ಕೊಲಂಬಿಯಾ ಮಣಿಸಿದ ಚಿಲಿ, ಅರ್ಜೆಂಟಿನಾ ಜತೆ ಫೈನಲ್ ವಾರ್

Posted By:
Subscribe to Oneindia Kannada

ಶಿಕಾಗೊ, ಜೂನ್ 23: ಅಮೆರಿಕ ವಿರುದ್ಧದ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್‌ನಲ್ಲಿ 4-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ಅರ್ಜೆಂಟೀನ ತಂಡ ಫೈನಲ್ ಸುತ್ತಿಗೆ ಪ್ರವೇಶಿಸಿದೆ. ಇನ್ನೊಂದೆಡೆ ಕೊಲಂಬಿಯಾವನ್ನು ಮಣಿಸಿದ ಚಿಲಿ ತಂಡ ಫೈನಲ್ ಹಂತ ತಲುಪಿದೆ.

ಬುಧವಾರ(ಜೂನ್ 22) ರಾತ್ರಿ ಚಿಲಿ ತಂಡ 2-0 ಅಂತರದಿಂದ ಕೊಲಂಬಿಯಾವನ್ನು ಮಣಿಸಿ ಮತ್ತೊಮ್ಮೆ ಕೋಪಾ ಅಮೆರಿಕಾ ಅಂತಿಮ ಹಣಾಹಣಿ ತಲುಪಿತು. ಹವಾಮಾನ ವೈಪರೀತ್ಯದಿಂದಾಗಿ ನಾಲ್ಕು ತಾಸಿಗೂ ಅಧಿಕ ಅವಧಿಯಲ್ಲಿ ಪಂದ್ಯ ನಡೆಯಿತು. ಜೂನ್ 26ರಂದು ಭಾನುವಾರ ಅರ್ಜೆಂಟೀನಾ ವಿರುದ್ಧ ಚಿಲಿ ಮತ್ತೊಮ್ಮೆ ಫೈನಲ್ ನಲ್ಲಿ ಸೆಣಸಲಿದೆ. ಕಳೆದ ವರ್ಷ ಇದೇ ಎರಡು ತಂಡಗಳು ಫೈನಲ್ ತಲುಪಿದ್ದವು.[ಕೋಪಾ ಅಮೆರಿಕಾದಿಂದ ಬ್ರೆಜಿಲ್ ತಂಡವನ್ನು ಹೊರಗಟ್ಟಿದ ಪೆರು]

Copa America: Chile down Colombia in 4-hour semi-final, to face Argentina in summit clash

ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಐದು ಬಾರಿ ವಿಶ್ವದ ವರ್ಷದ ಆಟಗಾರ ಪ್ರಶಸ್ತಿ ವಿಜೇತ ಆಟಗಾರ ಲಿಯೊನೆಲ್ ಮೆಸ್ಸಿ ಅವರ ದಾಖಲೆಯ 55ನೇ ಅಂತಾರಾಷ್ಟ್ರೀಯ ಗೋಲಿನ ಮೂಲಕದ ಅರ್ಜೆಂಟೀನಾದ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ಆದರು. ಜೊತೆಗೆ ತಂಡವನ್ನು ಫೈನಲ್ ಗೇರಿಸಿದರು.


ಮೆಸ್ಸಿ 112ನೆ ಪಂದ್ಯಗಳಲ್ಲಿ ಅರ್ಜೆಂಟೀನಾದ ಗಾಬ್ರಿಯೆಲ್ ಬಾಟಿಸ್ಟುಟ(78 ಪಂದ್ಯಗಳಲ್ಲಿ 54 ಗೋಲು)ಹೆಸರಲ್ಲಿದ್ದ ಗರಿಷ್ಠ ಗೋಲು ದಾಖಲೆಯನ್ನು ಮುರಿದ್ದಾರೆ. ಫೈನಲ್ ನಲ್ಲಿ ಚಿಲಿಗೆ ಈ ಮೂಲಕ ಭಯ ಹುಟ್ಟಿಸಿದ್ದಾರೆ.[ಕೋಪಾ ಅಮೆರಿಕಾಕ್ಕೆ 100ರ ಸಂಭ್ರಮ, 2016 ಟೂರ್ನಿ ಟೈಂ ಟೇಬಲ್]

1993ರ ಬಳಿಕ ಮೊದಲ ಬಾರಿ ಪ್ರಮುಖ ಟ್ರೋಫಿ ಜಯಿಸುವ ಗುರಿ ಅರ್ಜೆಂಟೀನಾ ಮುಂದಿದೆ. ಕ್ವಾರ್ಟರ್ ಫೈನಲ್ ನಲ್ಲಿ ಮೆಕ್ಸಿಕೋ ವಿರುದ್ಧ 7-0 ಅಂತರದ ಜಯ ದಾಖಲಿಸಿದ್ದ ಚಿಲಿಗೆ ಚಾರ್ಲ್ಸ್ ಅರಂಗ್ವೇಜ್ ಬಲ ಹೊಂದಿದೆ. ಲೀಗ್ ಹಂತದಲ್ಲಿ ಡಿ ಗುಂಪಿನ ಪಂದ್ಯದಲ್ಲಿ ಚಿಲಿಯನ್ನು 2-1 ಅಂತರದಲ್ಲಿ ಅರ್ಜೆಂಟೀನಾ ಸೋಲಿಸಿತ್ತು. (ಎಎಫ್ ಪಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chile stormed into the Copa America final here Wednesday (June 22), beating Colombia 2-0 in a weather-disrupted semi-final that took more than four hours to complete.
Please Wait while comments are loading...