'ದಬ್ಬಾಂಗ್' ರಾಹುಲ್ ರಿಂದ ಸೆಹ್ವಾಗ್ ಸ್ಟೈಲಲ್ಲಿ ಸೆಂಚುರಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 28: ಅಮೆರಿಕದ ಪ್ಲೋರಿಡಾದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯ ರೋಚಕವಾಗಿ ಅಂತ್ಯ ಕಂಡಿದ್ದು ನೋಡಿರಬಹುದು. ಭಾರತ ಹಾಗು ವೆಸ್ಟ್ ಇಂಡೀಸ್ ನಡುವಿನ ಈ ಪಂದ್ಯದಲ್ಲಿ ಇಬ್ಬರು ಯುವ ಪ್ರತಿಭೆಗಳು ಚೊಚ್ಚಲ ಟಿ20 ಶತಕ ಗಳಿಸಿದ್ದು ವಿಶೇಷ. ವಿಂಡೀಸ್ ಪರ ಲೂಯಿಸ್ ಶತಕ ಬಾರಿಸಿದರೆ, ಭಾರತ ಪರ ಕೆಎಲ್ ರಾಹುಲ್ ಶತಕ ಬಾರಿಸಿ ಅಜೇಯರಾಗಿ ಉಳಿದರು.

ಮೊದಲ ಟಿ20 ಸ್ಕೋರ್ ಕಾರ್ಡ್ | ಪಂದ್ಯದ ಲೈವ್ ವರದಿ

ಅತಿ ಹೆಚ್ಚು ಪಂದ್ಯಗಳಲ್ಲಿ ತಂಡವೊಂದನ್ನು ಮುನ್ನಡೆಸಿದ ವಿಶ್ವ ದಾಖಲೆಯೊಂದಿಗೆ ಕಣಕ್ಕಿಳಿದಿದ್ದ ಧೋನಿ ಪಂದ್ಯ ಗೆಲ್ಲಿಸಲಿಲ್ಲ. ಆದರೆ, ವೆಸ್ಟ್ ಇಂಡೀಸ್ ಬಾರಿಸಿದ 21 ಸಿಕ್ಸರ್ ಗಳು, ಸ್ಟುವರ್ಟ್ ಬಿನ್ನಿ ಚೆಚ್ಚಿಸಿಕೊಂಡ 32 ರನ್ ಓವರ್, ಕೊನೆ ಓವರ್ ರೋಚಕತೆ ಪ್ರೇಕ್ಷಕರನ್ನು ರಂಜಿಸಿತು.[ನಾಯಕನಾಗಿ ಅಮೆರಿಕದಲ್ಲಿ 'ವಿಶ್ವದಾಖಲೆ' ಬರೆದ ಧೋನಿ]

ಫ್ಲೋರಿಡಾದ ಫೋರ್ಟ್ ಲಾರ್ಡಾರ್ ಡೇಲ್ (Fort lauderdale)ನಲ್ಲಿ ನಡೆದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರು ಚೊಚ್ಚಲ ಟಿ20 ಶತಕ ಬಾರಿಸಿದರು. [ರಾಹುಲ್ 'ಸಿಕ್ಸರ್ ಬಾರಿಸಿ ಶತಕ ಗಳಿಕೆ' ಏನಿದರ ಗುಟ್ಟು?]

46 ಎಸೆತಗಳಲ್ಲಿ 100 ರನ್ ಬಾರಿಸಿದ ರಾಹುಲ್ ಅವರು 110 ರನ್ ಗಳಿಸಿ ಅಜೇಯರಾಗಿ ಉಳಿದರು. ಅಮೆರಿಕದಲ್ಲಿ ಚೊಚ್ಚಲ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಎರಡು ಬಾರಿ ಕಾಲಿಗೆ ಪೆಟ್ಟು

ಎರಡು ಬಾರಿ ಕಾಲಿಗೆ ಪೆಟ್ಟು

46 ಎಸೆತಗಳಲ್ಲಿ 100 ರನ್ ಬಾರಿಸಿದ ರಾಹುಲ್ ಅವರು 110 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಅಮೋಘ ಇನ್ನಿಂಗ್ಸ್ ವೇಳೆಯಲ್ಲಿ ಎರಡು ಬಾರಿ ಯಾರ್ಕ್ ಎಸೆತದಿಂದ ಪಾದಕ್ಕೆ ಪೆಟ್ಟು ತಿಂದು ನೋವಿನಲ್ಲೇ ಆಟ ಮುಂದುವರೆಸಿದರು.

ಸೆಹ್ವಾಗ್ ರಿಂದ ಹೊಗಳಿಕೆ

ಸೆಹ್ವಾಗ್ ರಿಂದ ಹೊಗಳಿಕೆ

ಇದೇ ವರ್ಷ ಜಿಂಬಾಬ್ವೆ ಸರಣಿಯಲ್ಲಿ ಚೊಚ್ಚಲ ಏಕದಿನ ಪಂದ್ಯದಲ್ಲೇ ಶತಕ ಬಾರಿಸಿ ದಾಖಲೆ ಬರೆದಿದ್ದ ರಾಹುಲ್ ಅವರು ಈಗ ಚೊಚ್ಚಲ ಟಿ20 ಶತಕ ಬಾರಿಸಿದರು. ಕಳೆದ ಮೂರು 100 ರನ್ ಗಳನ್ನು ಸಿಕ್ಸರ್ ಬಾರಿಸಿ ಗಳಿಸಿದ ದಬ್ಬಾಂಗ್ ಹುಡುಗ ಎಂದು ಕರೆದಿದ್ದಾರೆ.

ಮೂರು ಮಾದರಿಯಲ್ಲಿ ಕಳೆದ ಮೂರು ಶತಕ

ಏಕದಿನ, ಟೆಸ್ಟ್ ಹಾಗೂ ಟಿ20 ಮೂರು ಮಾದರಿಯಲ್ಲಿ ಕಳೆದ ಮೂರು ಶತಕಗಳನ್ನು ಸಿಕ್ಸ್ ಬಾರಿಸಿ ಗಳಿಸಿದ್ದಾರೆ. ಇದಕ್ಕೂ ಮುನ್ನ ಚೊಚ್ಚಲ ಟೆಸ್ಟ್ ಶತಕವನ್ನು ಕೂಡಾ ಸಿಕ್ಸ್ ಮೂಲಕ ಗಳಿಸಿದ್ದರು

ಸೆಹ್ವಾಗ್ ಅವರು ಸಿಕ್ಸ್ ಹೊಡೆಯುವುದನ್ನು ನೋಡಿ ಕಲಿತೆ

ಸೆಹ್ವಾಗ್ ಅವರು ಸಿಕ್ಸ್ ಹೊಡೆಯುವುದನ್ನು ನೋಡಿ ಕಲಿತೆ ಎಂದು ರಾಹುಲ್ ಕೂಡಾ ಈ ಹಿಂದೆ ಟ್ವೀಟ್ ಮಾಡಿದ್ದರು.

ಸೆಹ್ವಾಗ್ ರಿಂದ ರಾಹುಲ್ ಹೊಗಳಿಕೆ ಪಡೆದಿದ್ದರು

ಮಾಜಿ ಕ್ರಿಕೆಟರ್ ಸ್ಫೋಟಕ ಬ್ಯಾಟ್ಸ್ ಮನ್ ಸೆಹ್ವಾಗ್ ಅವರು ಸಿಕ್ಸ್ ಬಾರಿಸಿ ಶತಕ ಗಳಿಸುತ್ತಿದ್ದದ್ದು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಹಿಂದೆ ಟೆಸ್ಟ್ ನಲ್ಲಿ ಸಿಕ್ಸ್ ಬಾರಿಸಿ ಶತಕ ಗಳಿಸಿದಾಗಲೂ ಸೆಹ್ವಾಗ್ ರಿಂದ ರಾಹುಲ್ ಹೊಗಳಿಕೆ ಪಡೆದಿದ್ದರು.

24 ವರ್ಷ ವಯಸ್ಸಿನ ಪ್ರತಿಭೆಗೆ ಫ್ಯಾನ್ಸ್ ನಿಂದ ಹೊಗಳಿಕೆ

ಸೆಹ್ವಾಗ್, ಕೊಹ್ಲಿ, ಯುವರಾಜ್, ಧೋನಿ ಸಾಲಿಗೆ ರಾಹುಲ್ ರನ್ನು ಸೇರಿಸಿದ ಅಭಿಮಾನಿಗಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Young cricketer from Karnataka Lokesh Rahul slammed his maiden Twenty20 hundred in the first Twenty20 match here at the Central Broward Regional Park Stadium Turf Ground today (Aug 27).
Please Wait while comments are loading...