ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾಕ್ಸ್ ವೆಲ್ ಆರ್ಭಟ, ಆಸೀಸ್ ನಿಂದ ವಿಶ್ವ ದಾಖಲೆ ಮೊತ್ತ!

By Mahesh

ಪಲ್ಲಕೆಲೆ(ಶ್ರೀಲಂಕಾ), ಸೆ.06: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಮ್ಯಾಕ್ಸ್ ವೆಲ್ 65 ಎಸೆತಗಳಲ್ಲಿ ಅಜೇಯ 145 ರನ್ ನೆರವಿನಿಂದ ಶ್ರೀಲಂಕಾ ವಿರುದ್ಧದ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿಶ್ವದಾಖಲೆ ಮೊತ್ತ ದಾಖಲಿಸಿದೆ. 20 ಓವರ್ ಗಳಲ್ಲಿ 263/3 ಗಳಿಸಿದೆ.

ಮ್ಯಾಕ್ಸ್ ವೆಲ್ ಅವರು 9 ಸಿಕ್ಸ್ ಹಾಗೂ 14 ಬೌಂಡರಿ ಇದ್ದ 145 ರನ್ ಗಳಿಸಿದ್ದಲ್ಲದೆ, ಆಸ್ಟ್ರೇಲಿಯಾ ತಂಡ ವಿಶ್ವ ದಾಖಲೆ ನಿರ್ಮಿಸಲು ನೆರವಾದರು. ಈ ಬೃಹತ್ ಮೊತ್ತ ಬೆನ್ನು ಹತ್ತಿದ ಶ್ರೀಲಂಕಾ ಪಡೆ 20 ಓವರ್ ಗಳಲ್ಲಿ 178/9 ಸ್ಕೋರ್ ಮಾಡಿ ಶರಣಾಗಿದೆ.

1st T20I: Glenn Maxwell smashes 145* as Australia post world record 263/3

ಇದಕ್ಕೂ ಮುನ್ನ ಟಿ20 ಕ್ರಿಕೆಟ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯಧಿಕ ಮೊತ್ತ ಗಳಿಸಿತ್ತು. ಪುಣೆ ವಾರಿಯರ್ಸ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆರ್ ಸಿಬಿ 263/5 ಸ್ಕೋರ್ ಮಾಡಿತ್ತು. ಆಸ್ಟ್ರೇಲಿಯಾ ಈ ದಾಖಲೆಯನ್ನು ಉತ್ತಮಪಡಿಸಿದೆ. [ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಮೊತ್ತ ಚೆಚ್ಚಿದ ಇಂಗ್ಲೆಂಡ್]

ಇದರ ಜೊತೆಗೆ ಶ್ರೀಲಂಕಾದ 9 ವರ್ಷಗಳ ಹಿಂದಿನ ದಾಖಲೆಯನ್ನು ಆಸ್ಟ್ರೇಲಿಯಾ ಮುರಿದಿದೆ. 2007ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ಕೀನ್ಯಾ ವಿರುದ್ಧ ಶ್ರೀಲಂಕಾ 260/6 ಬಾರಿಸಿತ್ತು.

1st T20I: Glenn Maxwell smashes 145* as Australia post world record 263/3


ಇಂದಿನ ಪಂದ್ಯದಲ್ಲಿ 49 ಎಸೆತಗಳಲ್ಲಿ 27 ವರ್ಷ ವಯಸ್ಸಿನ ಮ್ಯಾಕ್ಸ್ ವೆಲ್ ಅವರು ಶತಕ ಬಾರಿಸಿದರು. ಆದರೆ, ಆಸೀಸ್ ಪರ ಟಿ20ಯಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಅರೋನ್ ಫಿಂಚ್ 156ರನ್ ಹೆಸರಿನಲ್ಲಿದೆ.[400 ರನ್ ಗಳಿಕೆ ಕ್ಲಬ್ ಭಾರತ ನಂ. 2ನಲ್ಲಿ, ನಂ. 1 ಯಾರು?]

ವಾರದ ಹಿಂದೆ ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅತ್ಯಧಿಕ ಮೊತ್ತ 444/3, 50 ಓವರ್ಸ್ ಬಾರಿಸಿ, ಪಾಕಿಸ್ತಾನಿ ಬೌಲರ್ ಗಳ ತತ್ತರಿಸುವಂತೆ ಮಾಡಿದ್ದರು.[ದುಬಾರಿ ಬೌಲಿಂಗ್ ನಲ್ಲಿ ಆಸೀಸ್ ಫಸ್ಟ್, ಇಂಡಿಯನ್ಸ್ ಇಬ್ರು]

ಟಿ20ಯಲ್ಲಿ ಅತ್ಯಧಿಕ ಮೊತ್ತಗಳು: (20 ಓವರ್ಸ್)
* 263/3 : ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ (ಪಲ್ಲೆಕೆಲ್ಲೆ, 2016)
* 260/6 : ಶ್ರೀಲಂಕಾ ವಿರುದ್ಧ ಕೀನ್ಯಾ (ಜೋಹಾನ್ಸ್ ಬರ್ಗ್, 2007)
* 248/6 : ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ (ಸೌಂಥಾಪ್ಟನ್, 2013)
* 245/6 : ವೆಸ್ಟ್ ಇಂಡೀಸ್ ವಿರುದ್ಧ ಭಾರತ (ಲಾಡರ್ ಹಿಲ್, 2016)
* 244/4 : ಭಾರತ ವಿರುದ್ಧ ವೆಸ್ಟ್ ಇಂಡೀಸ್ (ಲಾಡರ್ ಹಿಲ್, 2016)
(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X