ಪರ್ತ್: ಭಾರತ ವಿರುದ್ಧ ಆಸ್ಟ್ರೇಲಿಯಾಕ್ಕೆ 5 ವಿಕೆಟ್ ಗಳ ಜಯ

Posted By:
Subscribe to Oneindia Kannada

ಪರ್ತ್, ಜ. 12: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಏಕದಿನ ಸರಣಿಯ ಮೊದಲ ಪಂದ್ಯ ಇಲ್ಲಿನ ವಾಕಾ ಮೈದಾನದಲ್ಲಿ ಆರಂಭಗೊಂಡಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 50 ಓವರ್ ಗಳಲ್ಲಿ 309/3 ಮಾಡಿತು. ಆಸ್ಟ್ರೇಲಿಯಾ ಸ್ಮಿತ್, ಬೈಲಿ ಭರ್ಜರಿ ಶತಕದ ನೆರವಿನಿಂದ 49.2 ಓವರ್ ಗಳಲ್ಲಿ ಗೆಲುವಿನ ಗುರಿ ದಾಟಿ ಐದು ವಿಕೆಟ್ ಗಳ ಜಯ ದಾಖಲಿಸಿದೆ.

ಲೈವ್ ಸ್ಕೋರ್ ಕಾರ್ಡ್

310ರನ್ ಗುರಿ ಬೆನ್ನು ಹತ್ತಿದ್ದ ಆಸ್ಟ್ರೇಲಿಯಾದ ಮೊದಲೆರಡು ವಿಕೆಟ್ ಗಳು ಚೊಚ್ಚಲ ಪಂದ್ಯವಾಡುತ್ತಿರುವ ವೇಗಿ ಸರಣ್ ಪಾಲಾಯಿತು. ಆದರೆ, ನಂತರ ಬಂದ ನಾಯಕ ಸ್ಮಿತ್ 149 ಹಾಗೂ ಬೈಲಿ 112 ಭರ್ಜರಿ ಪ್ರದರ್ಶನ ನೀಡಿ ಭಾರತಕ್ಕೆ ಸೋಲುಣಿಸಿದರು. ಸರಣ್ ಒಟ್ಟಾರೆ 3 ವಿಕೆಟ್ ಕಿತ್ತು ಉತ್ತಮ ಪ್ರದರ್ಶನ ನೀಡಿದರು. [ರೈತನ ಮಗ ಬರಿಂದರ್, ಬಾಕ್ಸಿಂಗ್ ನಿಂದ ಕ್ರಿಕೆಟ್ ಗೆ ಎಂಟ್ರಿ]

Smith

ರೋಹಿತ್ ಶರ್ಮ 171 ರನ್ (163 ಎಸೆತಗಳು, 13X4, 7X6), ವಿರಾಟ್ ಕೊಹ್ಲಿ 91 ರನ್ (97 ಎಸೆತಗಳು, 9x4, 1x6) ಅದ್ಭುತ ಆಟದ ನೆರವಿನಿಂದ ಭಾರತ 50 ಓವರ್ ಗಳಲ್ಲಿ 309/3 ಮಾಡಿದೆ.

ರೋಹಿತ್ ಶರ್ಮ 9ನೇ ಶತಕ ದಾಖಲು, ಆಸೀಸ್ ವಿರುದ್ಧ ನಾಲ್ಕನೇ ಶತಕ. ಜೇಮ್ಸ್ ಫಾಲ್ಕನರ್ 60ಕ್ಕೆ 2 ಹಾಗೂ ಹೇಜಲ್ ವುಡ್ 41ಕ್ಕೆ 1 ವಿಕೆಟ್ ಪಡೆದರು. ಮೊದಲ ಪಂದ್ಯವಾಡುತ್ತಿರುವ ವೇಗಿಗಳಾದ ಜೋಯಿಲ್ ಪ್ಯಾರಿಸ್ 8 ಓವರ್ ಗಳಲಿ 53ರನ್ ಹಾಗೂ ಬೋಲ್ಯಾಂಡ್ 10 ಓವರ್ ಗಳಲ್ಲಿ 74ರನ್ನಿತ್ತು ದುಬಾರಿ ಎನಿಸಿದರು.[ಪರ್ತ್ ನಲ್ಲಿ ಪವರ್ ಫುಲ್ ಆಟವಾಡಿದ ರೋಹಿತ್ ದಾಖಲೆಗಳು!]

ಭಾರತ ತಂಡಕ್ಕೆ 23 ವರ್ಷ ವಯಸ್ಸಿನ ಎಡಗೈ ವೇಗಿ ಬರಿಂದರ್ ಸರನ್ ಅವರು ಸೇರಿಕೊಂಡಿದ್ದು, ಇದು ಅವರ ಚೊಚ್ಚಲ ಪಂದ್ಯವಾಗಿದೆ. ಆಸ್ಟ್ರೇಲಿಯಾ ಪರ ಜೋ ಪ್ಯಾರಿಸ್ ಹಾಗೂ ಸ್ಕಾಟ್ ಬೊಲ್ಯಾಂಡ್ ಅವರಿಗೂ ಇದು ಮೊದಲ ಪಂದ್ಯವಾಗಿದೆ.

Barinder Sran debuts

ಟೀಂ ಇಂಡಿಯಾದ ಆಡುವ XI ನಲ್ಲಿ ಗಾಯಾಳು ಮೊಹಮ್ಮದ್ ಶಮಿ ಬದಲಿಗೆ ಭುವನೇಶ್ವರ್ ಕುಮಾರ್ ಅವರು ಆಡುತ್ತಿದ್ದಾರೆ. ಕರ್ನಾಟಕದ ಮನೀಶ್ ಪಾಂಡೆ ಅವರು ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರಿಂದ ಈ ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಸ್ಟಾರ್ ಸ್ಫೋರ್ಟ್ಸ್ ನಲ್ಲಿ ಪಂದ್ಯದ ನೇರ ಪ್ರಸಾರ ನೋಡಬಹುದು. ಮುಂದಿನ ಪಂದ್ಯ ಜನವರಿ 15 ರಂದು ಬ್ರಿಸ್ಬೇನ್ ನಲ್ಲಿ ನಡೆಯಲಿದೆ.

1st ODI: India opt to bat first; Barinder Sran debuts

ಭಾರತ : ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಮನೀಶ್ ಪಾಂಡೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಉಮೇಶ್ ಯಾದವ್, ಬರಿಂದರ್ ಸರನ್, ಭುವನೇಶ್ವರ್ ಕುಮಾರ್.

ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್(ನಾಯಕ), ಅರೋನ್ ಫಿಂಚ್, ಡೇವಿಡ್ ವಾನರ್, ಜಾರ್ಜ್ ಬೈಲಿ, ಗ್ಲೆನ್ ಮ್ಯಾಕ್ಸ್ ವೆಲ್, ಮಿಚೆಲ್ ಮಾರ್ಷ್, ಜೇಮ್ಸ್ ಫಾಲ್ಕ್ನರ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್, ಜೋಶ್ ಹೇಜಲ್ ವುಡ್, ಜೋಯಿಲ್ ಪ್ಯಾರಿಸ್, ಸ್ಕಾಟ್ ಬೊಲ್ಯಾಂಡ್

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rohit Sharma smashed his way to a magnificent unbeaten 171 as India piled up an imposing 309/3 against Australia in the first ODI of the 5-match series, here today at the WACA ground. Australia won by 5 wickets with Steve Smith and George Bailey scoring centuries.
Please Wait while comments are loading...