ಬ್ರೆಜಿಲ್ ಫುಟ್ಬಾಲ್ ತಾರೆ ನೆತ್ತಿ ಮೇಲೆ ತೂಗಿದ ಟ್ರಾಫಿಕ್ ಲೈಟ್ ಕಂಬ

Posted By:
Subscribe to Oneindia Kannada

ಕೋಯಿಕ್ಕೋಡ್ (ಕೇರಳ), ಜ.25: ಫುಟ್ಬಾಲ್ ಟೂರ್ನಿಯೊಂದನ್ನು ಉದ್ಘಾಟಿಸಲು ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿರುವ ಬ್ರೆಜಿಲ್ ನ ಫುಟ್ಬಾಲ್ ಆಟಗಾರ ರೊನಾಲ್ಡಿನೋ ಅವರ ತಲೆ ಮೇಲೆ ಟ್ರಾಫಿಕ್ ಕಂಬ ಬೀಳುವುದು ಸ್ವಲ್ಪದ್ದರಲ್ಲೇ ಮಿಸ್ ಆದ ಘಟನೆ ನಡೆದಿದೆ.

ಐಎಎನ್ಎಸ್ ಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಐ ಎಂ ಶಾಸಕ ಎ ಪ್ರದೀಪ್ ಕುಮಾರ್, 'ರೊನಾಲ್ಡಿನೋ ಅವರಿದ್ದ ಕಾರು ಶಾಲೆಯ ಟ್ರಾಫಿಕ್ ಲೈಟ್ ಕಂಬ ವಾಹನದ ಮೇಲೆ ಬಿತ್ತು. ಆದರೆ, ಇದರಿಂದ ಅವರಿಗೆ ಏನೂ ಆಗಲಿಲ್ಲ. ಕಾರು ವೇಗವಾಗಿ ಮುಂದಕ್ಕೆ ಚಲಿಸಲಾಯಿತು. ಅದರೆ, ಈ ಘಟನೆ ಬಗ್ಗೆ ನಾವು ತನಿಖೆ ಕೈಗೊಂಡಿದ್ದೇವೆ' ಎಂದಿದ್ದಾರೆ.[ ಚಿತ್ರಗಳು : ಫೀಫಾ ವಿಶ್ವಕಪ್ ಪ್ರಶಸ್ತಿಗಳ ವಿಜೇತರು]

Close shave for Ronaldinho in Kerala as traffic light post falls

ಕೇರಳಕ್ಕೆ ಭೇಟಿ ನೀಡಿರುವ ಸೂಪರ್ ಸ್ಟಾರ್ ರೊನಾಲ್ಡಿನೊಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಫೆ.5 ರಿಂದ ಆರಂಭವಾಗಲಿರುವ ಸೈತ್ ನಾಗ್‌ಜೀ ಕಪ್ ಫುಟ್ಬಾಲ್ ಟೂರ್ನಮೆಂಟ್‌ ಅನ್ನು ರೊನಾಲ್ಡಿನೊ ಅವಧಿಗೆ ಮುನ್ನವೇ ಉದ್ಘಾಟಿಸಿದರು.

ಟೂರ್ನಿಯು ಫೆ.5 ರಿಂದ 21ರ ತನಕ ನಡೆಯಲಿದೆ. ರೊನಾಲ್ಡಿನೊರಿಗೆ ಅನುಕೂಲವಾಗುವಂತೆ ಟೂರ್ನಿಯ ಉದ್ಘಾಟನೆಯನ್ನು ಮುಂಗಡವಾಗಿ ಮಾಡಲಾಗಿದೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ. ಸುಮಾರು 21 ವರ್ಷಗಳ ಬಳಿಕ ಈ ಟೂರ್ನಿಗೆ ಚಾಲನೆ ಸಿಗುತ್ತಿದ್ದು, ರೊನಾಲ್ಡಿನೋರಂಥ ದಿಗ್ಗಜ ಆಟಗಾರನನ್ನು ಕರೆಸಿ ಉದ್ಘಾಟನೆ ಮಾಡಲಾಗಿದೆ.

2002ರ ವಿಶ್ವಕಪ್ ವಿಜೇತ ಬ್ರೆಜಿಲ್ ತಂಡದಲ್ಲಿದ್ದ ರೊನಾಲ್ಡಿನೋ ಅವರು ಬ್ರೆಜಿಲ್ ಪರ 97 ಪಂದ್ಯಗಳನ್ನಾಡಿ 33 ಗೋಲುಗಳನ್ನು ಗಳಿಸಿದ್ದಾರೆ. ಪ್ಯಾರೀಸ್ ಸೈಂಟ್ ಜರ್ಮೈನ್, ಬಾರ್ಸಿಲೋನಾ ಹಾಗೂ ಎಸಿ ಮಿಲಾನ್ ಕ್ಲಬ್ ಪರ ಕೂಡಾ ಆಡಿರುವ ಜನಪ್ರಿಯ ಆಟಗಾರ.

ಬಾರ್ಸಿಲೋನದ ಮಾಜಿ ಆಟಗಾರ ರೊನಾಲ್ಡಿನೊ ನಾಗ್‌ಜೀ ಇಂಟರ್‌ನ್ಯಾಶನಲ್ ಫುಟ್ಬಾಲ್ ಕ್ಲಬ್ ಟೂರ್ನಿಯ ರಾಯಭಾರಿ ಆಗಿದ್ದಾರೆ.

ದಕ್ಷಿಣ ಅಮೆರಿಕ ಹಾಗೂ ಯುರೋಪ್‌ನ ಕ್ಲಬ್ ಆಟಗಾರರು ಇದೇ ಮೊದಲ ಬಾರಿ ಭಾರತದಲ್ಲಿ ನಡೆಯಲಿರುವ ಕ್ಲಬ್ ಟೂರ್ನಿಯಲ್ಲಿ ಆಡಲಿದ್ದಾರೆ. 1995ರಲ್ಲಿ ನಡೆದಿದ್ದ ಈ ಟೂರ್ನಿಯ ಕಪ್ ಫೈನಲ್ ನಲ್ಲಿ ಗೋವಾದ ಡೆಂಪೋ ತಂಡವನ್ನು ಸೋಲಿಸಿ ಜೆಸಿಟಿ ಮಿಲ್ಸ್ ತಂಡ ಕಪ್ ಎತ್ತ್ತಿತ್ತು. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An old rusted traffic light post came crashing down, just missing the vehicle carrying former Brazilian football superstar Ronaldinho on Monday morning (January 25) near here.
Please Wait while comments are loading...