1st ಟೆಸ್ಟ್ : ಕೊಹ್ಲಿ -ಧವನ್ ಜೊತೆಯಾಟ, ವಿಂಡೀಸ್ ಗೆ ಪೀಕಲಾಟ

Posted By:
Subscribe to Oneindia Kannada

ಆಂಟಿಗ್ವಾ, ಜುಲೈ 21: ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಿನ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಜುಲೈ 21ರಂದು ಆರಂಭವಾಗಿದೆ. ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಗುರುವಾರ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್

ಆರಂಭಿಕ ಆಘಾತ ಅನುಭವಿಸಿದ ಭಾರತ ಮುರಳಿ ವಿಜಯ್ (7) ವಿಕೆಟ್ ಕಳೆದುಕೊಂಡಿದೆ. ನಂತರ 16 ರನ್ ಗಳಿಸಿ ಚೇತೇಶ್ವರ್ ಪೂಜಾರಾ ವಿಕೆಟ್ ಒಪ್ಪಿಸಿದ್ದಾರೆ. ಆರಂಭಿಕ ಆಟಗಾರ ಶಿಖರ್ ಧವನ್ ಆಕರ್ಷಕ ಅರ್ಧಶತಕ ಬಾರಿಸಿದ್ದಾರೆ. ಕೊಹ್ಲಿ ಹಾಗೂ ಧವನ್ ತಲಾ ಅರ್ಧಶತಕ ಬಾರಿಸಿ ಮೂರನೆ ವಿಕೆಟ್ ಗೆ ನೂರು ರನ್ ಕಲೆ ಹಾಕಿದ್ದಾರೆ. 84 ರನ್ ಗಳಿಸಿ ಶಿಖರ್ ಧವನ್ ಔಟ್ ಆಗಿದ್ದಾರೆ.

ಮೊದಲ ಟೆಸ್ಟ್ ಪಂದ್ಯಕ್ಕೆ ಕರ್ನಾಟಕದ ಆರಂಭಿಕ ಆಟಗಾರ ಲೋಕೇಶ್ ರಾಹುಲ್ ಬದಲಿಗೆ ದೆಹಲಿಯ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಟೀಂ ಇಂಡಿಯಾ ಐದು ಬೌಲರ್ ಗಳನ್ನು ಕಣಕ್ಕಿಳಿಸುತ್ತಿದೆ. [ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ವೈಟ್ ವಾಶ್ ಮಾಡ್ತೇವೆ : ರೈನಾ]

1st Test: Virat Kohli wins toss, India opt to bat against West Indies

ಇಶಾಂತ್ ಶರ್ಮ, ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ ವೇಗಿಗಳಾಗಿದ್ದಾರೆ. ಸ್ಪಿನ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್, ಅಮಿತ್ ಮಿಶ್ರಾ ಇದ್ದಾರೆ. [ಮೊದಲ ಪಂದ್ಯ: ಕನ್ನಡಿಗ ರಾಹುಲ್ ಗೆ ಅನ್ಯಾಯ]

ಕಳೆದ ಬಾರಿ 1-0 ಅಂತರದಲ್ಲಿ ಮೂರು ಪಂದ್ಯಗಳ ಸರಣಿಯನ್ನು ಕೆರಿಬಿಯನ್ ದ್ವೀಪದಲ್ಲಿ ಟೀಂ ಇಂಡಿಯಾ ವಿಜಯ ಪತಾಕೆ ಹಾರಿಸಿತ್ತು. ಈ ಬಾರಿ ಅನಿಲ್ ಕುಂಬ್ಳೆ ಅವರು ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎರಡನೇ ಟೆಸ್ಟ್ ಪಂದ್ಯ ಜುಲೈ 30ರಂದು ಕಿಂಗ್ಸ್ ಟನ್ ನಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ಟೆನ್ ಸ್ಫೋರ್ಟ್ಸ್ ನೆಟ್ವರ್ಕ್ ನಲ್ಲಿ ಪ್ರಸಾರವಾಗಲಿದೆ.

ಭಾರತ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್) ಆರ್ ಅಶ್ವಿನ್, ಅಮಿತ್ ಮಿಶ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮ.

ವೆಸ್ಟ್ ಇಂಡೀಸ್ :
ಜಾಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರಥ್ ವೈಟ್, ರಾಜೇಂದ್ರ ಚಂದ್ರಿಕಾ, ಡರೇನ್ ಬ್ರಾವೊ, ಮರ್ಲಾನ್ ಸ್ಯಾಮುಯಲ್ಸ್, ಜೆರಮಿ ಬ್ಲಾಕ್ ವುಡ್, ರೊಸ್ಟನ್ ಚೇಸ್, ಶಾನ್ ಡೌರಿಚ್(ವಿಕೆಟ್ ಕೀಪರ್), ಕಾರ್ಲೊಸ್ ಬ್ರಥ್ ವೈಟ್, ದೇವೇಂದ್ರ ಬಿಶೂ, ಶಾಶನ್ ಗ್ಯಾಬ್ರಿಯಲ್. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India captain Virat Kohli won the toss and opted to bat first against West Indies in the opening Test of the 4-match series here today (July 21) at the Sir Vivian Richards Stadium.
Please Wait while comments are loading...