LIVE: ರಾಹುಲ್ ಶತಕ ವ್ಯರ್ಥ, ವಿಂಡೀಸ್ ಗೆ 1 ರನ್ ರೋಚಕ ಜಯ

Posted By:
Subscribe to Oneindia Kannada

ಫೋರ್ಟ್ ಲಾರ್ಡಾರ್ ಡೇಲ್(ಯುಎಸ್ಎ), ಆಗಸ್ಟ್ 27: ಅಮೆರಿಕದ ಪ್ಲೋರಿಡಾದಲ್ಲಿ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಹೊಸ ಯುಗಕ್ಕೆ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಶನಿವಾರ ಭರ್ಜರಿಯಾಗಿ ನಾಂದಿ ಹಾಡಿವೆ.

ಕನ್ನಡಿಗ ಕೆಎಲ್ ರಾಹುಲ್ ಅವರ ಅಮೋಘ ಶತಕ, ರೋಹಿತ್ ಅರ್ಧಶತಕ ಕೊನೆಗೂ ನೆರವಿನಿಗೆ ಬರಲಿಲ್ಲ. ಗ್ರೇಟ್ ಫಿನಿಶರ್ ನಾಯಕ ಧೋನಿ ಕೊನೆ ಎಸೆತದಲ್ಲಿ 2 ರನ್ ಗಳಿಸಲು ಸಾಧ್ಯವಾಗದೆ ವಿಕೆಟ್ ಹಾಗೂ ಪಂದ್ಯವನ್ನು ವೆಸ್ಟ್ ಇಂಡೀಸ್ ಗೆ ಒಪ್ಪಿಸಿದರು. ಮೊದಲ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ ವೆಸ್ಟ್ ಇಂಡೀಸ್ ಗೆ 1 ರನ್ ಗಳ ರೋಚಕ ಜಯ ಲಭಿಸಿದೆ. ಚೊಚ್ಚಲ ಶತಕ ಬಾರಿಸಿದ ಲೂಯಿಸ್ ಪಂದ್ಯಶ್ರೇಷ್ಠ ಎನಿಸಿದರು.[ಸೆಹ್ವಾಗ್ ಸ್ಟೈಲಲ್ಲಿ ಸೆಂಚುರಿ ಬಾರಿಸಿದ ರಾಹುಲ್ ಗೆ ಬಹುಪರಾಕ್]

ಮೊದಲ ಟಿ20 ಸ್ಕೋರ್ ಕಾರ್ಡ್ | 'ವಿಶ್ವದಾಖಲೆ' ಬರೆದ ಧೋನಿ

ಭಾರತದ ರನ್ ಚೇಸ್:
* ಧೋನಿ ಕ್ಯಾಚ್ ಹಿಡಿದ ಸ್ಯಾಮುಯಲ್, ಚಾಂಪಿಯನ್ ಡ್ಯಾನ್ಸ್ ಮಾಡಿದ ಬೌಲರ್ ಬ್ರಾವೊ, ವಿಂಡೀಸ್ ಗೆ ರೋಚಕ ಜಯ

* ಕೊನೆ ಎಸೆತದಲ್ಲಿ 2 ರನ್ ಬೇಕು, ಧೋನಿ ಸ್ಟ್ರೈಕ್ ನಲ್ಲಿದ್ದಾರೆ. 51 ಎಸೆತಗಳಲ್ಲಿ 110 ರನ್ ಗಳಿಸಿ ರಾಹುಲ್ ಅಜೇಯರಾಗಿ ಉಳಿದರು.
* ಕೊನೆ ಓವರ್ ನಲ್ಲಿ ಭಾರತಕ್ಕೆ ಗೆಲ್ಲಲು 8 ರನ್ ಅಗತ್ಯ
* ಕೆಎಲ್ ರಾಹುಲ್ ಸಿಕ್ಸರ್ ಬಾರಿಸಿ ಶತಕ, 46 ಎಸೆತಗಳಲ್ಲಿ 100 ರನ್

Charles and Lewis

* ಕೆಎಲ್ ರಾಹುಲ್ ಭರ್ಜರಿ ಆಟ, 17ನೇ ಓವರ್ 213/3
* ರೋಹಿತ್ ಹಾಗೂ ರಾಹುಲ್ ಭರ್ಜರಿ ಆಟ, 15 ನೇ ಓವರ್ 178/3
* ರೋಹಿತ್ ಶರ್ಮ ಅಕರ್ಷಕ ಅರ್ಧಶತಕದ ನೆರವಿನಿಂದ 10 ಓವರ್ಸ್ ಗಳಲ್ಲಿ 116/2
* ರೋಹಿತ್ ಶರ್ಮ ಹಾಗೂ ಕೆಎಲ್ ರಾಹುಲ್ ಉತ್ತಮ ಬ್ಯಾಟಿಂಗ್
* ಮೊದಲ 5 ಓವರ್ ಗಳಲ್ಲಿ 51/2 ಸ್ಕೋರ್
* ಅಜಿಂಕ್ಯ ರಹಾನೆ 6, ವಿರಾಟ್ ಕೊಹ್ಲಿ 16 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದಾರೆ.

KL Rahul

ವಿಂಡೀಸ್ ಇನ್ನಿಂಗ್ಸ್:
* ಮೊದಲ ಟಿ20 : ಭಾರತ ವಿರುದ್ಧ 20 ಓವರ್ ಗಳಲ್ಲಿ ವೆಸ್ಟ್ ಇಂಡೀಸ್ 245/6
* ಜಡೇಜಗೆ ಸತತ ಎರಡು ವಿಕೆಟ್, ಶತಕ ಗಳಿಸಿ ಲೂಯಿಸ್ ಔಟ್ ಸ್ಕೋರ್ : 205/3
* ರವೀಂದ್ರ ಜಡೇಜಗೆ ವಿಕೆಟ್, 22 ರನ್ ಗಳಿಸಿ ರಸೆಲ್ ಎಲ್ ಬಿ ಬಲೆಗೆ ಬಿದ್ದರು. 200/2
* ಲೂಯಿಸ್ ಭರ್ಜರಿ ಶತಕ, 48 ಎಸೆತಗಳಲ್ಲಿ 100ರನ್(5X4, 9X6), ವಿಂಡೀಸ್ ಬೃಹತ್ ಮೊತ್ತ, 15 ಓವರ್ ಗಳಲ್ಲಿ 200/1.

Rohit Sharma

* 12 ಓವರ್ಸ್ ನಂತರ ಸ್ಕೋರ್ 168/1, 14 ಓವರ್ಸ್ ನಂತರ 191/1, ಶತಕದತ್ತ ಲೂಯಿಸ್
* ಮೊದಲ ಟಿ20 : ಭಾರತ ವಿರುದ್ಧ ವೆಸ್ಟ್ ಇಂಡೀಸ್ 10 ಓವರ್ ಗಳ ನಂತರ ಸ್ಕೋರ್ 132/1
8 ನೇ ಓವರ್ ನಲ್ಲೇ ಯಾವುದೇ ವಿಕೆಟ್ ನಷ್ಟವಿಲ್ಲದೆ 100 ರನ್ ಗಡಿ ದಾಟಿದೆ. ಜಾನ್ಸನ್ ಚಾರ್ಲ್ಸ್ ಬಿರುಸಿನ ಅರ್ಧಶತಕ, ಇವಿನ್ ಲೂಯಿಸ್ ಜತೆಯಾಟದಿಂದ ಭಾರತದ ಬೌಲರ್ಸ್ ತತ್ತರ.

ಆಕರ್ಷಕ ಅರ್ಧಶತಕ ಗಳಿಸಿ 79( 33 ಎಸೆತ, 6X4, 7X6) ರನ್ ಗಳಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದ್ದಾರೆ. ಸ್ಕೋರ್ ಹತ್ತನೇ ಓವರ್ ನಲ್ಲಿ 127/1.

ಆಗಸ್ಟ್ 27 ರಂದು ಮೊದಲ ಪಂದ್ಯ ಹಾಗೂ 28ರಂದು ಎರಡನೇ ಟಿ20ಪಂದ್ಯ ನಡೆಯಲಿದೆ. ಫ್ಲೋರಿಡಾದ ಫೋರ್ಟ್ ಲಾರ್ಡಾರ್ ಡೇಲ್(Fort lauderdale)ನಲ್ಲಿ ಹೊಸ ಇತಿಹಾಸಕ್ಕೆ ಧೋನಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಸಿದ್ಧರಾಗಿದ್ದಾರೆ. [ಸರಣಿ ಗೆದ್ದರೂ ಭಾರತಕ್ಕೆ ನಂ.1 ಪಟ್ಟ ಸಿಕ್ಕಲ್ಲ]

ಇದು ಇವರಿಬ್ಬರ ಕಾಂಬಿನೇಷನ್ ನ ಮೊದಲ ಸರಣಿಯಾಗಿದೆ. ವಿರಾಟ್ ಕೊಹ್ಲಿ ಜತೆಗೂಡಿ ಅನಿಲ್ ಕುಂಬ್ಳೆ ಅವರು ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದಿದ್ದಾರೆ. [ಧೋನಿಯ ನಂ. 1 ಗೆಳೆತನದ ಜಾಹೀರಾತು ನೋಡಿ]

1st T20I: India opt to bowl against West Indies; Chris Gayle injured

ಎಂಎಸ್ ಧೋನಿ ನೇತೃತ್ವದ ತಂಡ ಮೊದಲ ಟಿ20 ಪಂದ್ಯ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ವಿಂಡೀಸ್ ಪರ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಆಡುತ್ತಿಲ್ಲ. ಗಾಯಗೊಂಡ ಗೇಲ್ ಇಂದಿನ ಪಂದ್ಯಕ್ಕೆ ಅಲಭ್ಯ.

ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಸ್ಟುವರ್ಟ್ ಬಿನ್ನಿ

ವೆಸ್ಟ್ ಇಂಡೀಸ್ : ಕಾರ್ಲೊಸ್ ಬ್ರಥ್ ವೈಟ್ (ನಾಯಕ), ಆಂಡ್ರೆ ಫ್ಲೆಚರ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಡ್ವಾಯ್ನೆ ಬ್ರಾವೋ, ಇವಿನ್ ಲೂಯಿಸ್, ಜಾನ್ಸನ್ ಚಾರ್ಲ್ಸ್, ಕೀರಾನ್ ಪೊಲ್ಲಾರ್ಡ್, ಲೆಂಡ್ಲ್ ಸಿಮನ್ಸ್, ಮರ್ಲಾನ್ ಸ್ಯಾಮುಯಲ್ಸ್, ಸ್ಯಾಮುಯಲ್ ಬದ್ರಿ, ಸುನಿಲ್ ನರೇನ್ (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Riding on opener Evin Lewis' century, West Indies posted 245/6 in the first T20 International against India at the Central Broward Regional Park Stadium Turf Ground here on Saturday (August 27). West Indies won by 1 run
Please Wait while comments are loading...