ಮೊದಲ ಪಂದ್ಯಕ್ಕೆ ರಾಹುಲ್ ಬದಲಿಗೆ ಧವನ್ ಆಯ್ಕೆ!

Posted By:
Subscribe to Oneindia Kannada

ಆಂಟಿಗುವಾ, ಜುಲೈ 21: ವೆಸ್ಟ್ ಇಂಡೀಸ್ ಪ್ರವಾಸದ ಮೊದಲ ಟೆಸ್ಟ್ ಪಂದ್ಯಕ್ಕೆ ಮೈದಾನ ಸಜ್ಜಾಗಿದೆ. ಗುರುವಾರ ಸಂಜೆ 7.30(IST) ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಕರ್ನಾಟಕದ ಕೆಎಲ್ ರಾಹುಲ್ ಅವರ ಬದಲಿಗೆ ಶಿಖರ್ ಧವನ್ ಅವರಿಗೆ ಚಾನ್ಸ್ ನೀಡಲು ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ಮುರಳಿ ವಿಜಯ್ ಜೊತೆ ಧವನ್ ಕಣಕ್ಕಿಳಿಯಲಿದ್ದಾರೆ.

ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಜುಲೈ 21ರಿಂದ ಆರಂಭವಾಗಲಿದ್ದು, ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿರುವ ಟೆಸ್ಟ್ ಪಂದ್ಯಕ್ಕೆ ಕರ್ನಾಟಕದ ಆರಂಭಿಕ ಆಟಗಾರ ಲೋಕೇಶ್ ರಾಹುಲ್ ಬದಲಿಗೆ ದೆಹಲಿಯ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರನ್ನು ಆಯ್ಕೆ ಮಾಡುವುದಾಗಿ ವಿರಾಟ್ ಕೊಹ್ಲಿ ಸುಳಿವು ನೀಡಿದ್ದಾರೆ. [ವಿರಾಟ್ ಕೊಹ್ಲಿ ಪಡೆಯಿಂದ 49 ದಿನಗಳ ಕಾಲ ವಿಂಡೀಸ್ ಟೂರ್]

1st Test: Virat Kohli picks 'dominating' Shikhar Dhawan over 'solid' KL Rahul

ರಾಹುಲ್ ಗೆ ಅನ್ಯಾಯವಲ್ಲವೇ?: ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಇದುವರೆವಿಗೂ ನಡೆದ ಎರಡು ಅಭ್ಯಾಸ ಪಂದ್ಯದಲ್ಲಿ 50 ಹಾಗೂ 64 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರೂ ಆಡುವ XI ನಲ್ಲಿ ಆಯ್ಕೆ ಕಷ್ಟವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ರಾಹುಲ್ ಹಾಗೂ ಕೊಹ್ಲಿ ಒಟ್ಟಿಗೆ ಆಡಿದ್ದು, ರಾಹುಲ್ ಅವರ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದರು. ಆದರೆ, ಮೊದಲ ಪಂದ್ಯದಲ್ಲಿ ಧವನ್ ಹಾಗೂ ರಾಹುಲ್ ನಡುವೆ ಆಯ್ಕೆ ಪ್ರಶ್ನೆ ಬಂದರೆ ಧವನ್ ಆಯ್ಕೆ ಈ ಪಂದ್ಯಕ್ಕೆ ಸೂಕ್ತ ಎನಿಸುತ್ತದೆ ಎಂದು ಕೊಹ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಧವನ್ ಅವರು 19 ಟೆಸ್ಟ್ ಪಂದ್ಯಗಳನ್ನಾಡಿ 1,308 ರನ್ ಗಳನ್ನು ಗಳಿಸಿದ್ದು,. 4 ಸೆಂಚುರಿ, 2 ಅರ್ಧಶತಕ ಬಾರಿಸಿದ್ದಾರೆ. ಕೆಎಲ್ ರಾಹುಲ್ ಅವರು 5 ಟೆಸ್ಟ್ ಪಂದ್ಯಗಳಲ್ಲಿ 2 ಶತಕಗಳನ್ನು ಗಳಿಸಿ 256 ರನ್ ಗಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India Test captain Virat Kohli has backed the "dominating" Shikhar Dhawan over "solid" KL Rahul to partner Murali Vijay at the top of the order in the first Test against West Indies starting here today (July 21).
Please Wait while comments are loading...