಲ್ ಮಡ್ಜಿವಾ, ಹ್ಯಾಮಿಲ್ಟನ್ ಮಸಕಡ್ಜ, ರಿಚ್ಮಂಡ್ ಮುತುಮ್ಬಾಮಿ (ವಿಕೆಟ್ ಕೀಪರ್), ವುಸಿ ಸಿಬಾಂಡಾ, ಸಿಕಂದರ್ ರಾಜ, ಡೋನಾಲ್ಡ್ ತಿರಿಪಾನೋ, ಬ್ರಿಅಯನ್ ವಿಟೋರಿ.

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X