ಭಾರತಕ್ಕೆ ಮತ್ತೆ ಸೋಲು, ಸಂಕ್ರಾಂತಿ ದಿನವೂ ಬೆಲ್ಲವಿಲ್ಲ

Subscribe to Oneindia Kannada

ಬ್ರಿಸ್ಬೇನ್, ಜನವರಿ, 15: ಸಂಕ್ರಾಂತಿ ದಿನ ಭಾರತಕ್ಕೆ ಬೆಲ್ಲವಿಲ್ಲ. ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಭಾರತಕ್ಕೆ ಸೋಲಾಗಿದೆ. ಭಾರತ ನೀಡಿದ್ದ 309 ರನ್ ಗುರಿಯನ್ನು ಆಸ್ಟ್ರೇಲಿಯಾ ಅನಾಯಾಸವಾಗಿ ಮುಟ್ಟಿ ವಿಜಯದ ಕಹಳೆ ಮೊಳಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ರೋಹಿತ್ ಶರ್ಮಾ ಶತಕದ ನೆರವಿನಿಂದ 308 ರನ್ ಮೊತ್ತವನ್ನೇ ಕಲೆಹಾಕಿತ್ತು. ಆದರೆ ಆರಂಭಿಕ ಪಿಂಚ್, ಮಾರ್ಶ್ ಮತ್ತು ಬೈಲಿ ಅರ್ಧಶತಕಗಳು ಪಂದ್ಯವನ್ನು ಭಾರತದಿಂದ ಕಸಿದುಕೊಂಡಿತು. ತಂಡಕ್ಕೆ ಮರಳಿದ ಇಶಾಂತ್ ಶರ್ಮಾ ಸಹ ಬೌಲಿಂಗ್ ನಲ್ಲಿ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. [ಪರ್ತ್ ನಲ್ಲಿ ರೋಹಿತ್ ಶರ್ಮಾ ಬರೆದ ದಾಖಲೆಗಳಿವು]

ಸ್ಕೋರ್ ಬೋರ್ಡ್

india

ಹಿಂದಿನ ಪಂದ್ಯದಲ್ಲಿ ಅಜೇಯ ಶತಕ ಗಳಿಸಿದ್ದ ರೋಹಿತ್ ಶರ್ಮಾ ಇಂದು ಸಹ ಶತಕದ ಕೊಡುಗೆ ನೀಡಿದರು. 124 ರನ್ ಗಳಿಸಿದ ಶರ್ಮಾ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು. ಆದರೆ ಭಾರತದ ಬೌಲರ್ ಗಳ ದಾಳಿ ಸಮರ್ಪಕವಾಗಿರಲಿಲ್ಲ.

ಸಂಘಟಿತ ಹೋರಾಟ ನೀಡಿದ ಆಸ್ಟ್ರೇಲಿಯಾ 5 ಪಂದ್ಯಗಳ ಸರಣಿಯಲ್ಲಿ 2-0ದ ಮುನ್ನಡೆ ಸಾಧಿಸಿತು. ಶತಕ ದಾಖಲಿಸಿದ ರೋಹಿತ್ ಶರ್ಮಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India captain MS Dhoni won the toss again and opted to bat first against Australia in the 2nd One Day International on a hot afternoon here on Friday (January 15). India made one change, bringing in Ishant Sharma for Bhuvneshwar Kumar.
Please Wait while comments are loading...