ಪುಣೆ ಟಿ20: ಭಾರತ ವಿರುದ್ಧ ಶ್ರೀಲಂಕಾಕ್ಕೆ ಜಯ

Posted By:
Subscribe to Oneindia Kannada

ಪುಣೆ, ಫೆ. 09: ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾದ ನಾಯಕ ದಿನೇಶ್ ಚಾಂಡಿಮಾಲ್ ಅವರು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಹಸಿರು ಪಿಚ್ ನ ಲಾಭ ಪಡೆದುಕೊಂಡರು. ಧೋನಿ ಅವರ ಲೆಕ್ಕಾಚಾರ ಮೊದಲ ಪಂದ್ಯದಲ್ಲೇ ತಲೆಕೆಳಗಾಯಿತು. ಭಾರತ ನೀಡಿದ ಸುಲಭ ಮೊತ್ತವನ್ನು ಶ್ರೀಲಂಕಾ ಎರಡು ಓವರ್ ಗಳಿಗೂ ಮುಂಚಿತವಾಗಿ ತಲುಪಿ ವಿಜಯೋತ್ಸವ ಆಚರಿಸಿತು.

ಪಂದ್ಯದ ಲೈವ್ ಸ್ಕೋರ್ ಕಾರ್ಡ್ | ಸರಣಿ ವೇಳಾಪಟ್ಟಿ | ಚಿತ್ರಗಳು

ಭಾರತ ಆರಂಭಿಕ ಆಘಾತ ಅನುಭವಿಸಿ 5 ರನ್ನಿಗೆ 2 ವಿಕೆಟ್ ಕಳೆದುಕೊಂಡ ಮೇಲೆ ಚೇತರಿಸಿಕೊಳ್ಳಲಿಲ್ಲ. ಹಸಿರು ಪಿಚ್ ನ ಪೂರ್ಣ ಲಾಭ ಪಡೆದ ಲಂಕಾ ತಂಡ ಎದುರಾಳಿ ಭಾರತ ತಂಡವನ್ನು 101 ರನ್ನಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಕೊನೆಗೆ ರನ್ ಚೇಸ್ ಮಾಡಿ 5 ವಿಕೆಟ್ ಗಳ ಅಂತರದ ಜಯ ದಾಖಲಿಸಿತು.

1st T20I: India bowled out for 101 on green pitch


ಭಾರತ ಒಡ್ಡಿದ್ದ ಸುಲಭ ಮೊತ್ತವನ್ನು ಚೇಸ್ ಮಾಡುವಲ್ಲಿ ಶ್ರೀಲಂಕಾಕ್ಕೆ ಮಧ್ಯಮ ಕ್ರಮಾಂಕದಲ್ಲಿ ಚಾಂಡಿಮಾಲ್ 35 ರನ್, ಕಪುಗೆಡೆರ 25 ರನ್ ಹಾಗೂ ಸಿರಿವರ್ದನೆ ಅಜೇಯ 21 ರನ್ ಗಳಿಸಿ 18 ಓವರ್ ಗಳಲ್ಲಿ 105ರನ್ ಸ್ಕೋರ್ ಮಾಡಿ ಜಯ ತಂದು ಕೊಟ್ಟರು.

ಇದಕ್ಕೂ ಮುನ್ನ ಶ್ರೀಲಂಕಾ ಪರ 22 ವರ್ಷ ವಯಸ್ಸಿನ ರಜಿತಾ ಅವರು 3/29 ಹಾಗೂ ಯುವ ಬೌಲರ್ 3/16 ವಿಕೆಟ್ ಕಿತ್ತು ಭಾರತದ ಬ್ಯಾಟಿಂಗ್ ಬೆನ್ನಲುಬು ಮುರಿದರು. ಕೊನೆ ಗಳಿಗೆಯಲ್ಲಿ 24 ಎಸೆತಗಳಲ್ಲಿ 31 ರನ್ ಗಳಿಸಿ ಅಶ್ವಿನ್ ಅವರು ಮೊತ್ತವನ್ನು ನೂರರ ಗಡಿ ದಾಟಿಸಿದರು. ರೈನಾ 20 ಎಸೆತಗಳಲ್ಲಿ 20 ರನ್ ಬಾರಿಸಿದರೆ, ಯುವರಾಜ್ 10ರನ್ ಮಾತ್ರ ಬಾರಿಸಿ ಎರಡಂಕಿ ಸ್ಕೋರ್ ಮಾಡಿದರು.

ಪಿಚ್ ರಿಪೋರ್ಟ್ ನೀಡಿದ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು 'ಸಿಕ್ಸ್ ಹಾಗೂ ಬೌಂಡರಿಗಳ ಸುರಿಮಳೆಯಾಗಲಿದೆ. ಪ್ರೇಕ್ಷಕರು ಹೆಲ್ಮೆಟ್ ಧರಿಸಿ ಕೂರುವುದು ಒಳ್ಳೆಯದು' ಎಂದಿದ್ದರು. ಆದರೆ, ಸಂಪೂರ್ಣ ಬೌಲರ್ ಗಳ ಸ್ವರ್ಗವಾಗಿ ಪರಿಣಮಿಸಿತು.

1st T20I: India bowled out for 101 on green pitch

ತಂಡಗಳು
ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ ಹಾಗೂ ವಿಕೆಟ್ ಕೀಪರ್), ರೋಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯ ರಹಾನೆ, ಮನೀಶ್ ಪಾಂಡೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬೂಮ್ರಾ, ಆಶೀಶ್ ನೆಹ್ರಾ, ಹರ್ಭಜನ್ ಸಿಂಗ್, ಭುವನೇಶ್ವರ್ ಕುಮಾರ್, ಪವನ್ ನೇಗಿ.

ಶ್ರೀಲಂಕಾ: ದಿನೇಶ್ ಚಾಂಡಿಮಾಲ್ (ನಾಯಕ), ಸೀಕುಗೆ ಪ್ರಸನ್ನ, ಮಿಲಿಂದಾ ಸಿರಿವರ್ದನ, ದನುಷ್ಕಾ ಗುಣತಿಲಕಾ, ತಿಸಾರಾ ಪೆರೆರಾ, ದಸುನ್ ಶನಕಾ, ಅಸೆಲಾ ಗುಣರತ್ನೆ, ಚಮರಾ ಕಪುದೆಗೆರಾ, ದುಷ್ಮಾತಾ ಚಮೀರಾ, ದಿಲ್ಹಾರಾ ಫರ್ನಾಂಡೋ, ಕಸುನ್ ರಜಿತಾ, ಬಿನುರಾ ಫರ್ನಾಂಡೋ, ಸಚಿತ್ರಾ ಸೆನಾನಾಯಕೆ, ಜೆಫ್ರಿ ವಂಡರ್ಸೆ, ನಿರೋಷನ್ ಡಿಕ್ವೆಲಾ

ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ಆರಂಭವಾಯಿತು.ಎರಡನೇ ಟಿ20 ಪಂದ್ಯ ಫೆಬ್ರವರಿ 14 ರಂದು 7.30 ರಂದು ನಡೆಯಲಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sri Lanka's rookie pacers Kasun Rajitha and Dasun Chanaka made full use of a green top bowling out a fancied Indian batting line-up for a paltry 101 in the first T20 international cricket match, here today. The visitors won by 5 wickets.
Please Wait while comments are loading...