2ನೇ ಏಕದಿನ ಪಂದ್ಯ: ಭಾರತಕ್ಕೆ 6 ರನ್ ಗಳ ಸೋಲು!

Written By: Ramesh
Subscribe to Oneindia Kannada

ನವದೆಹಲಿ, ಅಕ್ಟೋಬರ್. 20 : ವಿಲಿಯಮ್ಸನ್ ಪಡೆಯ ಪ್ರಭಾವಿ ಬೌಲಿಂಗ್ ದಾಳಿಗೆ ಭಾರತ 236 ರನ್ ಗಳಿಗೆ ಸರ್ವಪತನ ಕಂಡಿದೆ. ಇದರಿಂದ ನ್ಯೂಜಿಲೆಂಡ್ 6 ರನ್ ಗಳ ಗೆಲುವಿನ ನಗೆ ಬೀರಿತು.

[ನ್ಯೂಜಿಲೆಂಡ್- ಭಾರತ ಟೆಸ್ಟ್, ಏಕದಿನ ಸರಣಿ ವೇಳಾಪಟ್ಟಿ]

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 243 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ 49.3 ಓವರ್ ಗಳಲ್ಲಿ 236ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 6 ರನ್ ಗಳಿಂದ ಕಿವೀಸ್ ಗೆ ಶರಣಾಯಿತು. ಇದರಿಂದ ನ್ಯೂಜಿಲೆಂಡ್ ಸರಣಿಯಲ್ಲಿ 1-1 ಸಮಬಲ ಸಾಧಿಸಿತು.

Newzeland

ನ್ಯೂಜಿಲೆಂಡ್ ವೇಗಿಗಳ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಭಾರತದ ಆರಂಭದದಿಂದಲೂ ರನ್ ಗಳ ಬರ ಎದುರಿಸಿತು. ಕೇದರ್ ಜಾಧವ್ (41) ರನ್ ಭಾರಿಸಿ ಟೀಂ ಇಂಡಿಯಾದ ಪರ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿದರು.

ನಾಯಕ ಧೋನಿ (39 ರನ್), ರಹಾನೆ (28 ರನ್) ಹಾಗೂ ಮಧ್ಯಮ ಕ್ರಮಾಂಕದ ಆಲ್ ರೌಂಡ್ ಆಟಗಾರ ಹಾರ್ಧಿಕ್ ಪಾಂಡ್ಯಾ (36 ರನ್) ಕೊಂಚ ಪ್ರತಿರೋಧ ಒಡ್ಡಿದರಾದರೂ, ನ್ಯೂಜಿಲೆಂಡ್ ಬೌಲರ್ ಗಳ ಎದುರು ಮಂಕಾದರು.

ಅಂತಿಮವಾಗಿ ಭಾರತ 49.3 ಓವರ್ ಗಳಲ್ಲಿ 236 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ ಪ್ರವಾಸಿ ವಿಲಿಯಮ್ಸನ್ ಪಡೆ 6 ರನ್ ಗಳ ರೋಚಕ ಜಯಸಾಧಿಸಿತು.

ನ್ಯೂಜಿಲೆಂಡ್ ಪರ ಸೌಥಿ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಬೌಲ್ಟ್ ಹಾಗೂ ಗಪ್ಟಿಲ್ ತಲಾ 2 ವಿಕೆಟ್ ಪಡೆದರು. ಇನ್ನು ಹೆನ್ರಿ, ಸ್ಯಾಂಟ್ನರ್ ತಲಾ 1 ವಿಕೆಟ್ ಪಡೆದರು.

ನ್ಯೂಜಿಲೆಂಡ್ ಪರ ಭರ್ಜರಿ ಶತಕ ಸಿಡಿಸಿದ ನಾಯಕ ಕೇನ್ ವಿಲಿಯಮ್ಸನ್ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು. ಕಿವೀಸ್ ಪಡೆ 2ನೇ ಪಂದ್ಯ ಗೆಲ್ಲುವ ಮೂಲಕ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿತು.

ನ್ಯೂಜಿಲೆಂಡ್ ಭಾರತಕ್ಕೆ 243 ರನ್ ಗಳ ಟಾರ್ಗೆಟ್ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 242 ರನ್ ಗಳಿಸಿದೆ. ಲಾಥಮ್ 46, ನಾಯಕ ವಿಲಿಮ್ಸನ್ 118 ರನ್ ಭಾರಿಸಿ ತಂಡಕ್ಕೆ ನೆರವಾದರು. ಇನ್ನುಳಿದ ಆಟಗಾರರು ಭಾರತದ ಬೌಲರ್ಸ್ ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು.

ಭಾರತ ಪರ ಜಸ್ಪ್ರಿತ್ ಬೂಮ್ರಾ 35 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸದರು. ಇನ್ನು ಅಮಿತ್ ಮಿಶ್ರಾ ತಮ್ಮ ಸ್ಪಿನ್ ಕೈಚಳಕದಿಂದ 60 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಜಾದವ್, ಹಾರ್ದಿಕ್ ತಲಾ 1 ವಿಕೆಟ್ ಪಡೆದರು.

India

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಮ್ಸನ್ ಭರ್ಜರಿ ಶತಕ ಭಾರಿಸಿದರು. 110 ಎಸೆತಗಳಲ್ಲಿ 102 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಆರಂಭದಲ್ಲಿಯೇ ಮಾರ್ಟಿನ್ ಗುಪ್ತಿಲ್ (0) ಅವರ ವಿಕೆಟ್ ಕಳೆದುಕೊಂಡಿದೆ. ಲಾಥಮ್(46) ಕೇದರ್ ಜಾದವ್ ಅವರ ಬೌಲಿಂಗ್ ನಲ್ಲಿ ಎಬಿ ಬಲೆಗೆ ಬಿದ್ದರು. ರಾಸ್ ಟೇಲರ್ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು.

ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯದ ಟಾಸ್ ಗೆದ್ದ ಭಾರತಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಭಾರತ ತಂಡದಲ್ಲಿ ನಾಯಕ ಮಹೇಂದ್ರ ಸಿಂಗ್ ದೋನಿ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಮೊದಲ ಏಕದನ ಪಂದ್ಯದಲ್ಲಿ ಆಡಿದ ಆಟಗಾರರು 2ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಪ್ರವಾಸಿ ನ್ಯೂಜಿಲೆಂಡ್ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ.

ನೀಶಮ್, ಬ್ರೇಸ್ ವೆಲ್, ಮತ್ತು ಇಶನ್ ಸೋಧಿ ಬದಲಿಗೆ ಟ್ರೆಂಟ್ ಬೋಲ್ಟ್ ಹೆನ್ರಿ ಹಾಗೂ ಆಂಟನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ತಂಡ ಇಂತಿದೆ:

ಭಾರತ: ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಎಂಎಸ್ ಧೋನಿ(ನಾಯಕ), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಜಸ್ತ್ರೀಪ್ ಬೂಮ್ರಾ, ಉಮೇಶ್ ಯಾದವ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian captain Mahendra Singh Dhoni won his second consecutive toss and opted to bowl first again in the 2nd One Day International here at the Feroz Shah Kotla today (October 20).
Please Wait while comments are loading...