ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ

Posted By:
Subscribe to Oneindia Kannada

ಬೆಂಗಳೂರು, ಜುಲೈ 09: ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಟೆಸ್ಟ್ ತಂಡವನ್ನು ಭಾನುವಾರ(ಜುಲೈ 09) ಪ್ರಕಟಿಸಲಾಗಿದೆ. ಶ್ರೀಲಂಕದಲ್ಲಿ ಮೂರು ಟೆಸ್ಟ್ ಪಂದ್ಯವಲ್ಲದೆ ಐದು ಏಕದಿನ ಪಂದ್ಯ ಹಾಗೂ ಒಂದು ಟಿ20 ಪಂದ್ಯ ನಿಗದಿಯಾಗಿದೆ.

ಭಾರತದಿಂದ ಶ್ರೀಲಂಕಾ ಪ್ರವಾಸ ಪರಿಷ್ಕೃತ ವೇಳಾಪಟ್ಟಿ

ಜುಲೈ26ಕ್ಕೆ ಆರಂಭವಾಗಲಿರುವ ಟೆಸ್ಟ್ ಸರಣಿ ಆಗಸ್ಟ್ 16ಕ್ಕೆ ಮುಗಿಯಲಿದೆ. ಅಗಸ್ಟ್ 20 ರಿಂದ ಸೆಪ್ಟೆಂಬರ್ 03ರ ತನಕ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿ ನಡೆಯಲಿದ್ದು, ಸೆಪ್ಟೆಂಬರ್ 06 ರಂದು ಏಕೈಕ ಟಿ20ಐ ಪಂದ್ಯ ನಡೆಯಲಿದೆ.

A 16-member Indian Test squad announced for Sri Lanka tour

ಉಭಯ ದೇಶಗಳ ನಡುವೆ 2009ರ ಪೂರ್ಣ ಪ್ರಮಾಣದ ಸರಣಿ ಇದಾಗಿದೆ. ಆಗ ಟೆಸ್ಟ್ ಸರಣಿಯನ್ನು ಭಾರತ 2-0, ಏಕದಿನ ಕ್ರಿಕೆಟ್ 3-1 ಹಾಗೂ ಟಿ20ಐ 1-1 ರಲ್ಲಿ ಡ್ರಾ ಆಗಿತ್ತು.

ತಂಡದಲ್ಲಿ ಬದಲಾವಣೆ: ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸಿದ ಕರ್ನಾಟಕದ ಕರುಣ್ ನಾಯರ್ ಬದಲಿಗೆ ರೋಹಿತ್ ಶರ್ಮ ತಂಡವನ್ನು ಸೇರಿದ್ದಾರೆ. ಹಾರ್ದಿಕ್ ಪಾಂಡ್ಯ ಅವರಿಗೆ ಸ್ಥಾನ ಸಿಕ್ಕಿದೆ. ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಸ್ಪಿನ್ನರ್ ಕುಲದೀಪ್ ಯಾದವ್ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ.

ತಂಡ ಇಂತಿದೆ:ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹೆ, ರೋಹಿತ್ ಶರ್ಮ, ಆರ್ ಅಶ್ವಿನ್, ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಇಶಾಂತ್ ಶರ್ಮ, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಅಭಿನವ್ ಮುಕುಂದ್.

ಮುರಳಿ ವಿಜಯ್ ಗಾಯಗೊಂಡಿರುವುದರಿಂದ ಅವರ ಬದಲಿಗೆ ಶಿಖರ್ ಧವನ್ ಆಯ್ಕೆಯಾಗಿದ್ದಾರೆ.

India vs Sri Lanka: Hardik Pandya may play in first match says Virat Kohli

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 16-member team India Test squad was announced today (July 9) for the upcoming tour of Sri Lanka. A couple of changes have been into the squad. Rohit Sharma comes in replacing Karun Nair.
Please Wait while comments are loading...