ಭಾರತ vs ಪಾಕಿಸ್ತಾನ ಮ್ಯಾಚಿಗೂ ಮುನ್ನ ಸೂಪರ್ 10 ಅಂಶಗಳು

Posted By:
Subscribe to Oneindia Kannada

ಕೋಲ್ಕತ್ತಾ, ಮಾರ್ಚ್ 18: ವಿಶ್ವ ಟಿ20 ಟೂರ್ನಮೆಂಟ್ ಸೂಪರ್ 10 ಹಂತದಲ್ಲಿ ಶನಿವಾರ (ಮಾರ್ಚ್ 19) ಭಾರತ ಹಾಗೂ ಪಾಕಿಸ್ತಾನ ಸೆಣೆಸಲಿವೆ. ಯಾವ ತಂಡ ಗೆಲ್ಲಬಹುದು ಎಂಬುದರ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಪಂದ್ಯಕ್ಕೂ ಮುನ್ನ ಈ 10 ಅಂಶಗಳನ್ನು ಓದಿಕೊಳ್ಳಿ..

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯವನ್ನು ಸೋತಿರುವ ಧೋನಿ ಪಡೆ ಒತ್ತಡದಲ್ಲಿದ್ದರೆ, ಬಾಂಗ್ಲಾ ವಿರುದ್ಧ ಇದೇ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಗೆದ್ದಿರುವ ಅಫ್ರಿದಿ ಪಡೆ ಗೆಲ್ಲುವ ವಿಶ್ವಾಸದಲ್ಲಿದೆ. ಒಟ್ಟಾರೆ, ಮಹಾನ್ ಸಮರಕ್ಕೆ ಪಿಚ್ ರೆಡಿಯಾಗಿದೆ. ಟಾಸ್ ಗೂ ಮುನ್ನ ಈ ಅಂಕಿ ಅಂಶ ನಿಮಗಾಗಿ....[ಮತ್ತೊಮ್ಮೆ 'ಮೌಕಾ ಮೌಕಾ' ಆಡ್]

* ಪಂದ್ಯ ಶನಿವಾರ ಮಾರ್ಚ್ 19ರಂದು 7.30 PM IST

* ಭಾರತದ ಮುಂದಿನ ಪಂದ್ಯ vs ಬಾಂಗ್ಲಾದೇಶ, ಬೆಂಗಳೂರು, ಮಾರ್ಚ್ 23 (7.30 PM IST)

* ಪಾಕಿಸ್ತಾನದ ಮುಂದಿನ ಪಂದ್ಯ vs ನ್ಯೂಜಿಲೆಂಡ್, ಮೊಹಾಲಿ, ಮಾರ್ಚ್ 22, (7.30 PM IST)[ಪಾಕಿಸ್ತಾನ ಗೆದ್ದು ಬಿಟ್ರೆ ಬಟ್ಟೆ ಬಿಚ್ತಾರಂತೆ ಈ ರೂಪದರ್ಶಿ!]

ಕೋಲ್ಕತ್ತಾದಲ್ಲಿ ಪಾಕಿಸ್ತಾನ ಸೋಲು ಕಂಡಿಲ್ಲ

ಕೋಲ್ಕತ್ತಾದಲ್ಲಿ ಪಾಕಿಸ್ತಾನ ಸೋಲು ಕಂಡಿಲ್ಲ

1.ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ನಡುವೆ ಟಿ20 ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದೆ.
2. ಈಡೆನ್ ಗಾರ್ಡನ್ಸ್ ಪಾಕಿಸ್ತಾನದ ಫೇವರೀಟ್ ಮೈದಾನವಾಗಿದ್ದು, ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಎಂದೂ ಸೋತಿಲ್ಲ. 1987,1989,2004 ಹಾಗೂ 2013ರಲ್ಲಿ ಭಾರತ ವಿರುದ್ಧದ ಒಡಿಐ ಪಂದ್ಯಗಳನ್ನು ಗೆದ್ದುಕೊಂಡಿದೆ.
3. ಭಾರತ ಅಷ್ಟೇ ಅಲ್ಲದೆ, ಪಾಕಿಸ್ತಾನ ತಂಡ ಕೋಲ್ಕತ್ತಾದಲ್ಲಿ ಟಿ20ಐ ಪಂದ್ಯವನ್ನು ಸೋತಿಲ್ಲ. ವಿಶ್ವ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 55ರನ್ ಗಳ ಗೆಲುವು ಸಾಧಿಸಿದೆ.

ಈ ಪಂದ್ಯ ಗೆಲ್ಲುವುದು ಭಾರತಕ್ಕೆ ಅನಿವಾರ್ಯ

ಈ ಪಂದ್ಯ ಗೆಲ್ಲುವುದು ಭಾರತಕ್ಕೆ ಅನಿವಾರ್ಯ

4. ಧರ್ಮಶಾಲದಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಭದ್ರತಾ ದೃಷ್ಟಿಯಿಂದ ಕೋಲ್ಕತ್ತಾಕ್ಕೆ ಬದಲಾಯಿಸಲಾಯಿತು.
5. ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯ ಸೋತಿರುವ ಭಾರತ, ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದ್ದು, ಸೆಮಿಫೈನಲ್ ತಲುಪುವ ಆಸೆ ಜೀವಂತವಾಗಲಿದೆ.

ಬೆಂಗಳೂರಲ್ಲಿ ಮಾತ್ರ ಭಾರತ ಸೋಲು ಕಂಡಿದೆ

ಬೆಂಗಳೂರಲ್ಲಿ ಮಾತ್ರ ಭಾರತ ಸೋಲು ಕಂಡಿದೆ

6. ಇಲ್ಲಿ ತನಕ ಭಾರತ ಹಾಗೂ ಪಾಕಿಸ್ತಾನ 7 ಟಿ20ಐ ಆಡಿದ್ದು, 2012ರಲ್ಲಿ ಬೆಂಗಳೂರಲ್ಲಿ ಮಾತ್ರ ಭಾರತ ಸೋಲು ಕಂಡಿದೆ.
7. ಪಾಕಿಸ್ತಾನ ವಿರುದ್ಧದ ಎಲ್ಲಾ 7 ಟಿ20ಐ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಎಂಎಸ್ ಧೋನಿ ಅವರು ಮುನ್ನಡೆಸಿದ್ದಾರೆ.
8. ಪಾಕಿಸ್ತಾನ ಮೂರು ನಾಯಕರನ್ನು ಕಂಡಿದೆ. ಮೊಹಮ್ಮದ್ ಹಫೀಜ್ (4 ಪಂದ್ಯಗಳು) ಹಾಗೂ ಶೋಯಿಬ್ ಮಲೀಕ್ (2), ಶಾಹೀದ್ ಅಫ್ರಿದಿ (1)

ಭಾರತದ ವಿರುದ್ಧ ಗೆಲುವು ಸಾಧಿಸಿಲ್ಲ

ಭಾರತದ ವಿರುದ್ಧ ಗೆಲುವು ಸಾಧಿಸಿಲ್ಲ

9. ವಿಶ್ವ ಟಿ20 2007ರಲ್ಲಿ ಕಪ್ ಗೆದ್ದ ತಂಡದಲ್ಲಿದ್ದ ಧೋನಿ, ರೋಹಿತ್ ಶರ್ಮ, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಫೈನಲ್ ಸೋತ ಪಾಕಿಸ್ತಾನದಲ್ಲಿದ್ದ ಹಫೀಜ್, ಅಫ್ರಿದಿ ಹಾಗೂ ಮಲೀಕ್ ಅವರು ಶನಿವಾರದ ಪಂದ್ಯದಲ್ಲೂ ಆಡುತ್ತಿದ್ದರು.
10. ಪಾಕಿಸ್ತಾನ ತಂಡ ವಿಶ್ವ ಟಿ20 ಇತಿಹಾಸದಲ್ಲಿ ಇಲ್ಲಿ ತನಕ ಭಾರತದ ವಿರುದ್ಧ ಗೆಲುವು ಸಾಧಿಸಿಲ್ಲ(2007ರಲ್ಲಿ 2 ಬಾರಿ, 2012ರಲ್ಲಿ 1 ಬಾರಿ, 2014 1 ಬಾರಿ)

ಹರ್ಭಜನ್ ಗೆ ಸ್ಥಾನ ಸಿಗುವುದೇ

ಹರ್ಭಜನ್ ಗೆ ಸ್ಥಾನ ಸಿಗುವುದೇ

ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಉಪನಾಯಕ), ಶಿಖರ್ ಧವನ್, ಅಜಿಂಕ್ಯಾ ರಹಾನೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಮಹಮ್ಮದ್ ಶಮಿ, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಪವನ್ ನೇಗಿ, ಆಶಿಶ್ ನೆಹ್ರಾ. ಹರ್ಭಜನ್ ಗೆ ಸ್ಥಾನ ಸಿಗುವುದೇ ಕಾದು ನೋಡಬೇಕಿದೆ.

ಉತ್ತಮ ಲಯದಲ್ಲಿರುವ ಅಫ್ರಿದಿ ಪಡೆ

ಉತ್ತಮ ಲಯದಲ್ಲಿರುವ ಅಫ್ರಿದಿ ಪಡೆ

ಪಾಕಿಸ್ತಾನ :ಶಹೀದ್ ಅಫ್ರಿದಿ (ನಾಯಕ), ಖುರಮ್ ಮನ್ಜೂರ್, ಮುಹಮ್ಮದ್ ಹಫೀಜ್, ಶೋಯಿಬ್ ಮಲ್ಲಿಕ್, ಉಮರ್ ಅಕ್ಮಲ್, ಸರ್ಫಾಜ್ ಅಹ್ಮದ್, ಬಾಬರ್ ಅಜಂ, ಇಫ್ತಿಕಾರ್ ಅಹ್ಮದ್, ಎಮಾದ್ ವಾಸಿಮ್, ಅನ್ವರ್ ಅಲಿ, ಮುಹಮ್ಮದ್ ಇರ್ಫಾನ್, ವಹಾಬ್ ರಿಯಾಜ್, ಮೊಹಮ್ಮದ್ ಆಮೀರ್, ಮುಹಮ್ಮದ್ ನವಾಜ್ ಹಾಗೂ ರುಮ್ಮನ್ ರಯೀಸ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Eden Gardens is ready to host the high-voltage ICC World Twenty20 contest between India and Pakistan on Saturday (March 19).
Please Wait while comments are loading...