ಕೊಹ್ಲಿ ಕಮಾಲ್, ಸ್ಪಿನ್ ಮ್ಯಾಜಿಕ್, ಭಾರತಕ್ಕೆ ಭರ್ಜರಿ ಜಯ

Subscribe to Oneindia Kannada

ಅಡಿಲೇಡ್, ಜನವರಿ, 26: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20ಯಲ್ಲಿ ಭಾರತ ಜಯದ ಆರಂಭ ಮಾಡಿದೆ. ಅದ್ಭುತ ಬ್ಯಾಟಿಂಗ್ ಮತ್ತು ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ಆಸ್ಟ್ರೇಲಿಯಾ ವಿರುದ್ಧ 37 ರನ್ ಗಳ ಜಯ ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿದ್ದ ಭಾರತ ಮೊದಲ ಟಿ-20 ಯಲ್ಲಿ ಆಸ್ಟ್ರೇಲಿಯಾಕ್ಕೆ ಸವಾಲಿನ ಮೊತ್ತವನ್ನು ನೀಡಿತ್ತು. ವಿರಾಟ್ ಕೊಹ್ಲಿ ಭರ್ಜರಿ ಅರ್ಧ ಶತಕದ ನೆರವಿನಿಂದ ಆಸಿಸ್ ಗೆ 189 ರನ್ ಗುರಿ ನೀಡಲಾಗಿತ್ತು.[ಭಾರತದ ಮಾನ ಕಾಪಾಡಿದ ಧೋನಿ ಸಿಕ್ಸ್]

ಲೈವ್ ಸ್ಕೋರ್ ಬೋರ್ಡ್

cricket

ಪದಾರ್ಪಣೆ ಪಂದ್ಯದಲ್ಲಿ ಬುಮ್ರಾ ಭಾರತದ ಪರ 23 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ರವೀಂದ್ರ ಜಡೇಜಾ ಮತ್ತು ಅಶ್ವಿನ್ ಸಹ ತಲಾ ಎರಡು ವಿಕೆಟ್ ಕಿತ್ತು ಭಾರತಕ್ಕೆ ಜಯ ತಂದುಕೊಟ್ಟರು. ಆರಂಭದಲ್ಲಿ ಅಬ್ಬರಿಸಿದ್ದ ಆಸೀಸ್ ಆಟಗಾರರನ್ನು ನಂತರ ಕಟ್ಟಿ ಹಾಕಲಾಯಿತು.[ಆಸ್ಟ್ರೇಲಿಯಾದಲ್ಲಿ ಗೆಲುವಿನ ಹಾದಿ ಹಿಡಿದ ಟೀಂ ಇಂಡಿಯಾ]

55 ಚೆಂಡು ಎದುರಿಸಿದ ವಿರಾಟ್ ಕೊಹ್ಲಿ 90 ರನ್ ಗಳಿಸಿ ರನ್ ಪ್ರವಾಹ ಹರಿಸಿದರು. ಕೊನೆಯಲ್ಲಿ ಬಂದ ನಾಯಕ ಎಂ ಎಸ್ ಧೋನಿ 3 ಚೆಂಡುಗಳಲ್ಲಿ 11 ರನ್ ಗಳಿಸಿದರು. ಸುರೇಶ್ ರೈನಾ ಸಹ 41 ರನ್ ಗಳ ಕಾಣಿಕೆ ನೀಡಿದರೆ, ರೋಹಿತ್ ಶರ್ಮಾ 31 ರನ್ ಗಳಿಸಿದರು.[ಯುವಿ ಸೇರಿ 700 ಆಟಗಾರರ ಹರಾಜು, ಯಾರಿಗೆ ಎಷ್ಟು ರೇಟು?]

ಭಾರತ ತಂಡ
ಮಹೇಂದ್ರ ಸಿಂಗ್ ಧೋನಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಹರ್ದಿಕ್ ಪಾಂಡ್ಯಾ, ರವೀಂದ್ರ ಜಡೇಜಾ, ಆರ್ರ ಅಶ್ವಿನ್, ಜಸ್ಪ್ರಿತ್ ಬುಮ್ರಾ, ಆಶಿಶ್ ನೆಹ್ರಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India batsman Virat Kohli struck an unbeaten 55-ball 90 to help India post a challenging 188 for three against Australia in the first Twenty20 International here today. India won by 37 runs as the hosts were bowled out for 151 in 19.3 overs.
Please Wait while comments are loading...