ಭಾರತ-ವಿಂಡೀಸ್ ಕದನ ಆರಂಭಕ್ಕೂ ಮುನ್ನ ಓದಿರಿ!

Posted By:
Subscribe to Oneindia Kannada

ಮುಂಬೈ, ಮಾರ್ಚ್ 29: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಾಗೂ ವೆಸ್ಟ್ ಇಂಡೀಸ್ ನ ಆರಂಭಿಕ ಆಟಗಾರ ಕ್ರಿಸ್ ಗೇಲ್ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ. ಇಬ್ಬರಲ್ಲಿ ಯಾರು ತಮ್ಮ ತಂಡವನ್ನು ವಿಶ್ವ ಟಿ20 ಟೂರ್ನಮೆಂಟ್ ನ ಫೈನಲ್ ತಲುಪಿಸುತ್ತಾರೆ ಮಾರ್ಚ್ 31, 7PM IST ನಂತರ ಸ್ಟಾರ್ ಸ್ಫೋರ್ಟ್ ನಲ್ಲಿ ವೀಕ್ಷಿಸಿ...

ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಪರ ಆಡುವ ಈ ಇಬ್ಬರು ಪ್ರತಿಭಾವಂತ ಕ್ರಿಕೆಟರ್ ಗಳಿಗೆ ಅಗ್ನಿಪರೀಕ್ಷೆ ಎದುರಾಗಿದೆ. ಅತಿಥೇಯ ಭಾರತ ಏಷ್ಯಾದ ಏಕೈಕ ತಂಡವಾಗಿ ಕಣಕ್ಕಿಳಿಯುತ್ತಿದೆ.

ಬಲಾ ಬಲ:
* ಟಿ20 ಹಂತದಲ್ಲಿ ವೆಸ್ಟ್ ಇಂಡೀಸ್ ಹಾಗೂ ಭಾರತ 2-2ರ ಸಮಬಲ ಹೊಂದಿವೆ. ಒಟ್ಟಾರೆ ಜಾಗತಿಕ ಟೂರ್ನಿಗಳಲ್ಲಿ ವೆಸ್ಟ್ ಇಂಡೀಸ್ 2-1ರ ಮುನ್ನಡೆಯಲ್ಲಿದೆ. [ಪಂದ್ಯದ ಸ್ಕೋರ್ ಕಾರ್ಡ್]
* 2009- ವೆಸ್ಟ್ ಇಂಡೀಸ್ ತಂಡಕ್ಕೆ 7 ವಿಕೆಟ್ ಜಯ, ಲಾರ್ಡ್ಸ್ (ಪಂದ್ಯಶ್ರೇಷ್ಠ : ಡ್ವಾಯ್ನೆ ಬ್ರಾವೋ) [ಪಂದ್ಯದ ಸ್ಕೋರ್ ಕಾರ್ಡ್]
* 2009- ವೆಸ್ಟ್ ಇಂಡೀಸ್ ತಂಡಕ್ಕೆ 14 ರನ್ ಗಳ ಜಯ,ಬಾರ್ಬಡೋಸ್ (ಪಂದ್ಯಶ್ರೇಷ್ಠ : ಕ್ರಿಸ್ ಗೇಲ್) [ಪಂದ್ಯದ ಸ್ಕೋರ್ ಕಾರ್ಡ್]
* 2014- ಭಾರತಕ್ಕೆ 7 ವಿಕೆಟ್ ಜಯ, (ಪಂದ್ಯಶ್ರೇಷ್ಠ : ಅಮಿತ್ ಮಿಶ್ರಾ) [ಪಂದ್ಯದ ಸ್ಕೋರ್ ಕಾರ್ಡ್]

ಭಾರತದ ವಿಶ್ವ ಟ್ವೆಂಟಿ 20 ಸೆಮಿಫೈನಲ್ ಹಂತದ ಸಾಧನೆ

ಭಾರತದ ವಿಶ್ವ ಟ್ವೆಂಟಿ 20 ಸೆಮಿಫೈನಲ್ ಹಂತದ ಸಾಧನೆ

* 2007(ಅತಿಥೇಯ ತಂಡ ದಕ್ಷಿಣ ಆಫ್ರಿಕಾ)- ಆಸ್ಟ್ರೇಲಿಯಾವನ್ನು 15ರನ್ ಗಳಿಂದ ಸೋಲಿಸಿದ ಭಾರತ. ಫೈನಲಿನಲ್ಲಿ ಪಾಕಿಸ್ತಾನವನ್ನು 5 ರನ್ ಗಳಿಂದ ಸೋಲಿಸಿ ಕಪ್ ಎತ್ತಿತು.
* 2014 (ಅತಿಥೇಯ ತಂಡ ಬಾಂಗ್ಲಾದೇಶ)- ದಕ್ಷಿಣ ಆಫ್ರಿಕಾವನ್ನು 6ವಿಕೆಟ್ ಗಳಿಂದ ಸೋಲಿಸಿದ ಭಾರತ. ಫೈನಲಿನಲ್ಲಿ ಶ್ರೀಲಂಕಾವನ್ನು 5 ರನ್ ಗಳಿಂದ ಸೋಲು ಅನುಭವಿಸಿತು.

ವಿಂಡೀಸ್ ನ ವಿಶ್ವ ಟ್ವೆಂಟಿ 20 ಸೆಮಿಫೈನಲ್ ಹಂತದ ಸಾಧನೆ

ವಿಂಡೀಸ್ ನ ವಿಶ್ವ ಟ್ವೆಂಟಿ 20 ಸೆಮಿಫೈನಲ್ ಹಂತದ ಸಾಧನೆ

* 2009 (ಅತಿಥೇಯ ತಂಡ ಇಂಗ್ಲೆಂಡ್)- ಶ್ರೀಲಂಕಾ ವಿರುದ್ಧ 57ರನ್ ಗಳ ಸೋಲು.
* 2012 (ಅತಿಥೇಯ ತಂಡ ಶ್ರೀಲಂಕಾ)- ಆಸ್ಟ್ರೇಲಿಯಾವನ್ನು 7 ವಿಕೆಟ್ ಗಳಿಂದ ಸೋಲಿಸಿದ ವಿಂಡೀಸ್. ಫೈನಲಿನಲ್ಲಿ ಶ್ರೀಲಂಕಾವನ್ನು 3 ವಿಕೆಟ್ ಗಳಿಂದ ಸೋಲಿಸಿ ಕಪ್ ಎತ್ತಿತು.
* 2014 (ಅತಿಥೇಯ ತಂಡ ಬಾಂಗ್ಲಾದೇಶ)- ಶ್ರೀಲಂಕಾ ವಿರುದ್ಧ 27ರನ್ ಗಳಿಂದ ಸೋಲು(ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ)

ವಿಶ್ವ ಟ್ವೆಂಟಿ20 ಫೈನಲ್ ತಂಡಗಳು

ವಿಶ್ವ ಟ್ವೆಂಟಿ20 ಫೈನಲ್ ತಂಡಗಳು

* 2007- ಭಾರತ (ವಿಜೇತ), ಪಾಕಿಸ್ತಾನ ರನ್ನರ್ ಅಪ್ [ಸರಣಿ ಫಲಿತಾಂಶ]
* 2009- ಪಾಕಿಸ್ತಾನ (ವಿಜೇತ), ಶ್ರೀಲಂಕಾ ರನ್ನರ್ ಅಪ್ [ಸರಣಿ ಫಲಿತಾಂಶ]
* 2010- ಇಂಗ್ಲೆಂಡ್ (ವಿಜೇತ),ಆಸ್ಟ್ರೇಲಿಯಾ ರನ್ನರ್ ಅಪ್ [ಸರಣಿ ಫಲಿತಾಂಶ]
* 2012- ವೆಸ್ಟ್ ಇಂಡೀಸ್ (ವಿಜೇತ), ಶ್ರೀಲಂಕಾ ರನ್ನರ್ ಅಪ್ [ಸರಣಿ ಫಲಿತಾಂಶ]
* 2014- ಶ್ರೀಲಂಕಾ (ವಿಜೇತ), ಭಾರತ ರನ್ನರ್ ಅಪ್ [ಸರಣಿ ಫಲಿತಾಂಶ]

ವೆಸ್ಟ್ ಇಂಡೀಸ್ ತಂಡ

ವೆಸ್ಟ್ ಇಂಡೀಸ್ ತಂಡ

ಡರೆನ್ ಸಮಿ (ನಾಯಕ), ಸುಲೈಮಾನ್ ಬೆನ್, ಜೇಸನ್ ಹೋಲ್ಡರ್,ಆಂಡ್ರೆ ಫ್ಲೆಚೆರ್, ಡ್ವಾಯ್ನೆ ಬ್ರಾವೋ, ಸ್ಯಾಮುಯೆಲ್ ಬದ್ರಿ, ಲೆಂಡ್ಲ್ ಸಿಮೊನ್ಸ್, ಜೆರೊಮೆ ಟೇಲರ್.ಅಂಡ್ರೆ ರಸ್ಸೆಲ್, ದಿನೇಶ್ ರಾಮ್ದಿನ್, ಕ್ರಿಸ್ ಗೇಲ್, ಮರ್ಲಾನ್ ಸ್ಯಾಮುಯೆಲ್ಸ್, ಆಶ್ಲೆ ನರ್ಸ್, ಕಾರ್ಲೋಸ್ ಬ್ರಥ್ ವೈಟ್

ಭಾರತ ತಂಡ

ಭಾರತ ತಂಡ

ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಉಪನಾಯಕ), ಶಿಖರ್ ಧವನ್, ಅಜಿಂಕ್ಯಾ ರಹಾನೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಮಹಮ್ಮದ್ ಶಮಿ, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಪವನ್ ನೇಗಿ, ಆಶಿಶ್ ನೆಹ್ರಾ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
All eyes will be on Virat Kohli and Chris Gayle as India and West Indies face off in the 2nd semi-final of the ICC World Twenty20 here on Thursday (March 31, 7 PM IST).
Please Wait while comments are loading...