ಯಶಸ್ವಿ ರನ್ ಚೇಸ್ : ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ!

Posted By:
Subscribe to Oneindia Kannada

ಪುಣೆ, ಜನವರಿ 16: ಟೀಂ ಇಂಡಿಯಾದ 'ರನ್ ಮಷಿನ್' ವಿರಾಟ್ ಕೊಹ್ಲಿ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಯಶಸ್ವಿ ರನ್ ಚೇಸ್ ಶತಕಗಳ ದಾಖಲೆಯನ್ನು ಮುರಿದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. 108 ಎಸೆತಗಳಲ್ಲಿ 122 ರನ್ ಬಾರಿಸಿ. ರನ್ ಚೇಸ್ ನಲ್ಲಿ ಕೊಹ್ಲಿ 17ನೇ ಶತಕ ಗಳಿಸಿದರು. ಈ ಮೂಲಕ ರನ್ ಚೇಸ್ ನಲ್ಲಿ ಅಧಿಕ ಶತಕ ಗಳಿಸಿದ ದಾಖಲೆ ಹಾಗೂ ಯಶಸ್ವಿ ಶತಕ ಗಳಿಸಿದ ದಾಖಲೆ ಮುರಿದರು.

ರನ್ ಚೇಸ್ ನಲ್ಲಿ ಅತಿ ಹೆಚ್ಚು ಶತಕ: 17 -ಕೊಹ್ಲಿ(96 ಇನ್ನಿಂಗ್ಸ್), ಸಚಿನ್ (232 ಇನ್ನಿಂಗ್ಸ್)
11- ತಿಲಕರತ್ನೆ ದಿಲ್ಶನ್(116 ಇನ್ನಿಂಗ್ಸ್), ಕ್ರಿಸ್ ಗೇಲ್ (139 ಇನ್ನಿಂಗ್ಸ್)

ಅಕ್ಟೋಬರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ 154ರನ್ ಚೆಚ್ಚಿ ತೆಂಡೂಲ್ಕರ್ ಅವರ ದಾಖಲೆಯ ಸಮಕ್ಕೆ ನಿಂತಿದ್ದರು.

1st ODI: Virat Kohli breaks Sachin Tendulkar's record for most centuries in successful chases

ರನ್ ಚೇಸಿಂಗ್ ನಲ್ಲಿ ಶತಕ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ಆಟಗಾರರ ಪೈಕಿ ಸಚಿನ್ ಅವರು ಮುಂದಿದ್ದರು. ಸಚಿನ್ ಅವರು 14 ಬಾರಿ ಈ ಸಾಧನೆ ಮಾಡಿದ್ದರು. ಈಗ ಕೊಹ್ಲಿ 15 ಬಾರಿ ಶತಕ ಗಳಿಸಿ ತಂಡಕ್ಕೆ ಜಯ ತಂದಿದ್ದಾರೆ.

ಆದರೆ, ಪಂದ್ಯ, ಇನ್ನಿಂಗ್ಸ್ ಲೆಕ್ಕ ಹಾಕಿದರೆ ಸಚಿನ್ ಗಿಂತ ಕೊಹ್ಲಿ ಸಾಕಷ್ಟು ಮುಂದಿದ್ದಾರೆ. ಸಚಿನ್ ಅವರು 14 ಶತಕ (ರನ್ ಚೇಸ್ ನಲ್ಲಿ) ಗಳಿಸಲು 124 ಇನ್ನಿಂಗ್ಸ್ ತೆಗೆದುಕೊಂಡರೆ, ಕೊಹ್ಲಿ ಅವರು 60 ಇನ್ನಿಂಗ್ಸ್ ನಲ್ಲೇ ಸಾಧಿಸಿದ್ದಾರೆ.

ಉಳಿದಂತೆ, 9 ಶತಕ-ಸಯೀದ್ ಅನ್ವರ್ (59), ತಿಲಕರತ್ನೆ ದಿಲ್ಶನ್ (60), ಜಯಸೂರ್ಯ(103) ರನ್ ಚೇಸ್ ನಲ್ಲಿ ಶತಕ ಬಾರಿಸಿದ ಆಟಗಾರರಾಗಿದ್ದಾರೆ.

ವಿಶ್ವಮಟ್ಟದಲ್ಲಿ ಅತಿ ಹೆಚ್ಚು ಶತಕ ಗಳಿಕೆ ಪಟ್ಟಿಯಲ್ಲಿ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು 49 ಶತಕ ಗಳಿಸಿದ್ದಾರೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್(30), ಶ್ರೀಲಂಕಾದ ಸನತ್ ಜಯಸೂರ್ಯ(28) ನಂತರದ ಸ್ಥಾನದಲ್ಲಿದ್ದಾರೆ. ಭಾನುವಾರದ ಪಂದ್ಯದಲ್ಲಿ 27ನೇ ಶತಕ ಗಳಿಸುವ ಮೂಲಕ ಕೊಹ್ಲಿ ಅವರು ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Team India's skipper and batting masterclass Virat Kohli on Sunday (Jan 15) surpassed Master Blaster Sachin Tendulkar's yet another milestone.
Please Wait while comments are loading...