6 ಎಸೆತಗಳಲ್ಲಿ 6 ವಿಕೆಟ್ ಕಿತ್ತ 13ರ ಹರೆಯದ ಬಾಲಕ

Posted By:
Subscribe to Oneindia Kannada

ಲಂಡನ್, ಆಗಸ್ಟ್ 13: ಇಂಗ್ಲೆಂಡಿನ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ 13 ವಯಸ್ಸಿನ ಶಾಲಾ ಬಾಲಕ ಲ್ಯೂಕ್ ರಾಬಿನ್ಸನ್‌ ಹೊಸ ಸಾಧನೆ ಮಾಡಿದ್ದಾನೆ. ಒಂದು ಓವರ್‌ ನ ಆರು ಎಸೆತಗಳಲ್ಲಿ ಆರು ವಿಕೆಟ್ ಗಳನ್ನು ಕಬಳಿಸಿದ್ದಾನೆ.

ಇಂಗ್ಲೆಂಡಿನ ಹೌಟನ್-ಲೆ-ಸ್ಪ್ರಿಂಗ್ ಬಳಿ ಫಿಲಾಡೆಲ್ಫಿಯಾ ಕ್ರಿಕೆಟ್‌ ಕ್ಲಬ್‌ ಆಯೋಜನೆ ಅಂಡರ್ 13 ಟೂರ್ನಮೆಂಟ್ ನಲ್ಲಿ ಲ್ಯೂಕ್ ಈ ಸಾಧನೆ ಮಾಡಿದ್ದಾರೆ. ಲ್ಯೂಕ್ ಪಡೆದ ಎಲ್ಲಾ ಆರು ವಿಕೆಟ್‌ಗಳು 'ಬೋಲ್ಡ್‌' ಮೂಲಕ ಪಡೆದಿದ್ದು ವಿಶೇಷ.

13-year-old England boy Luke Robinson takes six wickets in six balls

ಲ್ಯೂಕ್ ನ ಈ ಸಾಧನೆಗೆ ಆತನ ಕುಟುಂಬ ಸದಸ್ಯರು ಸಾಕ್ಷಿಯಾಗಿದ್ದರು. ಲ್ಯೂಕ್ ನ ತಂದೆ ಅಂಪೈರ್‌ ಸ್ಟೀಫನ್ ಅವರು ಅಂಪೈರ್ ಅಗಿ ಮತ್ತು ತಾಯಿ ಹೆಲೆನ್ ಸ್ಕೋರರ್‌ ಆಗಿ ಕಾರ್ಯನಿರ್ವಹಿಸಿದ್ದರೆ, ಅಜ್ಜ ಕೂಡಾ ಉಪಸ್ಥಿತರಿದ್ದರು.

'ನಾನು 30ವರ್ಷಗಳ ಕಾಲ ಆಡಿದ್ದೇನೆ. ಹ್ಯಾಟ್ರಿಕ್‌ ವಿಕೆಟ್‌ಗಳನ್ನೂ ಪಡೆದಿದ್ದೇನೆ. ಆದರೆ, ಇಂತಹ ಸಾಧನೆ ಸಾಧ್ಯವಾಗಿರಲಿಲ್ಲ. ಲ್ಯೂಕ್ ನಮ್ಮ ಕುಟುಂಬದ ಹೆಮ್ಮೆ'ಲ್ಯೂಕ್ ನ ತಂದೆ ಸ್ಟೀಫನ್ ರಾಬಿನ್ಸನ್ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 13-year-old schoolboy from England created history as he claimed six wickets in six deliveries, all of them clean bowled.
Please Wait while comments are loading...