ವಿಂಡೀಸ್ ವಿರುದ್ಧ ಟೀಂ ಇಂಡಿಯಾಕ್ಕೆ 'ವಿರಾಟ್' ಜಯ

Posted By:
Subscribe to Oneindia Kannada

ನಾರ್ತ್​ಸೌಂಡ್(ಆಂಟಿಗ್ವಾ), ಜುಲೈ 25: ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಐತಿಹಾಸಿಕ ಜಯ ದಾಖಲಿಸಿದೆ. ಇನ್ನಿಂಗ್ಸ್ ಹಾಗೂ 92 ರನ್ ಗಳ ಅತಿದೊಡ್ಡ ಜಯ ಸಾಧಿಸಿದ ಟೀಂ ಇಂಡಿಯಾಕ್ಕೆ ಆರ್ ಅಶ್ವಿನ್ ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚಿ ತಮ್ಮ ಕೊಡುಗೆ ನೀಡಿದರು.

ಪಂದ್ಯದ ಸ್ಕೋರ್ ಕಾರ್ಡ್

ಏಷ್ಯಾದ ಹೊರಗಿನ ಪಿಚ್ ಗಳಲ್ಲಿ ಭಾರತ ಸಾಧಿಸಿರುವ ಅತಿದೊಡ್ಡ ಗೆಲುವು ಇದಾಗಿದೆ. ಈ ಗೆಲುವಿನ ಮೂಲಕ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಪಡೆದುಕೊಂಡಿದೆ.

ನಾರ್ತ್​ಸೌಂಡ್​ನ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 3ನೇ ದಿನವಾದ ಶನಿವಾರ ಭೋಜನ ವಿರಾಮದ ವೇಳೆಗೆ 3 ವಿಕೆಟ್​ಗೆ 90 ರನ್ ಬಾರಿಸಿದ್ದ ವೆಸ್ಟ್ ಇಂಡೀಸ್, ದಿನದ ಅಂತಿಮ ಅವಧಿಯಲ್ಲಿ 243 ರನ್​ಗೆ ಆಲೌಟ್ ಆಗಿ ಫಾಲೋ ಆನ್ ಎದುರಿಸಿತು. 323 ರನ್ ಮುನ್ನಡೆ ಪಡೆದ ಟೀಂ ಇಂಡಿಯಾದ ಬೌಲರ್ ಗಳು ಪಿಚ್ ನ ಲಾಭ ಪಡೆದು ನಾಲ್ಕನೇ ದಿನವಾದ ಭಾನುವಾರ ವಿಂಡೀಸ್ ತಂಡ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳದಂತೆ ನೋಡಿಕೊಂಡರು.

Ashwin stars with bat and ball as India record biggest Test win outside AsiaAshwin stars with bat and ball as India record biggest Test win outside Asia

ದಿಢೀರ್ ಕುಸಿತ: ಫಾಲೋ ಆನ್ ಪಡೆದು 1 ವಿಕೆಟ್​ಗೆ 21 ರನ್ ಗಳಿಸಿದ್ದ ವಿಂಡೀಸ್ ತಂಡ, ನಾಲ್ಕನೇ ದಿನದ ಭೋಜನ ವಿರಾಮದ ವೇಳೆಗೆ 30 ಓವರ್​ಗಳಲ್ಲಿ 2 ವಿಕೆಟ್​ಗೆ 76 ರನ್ ಗಳಿಸಿತ್ತು. ಆದರೆ, 88/2 ಗಳಿಸಿದ್ದ ವಿಂಡೀಸ್ ತಂಡ 132/8ಕ್ಕೆ ಕುಸಿಯಿತು.

ಜೊತೆಯಾಟ: ಕಾರ್ಲೊಸ್ ಬ್ರಥ್ ವೈಟ್ 51ರನ್ ಹಾಗೂ ದೇವೇಂದ್ರ ಬಿಶೂ 45 ರನ್ ಗಳಿಸಿ 9 ನೇ ವಿಕೆಟ್ ಗೆ 95 ರನ್ ಗಳ ಜೊತೆಯಾಟ ದಾಖಲಿಸಿ ಅಚ್ಚರಿ ಮೂಡಿಸಿದರು.

Ashwin stars with bat and ball as India record biggest Test win outside Asia

ಭಾರತ ಪ್ರ. ಇನಿಂಗ್ಸ್: 8 ವಿಕೆಟ್​ಗೆ 566 ಡಿ.
ವೆಸ್ಟ್ ಇಂಡೀಸ್ ಪ್ರಥಮ ಇನಿಂಗ್ಸ್:

90.2 ಓವರ್​ಗಳಲ್ಲಿ 243 (ಡ್ರೋವಿಚ್ 57 ಅಜೇಯ, ಹೋಲ್ಡರ್ 37, ಮೊಹಮ್ಮದ್ ಶಮಿ 4/66, ಉಮೇಶ್ ಯಾದವ್ 4/41)
231 ಆಲೌಟ್, 78 ಓವರ್ಸ್ ( ಸ್ಯಾಮುಯಲ್ಸ್ 50, ಕಾರ್ಲೊಸ್ ಬ್ರಥ್ ವೈಟ್ 51, ಬಿಶೂ 45, ಆರ್ ಅಶ್ವಿನ್ 7/83)

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's supremacy remained unrivalled as they rode on Ravichandran Ashwin's 7/83 to outplay the West Indies by an innings and 92 runs, their biggest win outside Asia, in a lopsided first cricket Test to take a 1-0 lead in the four-match series here on Sunday(July 24).
Please Wait while comments are loading...