ಪಿಚ್ ಸರಿ ಇಲ್ಲ ಎಂದ ಧೋನಿ, ಕಿಚಾಯಿಸಿದ ಟ್ವೀಟ್ ಲೋಕ

Posted By:
Subscribe to Oneindia Kannada

ಪುಣೆ, ಫೆ. 10: ಶ್ರೀಲಂಕಾದ ಯುವ ತಂಡವನ್ನು ಭಾರತಕ್ಕೆ ಕರೆಸಿಕೊಂಡು ವಿಶ್ವ ಟಿ20 ಸಮರಕ್ಕೆ ತಯಾರಿ ನಡೆಸಲು ಯೋಜಿಸಿದ್ದ ಧೋನಿ ಪಡೆ ಲೆಕ್ಕಾಚಾರ ತಲೆಕೆಳಗಾಗಿದೆ ಅಥವಾ ಆಸ್ಟ್ರೇಲಿಯಾದಲ್ಲಿನ ಸರಣಿ ಗೆಲುವಿನ ಮದ ನೆತ್ತಿಗೇರಿದೆ ಎಂದು ಟ್ವೀಟ್ ಲೋಕ ಕಿಚಾಯಿಸಿದೆ. ಸಾಲದ್ದಕ್ಕೆ ನಾಯಕ ಧೋನಿ ಅವರು ಈ ಪಿಚ್ ನೋಡಿದ್ರೆ ಇಂಗ್ಲೆಂಡಿನ ಪಿಚ್ ಇದ್ದ ಹಾಗೆ ಇದೆ ಭಾರತದ ಪಿಚ್ ನಂತೆ ಇಲ್ಲ ಎಂದಿದ್ದಾರೆ.

ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾದ ನಾಯಕ ದಿನೇಶ್ ಚಾಂಡಿಮಾಲ್ ಅವರು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಹಸಿರು ಪಿಚ್ ನ ಲಾಭ ಪಡೆದುಕೊಂಡರು.

ಪಂದ್ಯದ ಸ್ಕೋರ್ ಕಾರ್ಡ್ | ಸರಣಿ ವೇಳಾಪಟ್ಟಿ | ಚಿತ್ರಗಳು

ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ಆರಂಭವಾಯಿತು. ಧೋನಿ ಅವರ ಲೆಕ್ಕಾಚಾರ ಮೊದಲ ಪಂದ್ಯದಲ್ಲೇ ತಲೆಕೆಳಗಾಯಿತು. ಭಾರತ ನೀಡಿದ ಸುಲಭ ಮೊತ್ತವನ್ನು ಶ್ರೀಲಂಕಾ ಎರಡು ಓವರ್ ಗಳಿಗೂ ಮುಂಚಿತವಾಗಿ ತಲುಪಿ ವಿಜಯೋತ್ಸವ ಆಚರಿಸಿತು. [ಪುಣೆ ಟಿ20: ಭಾರತ ವಿರುದ್ಧ ಶ್ರೀಲಂಕಾಕ್ಕೆ ಜಯ]

ಭಾರತ ಮೊದಲ ಓವರ್ ನಲ್ಲೇ ಆರಂಭಿಕ ಆಘಾತ ಅನುಭವಿಸಿ 5 ರನ್ನಿಗೆ 2 ವಿಕೆಟ್ ಕಳೆದುಕೊಂಡ ಮೇಲೆ ಚೇತರಿಸಿಕೊಳ್ಳಲಿಲ್ಲ. ಹಸಿರು ಪಿಚ್ ನ ಪೂರ್ಣ ಲಾಭ ಪಡೆದ ಲಂಕಾ ತಂಡ ಎದುರಾಳಿ ಭಾರತ ತಂಡವನ್ನು 101 ರನ್ನಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಕೊನೆಗೆ ರನ್ ಚೇಸ್ ಮಾಡಿ 5 ವಿಕೆಟ್ ಗಳ ಅಂತರದ ಜಯ ದಾಖಲಿಸಿತು.

ಪಿಚ್ ಬೌಲರ್ ಗಳಿಗೆ ಸ್ವರ್ಗವಾಯಿತು

ಪಿಚ್ ಬೌಲರ್ ಗಳಿಗೆ ಸ್ವರ್ಗವಾಯಿತು

ಪಿಚ್ ರಿಪೋರ್ಟ್ ನೀಡಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು 'ಸಿಕ್ಸ್ ಹಾಗೂ ಬೌಂಡರಿಗಳ ಸುರಿಮಳೆಯಾಗಲಿದೆ. ಪ್ರೇಕ್ಷಕರು ಹೆಲ್ಮೆಟ್ ಧರಿಸಿ ಕೂರುವುದು ಒಳ್ಳೆಯದು' ಎಂದಿದ್ದರು. ಆದರೆ, ಪಿಚ್ ಬೌಲರ್ ಗಳಿಗೆ ಸ್ವರ್ಗವಾಗಿ, ಭಾರತದ ಬ್ಯಾಟ್ಸ್ ಮನ್ ಗಳಿಗೆ ಮಾರಕವಾಗಿ ಪರಿಣಮಿಸಿತು.

ಮೆಕ್ಯಾನಿಕಲ್ ಇಂಜಿನಿಯರ್ ನಂತಾದ ಭಾರತ

ಮೆಕ್ಯಾನಿಕಲ್ ಇಂಜಿನಿಯರ್ ನಂತಾದ ಭಾರತ ತಂಡ, ಮೆಕ್ಯಾನಿಕಲ್ ಪವಾಡಗಳನ್ನು ಮಾಡುತ್ತಾರೆ ಆದರೆ, ಮನೆಯಲ್ಲಿ ಫ್ಯಾನ್ ರಿಪೇರಿ ಗೊತ್ತಿರುವುದಿಲ್ಲ.

ರವಿಶಾಸ್ತ್ರಿ ಈಗ ಕ್ಯೂರೇಟರ್ ಹುಡುಕುತ್ತಿದ್ದಾರಂತೆ

ರವಿಶಾಸ್ತ್ರಿ ಈಗ ಪುಣೆ ಪಿಚ್ ಕ್ಯೂರೇಟರ್ ಹುಡುಕುತ್ತಿದ್ದಾರಂತೆ.

ಯಾರಾದರೂ ಉದ್ಧಾರ ಆಗಬೇಕು ಎಂದರೆ

ಯಾರಾದರೂ ಉದ್ಧಾರ ಆಗಬೇಕು ಎಂದರೆ, ಭಾರತದ ವಿರುದ್ಧ ಮೊದಲ ಪಂದ್ಯವಾಡಿಸಬೇಕು.

ವಿರೋಧಿ ತಂಡವನ್ನು ಗೌರವಿಸುವುದನ್ನು ಕಲಿಯಿರಿ

ನೀವು ಎಂಥಾ ಸಶಕ್ತ ತಂಡವಾದರೂ ವಿರೋಧಿ ತಂಡವನ್ನು ಗೌರವಿಸುವುದನ್ನು ಕಲಿಯಿರಿ.

ವಿರಾಟ್ ಕೊಹ್ಲಿ ಇಲ್ಲದ ಮೇಲೆ

ವಿರಾಟ್ ಕೊಹ್ಲಿ ಇಲ್ಲದ ಮೇಲೆ, ಟೀಂ ಇಂಡಿಯಾ ಹೇಗಿರುತ್ತೆ?

ಆಸ್ಟ್ರೇಲಿಯಾದಲ್ಲಿ ಹಾಗೂ ಭಾರತದಲ್ಲಿ ಟೀಂ ಇಂಡಿಯಾ

ಆಸ್ಟ್ರೇಲಿಯಾದಲ್ಲಿ ಹಾಗೂ ಭಾರತದಲ್ಲಿ ಟೀಂ ಇಂಡಿಯಾ ಹೇಗೆ ಕಾಣುತ್ತೆ ಎಂಬುದು ನೋಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sri Lankan bowlers wreaked havoc over Indian batters after a new-look side bundled out the hosts at 101 in the first T20 international game at Pune.
Please Wait while comments are loading...