ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಸ್ ಸಿಎ ಕದನ: ಬ್ರಿಜೇಶ್ ಬಣ ವಿರುದ್ಧ ಕುಂಬ್ಳೆ ಗರಂ

By Mahesh

ಬೆಂಗಳೂರು, ಆ.17: ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಸಕತ್ ಗರಂ ಆಗಿದ್ದಾರೆ. ರಾಜ್ಯ ಕ್ರಿಕೆಟ್​ ಸಂಸ್ಥೆಯ ಹಾಲಿ ಮತ್ತು ಮಾಜಿ ಪದಾಧಿಕಾರಿಗಳ ನಡುವೆ ಮತ್ತೆ ಜಟಾಪಟಿ ಶುರುವಾಗಿದೆ. ಕೆಎಸ್​ಸಿಎ ಕಚೇರಿಯಲ್ಲಿ ನಡೆದ ವಿಶೇಷ ಸಭೆಯನ್ನು ಅರ್ಧಕ್ಕೆ ಬಿಟ್ಟು ಹೊರಬಂದ ಇಬ್ಬರು ದಿಗ್ಗಜರು ಬ್ರಿಜೇಶ್ ಪಟೇಲ್ ಬಣದ ವಿರುದ್ಧ ಹರಿಹಾಯ್ದಿದ್ದಾರೆ.

ರಾಜ್ಯ ಕ್ರಿಕೆಟ್​ ಸಂಸ್ಥೆಯಲ್ಲಿ ಹಣ ದುರಪಯೋಗ ಆಗುತ್ತಿದೆ. ಕ್ರಿಕೆಟ್​ಗಿಂತ ಕ್ಲಬ್​ ಹೌಸ್​ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದು ಸಭೆಯಲ್ಲಿ ಹೊರಬಂದ ನಂತರ ಕೆಎಸ್​ಸಿಎ ಮಾಜಿ ಅಧ್ಯಕ್ಷ ಅನಿಲ್ ಕುಂಬ್ಳೆ ಹೇಳಿದ್ದಾರೆ, ಇದೇ ಮಾತನ್ನು ಜಾವಗಲ್ ಶ್ರೀನಾಥ್ ಪುನರುಚ್ಚರಿಸಿದ್ದಾರೆ. ಇಬ್ಬರು ಇಷ್ಟೊಂದು ಸಿಟ್ಟಿಗೇಳಲು ಕಾರಣವೇನು ಎಂದು ಹುಡುಕಿದರೆ ಮತ್ತೊಮ್ಮೆ ಬ್ರಿಜೇಶ್ vs ಕುಂಬ್ಳೆ ಜಟಾಪಟಿ ಹಳೆ ಲೆಕ್ಕಾಚಾರ ಚುಕ್ತಾವಾಗುತ್ತಿರುವುದು ಕಂಡು ಬರುತ್ತದೆ.

ಕರ್ನಾಟಕ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ತನ್ನ ಅಮೃತ ಮಹೋತ್ಸವ ಸಮಾರಂಭವನ್ನು ಕಳೆದ ವರ್ಷ ವಿಜೃಂಭಣೆಯಿಂದ ಆಚರಿಸಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. [ಬ್ರಿಜೇಶ್- ಒಡೆಯರ್ ಜಯಭೇರಿ]

ಕ್ರಿಕೆಟ್ ಲೋಕದ ದಿಗ್ಗಜರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಅವರನ್ನು ವಿವಾದದ ಕೇಂದ್ರ ಬಿಂದುವಾಗಿದ್ದರು. ಸಮಾರಂಭಕ್ಕೆ 4 ಕೋಟಿ ರು ಖರ್ಚು ಮಾಡಲು ಯಾರ ಅಪ್ಪಣೆ ಇದೆ ಎಂದು ಮಾಜಿ ಕ್ರಿಕೆಟರ್ ಬ್ರಿಜೇಶ್ ಪಟೇಲ್ ಪ್ರಶ್ನಿಸಿದ್ದರು. ಆಗ ಬ್ರಿಜೇಶ್ ಕೈಲಿ ಅಧಿಕಾರವಿರಲಿಲ್ಲ, ಈಗ ಕೆಎಸ್ ಸಿಎಗೆ ಬ್ರಿಜೇಶ್ ಹಾಗೂ ದಿವಂಗತ ಶ್ರೀಕಂಠದತ್ತ ಒಡೆಯರ್ ಬಣವೇ ಬಾಸ್ ಆದಮೇಲೆ ಸಹಜವಾಗಿ ಕುಂಬ್ಳೆ ಬಣಕ್ಕೆ ಪೈಸಾ ಪೈಸಾ ಲೆಕ್ಕಾ ನೀಡಿ ಎಂದಿದೆ.

ಮತ್ತೆ ಭುಗಿಲೆದ್ದ ಸುವರ್ಣ ಮಹೋತ್ಸವ ಲೆಕ್ಕಾಚಾರ

ಮತ್ತೆ ಭುಗಿಲೆದ್ದ ಸುವರ್ಣ ಮಹೋತ್ಸವ ಲೆಕ್ಕಾಚಾರ

1934-35ರಲ್ಲಿ ಮೈಸೂರು ಕ್ರಿಕೆಟ್ ಸಂಸ್ಥೆಯಾಗಿ ಹುಟ್ಟಿಕೊಂಡ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಮೃತ ಮಹೋತ್ಸವ ವರ್ಷ 2009-10 ಆಗಿದೆ. ಆದರೆ ಅಂದಿನ ಅಧ್ಯಕ್ಷರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, "ದು ಚುನಾವಣೆಯ ವರ್ಷವಾದ ಕಾರಣ ಅಮೃತ ಮಹೋತ್ಸವ ಆಚರಿಸುವುದು ಸೂಕ್ತವಲ್ಲ" ಎಂದು ಹೇಳಿದ್ದರು.

ಸುವರ್ಣ ಮಹೋತ್ಸವ ಆಚರಣೆ ಬಗ್ಗೆ ಲೆಕ್ಕಾಚಾರ ಕೇಳಿದ್ದರು. ಹಳೆ ದಾಖಲೆ ಬಗ್ಗೆ ಕೇಳಲು ನಮ್ಮನ್ನು ಸಭೆಗೆ ಕರೆದಿದ್ದರು. 6 ಪುಟ ವರದಿ ನೀಡಿದ್ದೇನೆ. ಅದರೆ, ಸಭೆಯಲ್ಲಿ ನಮ್ಮ ಮಾತು ಕೇಳಲು ಯಾರೂ ಸಿದ್ದರಿರಲಿಲ್ಲ. ಎಲ್ಲವೂ ಪೂರ್ವ ನಿಯೋಜಿತವಾಗಿತ್ತು. ಹೀಗಾಗಿ ಹೊರ ಬಂದೆವು ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

ಕ್ರಿಕೆಟರ್ಸ್ ಗೆ ಮರ್ಯಾದೆ ಕೊಡುತ್ತಿಲ್ಲ: ಶ್ರೀನಾಥ್ ಗರಂ

ಕ್ರಿಕೆಟರ್ಸ್ ಗೆ ಮರ್ಯಾದೆ ಕೊಡುತ್ತಿಲ್ಲ: ಶ್ರೀನಾಥ್ ಗರಂ

18 ವರ್ಷ ಕ್ರಿಕೆಟ್ ಆಡಿ, ಕರ್ನಾಟಕ ಮುಂದೆ ಬರಲಿ, ಕ್ರಿಕೆಟ್ ಉದ್ಧಾರವಾಗಲಿ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಗಡಿಭಾಗದ ಪ್ರತಿಭೆಗಳು ಹೊರ ಹೊಮ್ಮಬೇಕು ಎಂಬುದು ನಮ್ಮ ಉದ್ದೇಶ- ಅನಿಲ್ ಕುಂಬ್ಳೆ

ಕ್ಲಬ್ ಹೌಸ್, ಕನ್ವೇಷನ್ ಸೆಂಟರ್ ಎಂದರೆ ಮದುವೆ ಎಜಿಎಂನಲ್ಲಿ ಸದಸ್ಯರು ಕ್ಲಬ್ ಹೌಸ್ ಕ್ರಿಕೆಟರ್ಸ್ ಊಟ ತಿಂಡಿಗೆ ಇರಬಹುದು ಆದರೆ, ಅದೇ ದೊಡ್ಡ ಸಮಸ್ಯೆ ಆಗಬಾರದು ಜಾವಗಲ್ ಶ್ರೀನಾಥ್ ಹೇಳಿಕೆ
ಅನಿಲ್ ಕುಂಬ್ಳೆ vs ಬ್ರಿಜೇಟ್ ಪಟೇಲ್ ಆಗಬಾರದು?

ಅನಿಲ್ ಕುಂಬ್ಳೆ vs ಬ್ರಿಜೇಟ್ ಪಟೇಲ್ ಆಗಬಾರದು?

ಈಗ ಅಸೋಸಿಯೇಷನ್ ಇದೆ. 130 ಸಬ್ ಕಮಿಟಿ ಇದೆ. ಇಲ್ಲಿ ನಡೆಯುತ್ತಿರುವುದು ಪೂರ್ವ ನಿಯೋಜಿತ ಸಭೆ ಅಷ್ಟೇ, ಸಮಿತಿಯಲ್ಲಿ ಒಟ್ಟು 2000 ಮಂದಿ ಇದ್ದಾರೆ. ಕ್ರಿಕೆಟ್ ಹುಡುಗರಿಗಾಗಿ ನಾವು ಬಂದಿದ್ದೇವೆ. ಎಂದು ಕುಂಬ್ಳೆ ಹೇಳಿಕೆ.

ಇದು ಅನಿಲ್ ಕುಂಬ್ಳೆ vs ಬ್ರಿಜೇಟ್ ಪಟೇಲ್ ಆಗಬಾರದು? ಕ್ರಿಕೆಟರ್ಸ್ ಗೆ ಮರ್ಯಾದೆ ಕೊಡುತ್ತಿಲ್ಲ. ಸರ್ಕಾರ ದುಡ್ಡು ಕೊಡುವುದು ಕ್ರಿಕೆಟ್ ಅಭಿವೃದ್ಧಿಗೆ, ನಾವು ಇದ್ದಾಗ ಒಳ್ಳೆ ಕೆಲಸಮಾಡಿದ್ದೇವೆ. ಈಗ ರೆಡ್ ಅಲರ್ಟ್ ನೀಡಲಷ್ಟೇ ಸಾಧ್ಯ. ಎಚ್ಚರ ಕೊಟ್ಟಿದ್ದೇವೆ : ಅನಿಲ್ ಕುಂಬ್ಳೆ
ಕೆಎಸ್ ಸಿಎ ಪ್ರತಿನಿಧಿ ದಯಾನಂದ್, ರಾವ್ ಸ್ಪಷ್ಟನೆ

ಕೆಎಸ್ ಸಿಎ ಪ್ರತಿನಿಧಿ ದಯಾನಂದ್, ರಾವ್ ಸ್ಪಷ್ಟನೆ

ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಆರೋಪವನ್ನು ಕೆಎಸ್​ಸಿಎ ಖಜಾಂಚಿ ದಯಾನಂದ್​ ಪೈ ತಳ್ಳಿ ಹಾಕಿದ್ದಾರೆ. ಕ್ಲಬ್​ ಹೌಸ್​ಗಳಿಗೆ ಆದ್ಯತೆ ನೀಡಿರುವುದು ಸತ್ಯ. ಕ್ಲಬ್​ ಹೌಸ್​ಗಳ ಅಭಿವೃದ್ದಿಗೆ ಸುಮಾರು ನೂರು ಕೋಟಿಗೂ ಅಧಿಕ ವೆಚ್ಚವಾಗಲಿದೆ. ಹೀಗಾಗಿ ಕೆಎಸ್​ಸಿಎ ವಿಶೇಷ ಸಭೆಯಲ್ಲಿ ಸುಮಾರು 125 ಕೋಟಿ ರೂಪಾಯಿ ಬಿಲ್​ಗಳಿಗೆ ಸಮ್ಮತಿ ಸೂಚಿಸಲಾಗಿದೆ ಎಂದರು.

ಜಗನ್ನಾಥ್ ರಾವ್: ಇಬ್ಬರಿಗೂ ಪರ್ಸನಲ್ ಈಗೋ ಜಾಸ್ತಿ. ನಿಮ್ಮ ತಪ್ಪುಗಳನ್ನು ಸರಿ ಮಾಡಿಕೊಂಡಿಲ್ಲ ಏಕೆ ಎಂದು ಪ್ರಶ್ನಿಸಿದರೆ ಗರಂ ಆದರು. ಅವರು ಕೊಟ್ಟಿರುವ ಸಾಫ್ಟ್ ವೇರ್ ತಗೊಂಡು ವನವಾಸಕ್ಕೆ ಹೋಗಬೇಕು ಅಷ್ಟೇ
ಶ್ರೀನಾಥ್ ಕುಂಬ್ಳೆ ಮೇಲೇಕೆ ಆರೋಪ

ಶ್ರೀನಾಥ್ ಕುಂಬ್ಳೆ ಮೇಲೇಕೆ ಆರೋಪ

* ರಾಜ್ಯ ಕ್ರಿಕೆಟ್ ಸಂಸ್ಥೆಯ ಅಮೃತಮಹೋತ್ಸವಕ್ಕೆ ತಗುಲುವ ಖರ್ಚು ವೆಚ್ಚದ ಬಗ್ಗೆ ಅಂದಿನ ಅಧ್ಯಕ್ಷ ಅನಿಲ್ ಕುಂಬ್ಳೆಯಾಗಲಿ, ಕಾರ್ಯದರ್ಶಿ ಶ್ರೀನಾಥ್ ಆಗಲಿ ಸದಸ್ಯರ ಜತೆ ಚರ್ಚಿಸದೆ 4 ಕೋಟಿ ರು ಖರ್ಚು ಮಾಡಿರುವ ಆರೋಪ.
* ಸ್ಥಳೀಯರನ್ನು ಬಿಟ್ಟು ಸಮಾರಂಭಕ್ಕೆ ರಿಚರ್ಡ್ ಹ್ಯಾಡ್ಲಿ ಕರೆ ತಂದಿದ್ದುಏಕೆ? ಎಂದು ಪ್ರಶ್ನೆ[ವಿವರ ಇಲ್ಲಿ ಓದಿ]

ಆಟಗಾರರ ವಿರೋಧವಾಗಿ ಕೆಪಿಎಲ್ ಆರಂಭ

ಆಟಗಾರರ ವಿರೋಧವಾಗಿ ಕೆಪಿಎಲ್ ಆರಂಭ

ಮಾಜಿ ಕ್ರಿಕೆಟರ್ ಗಳಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್ ಅವರು ಕರ್ನಾಟಕ ಪ್ರಿಮಿಯರ್ ಲೀಗ್ ಮತ್ತೆ ಆರಂಭಿಸಲು ಉತ್ಸಾಹ ತೋರಲಿಲ್ಲ, ಕೆಪಿಎಲ್ ನಿಂದ ಕರ್ನಾಟಕ ಕ್ರಿಕೆಟ್ ಗೆ ಮಾರಕ ಎಂದಿದ್ದರು.

ಆದರೆ, ಬ್ರಿಜೇಶ್ ಬಣ ಈ ಬಾರಿ ದಿವಂಗತ ಶ್ರೀಕಂಠದತ್ತ ಒಡೆಯರ್ ಹೆಸರಿನಲ್ಲಿ ಕೆಪಿಎಲ್ ಆರಂಭಿಸಿದೆ. ಇದರ ಬಗ್ಗೆ ಮಾಜಿ ಕ್ರಿಕೆಟರ್ಸ್ ನ ಸಲಹೆ ಸೂಚನೆಯನ್ನು ಕೇಳು ಗೋಜಿಗೆ ಹೋಗಿಲ್ಲ. ತಮಾಷೆ ಎಂದರೆ ಕೆಪಿಎಲ್ ವಿರೋಧಿಸಿದ್ದ ದ್ರಾವಿಡ್, ಕುಂಬ್ಳೆ ಇಬ್ಬರೂ ಐಪಿಎಲ್ ನಲ್ಲಿ ಆಡಿದ್ದರು.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X