ಬ್ರಿಟಿಷ್ ಪತ್ರಕರ್ತನ ವಿರುದ್ಧ ಭಾರತೀಯರು ತಿರುಗಿ ಬಿದ್ದಿದ್ದೇಕೆ?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 24: ರಿಯೋ ಒಲಿಂಪಿಕ್ಸ್ 2016ರಲ್ಲಿ ಭಾರತಕ್ಕೆ ಎರಡು ಪದಕ ಬಂದಿದ್ದಕ್ಕೆ ಸಂಭ್ರಮಿಸುತ್ತಿರುವ ರೀತಿಯನ್ನು ಟೀಕಿಸಿದ್ದ ಬ್ರಿಟಿಷ್ ಪತ್ರಕರ್ತನ ವಿರುದ್ಧ ಕ್ರೀಡಾಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಪತ್ರಕರ್ತ ಪಿಯರ್ಸ್ ಮಾರ್ಗನ್ ಟ್ವೀಟ್ ಗೆ ಪ್ರತಿ ಟ್ವೀಟ್ ಗಳ ದಾಳಿ ಮುಂದುವರೆದಿದೆ. [ಪಿವಿ ಸಿಂಧು ಯಾರು?]

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಭಾರತದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಹಾಗೂ ಬಾಡ್ಮಿಂಟನ್ ಪಿವಿ ಸಿಂಧು ಇಬ್ಬರು ಪದಕ ಗೆದ್ದ ಸಂಭ್ರಮಾಚರಣೆಯಲ್ಲಿ ಭಾರತೀಯರು ಮುಳುಗಿದ್ದಾರೆ. [ಸಾಕ್ಷಿ, ಸಿಂಧು, ದೀಪಾಗೆ ವಜ್ರದ ನೆಕ್ಲೇಸ್ ಉಡುಗೊರೆ]

ಹರ್ಯಾಣದ ಸಾಕ್ಷಿ ಮಲಿಕ್ ಅವರು 58 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರೆ, ಪಿವಿ ಸಿಂಧು ಅವರು ಬಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.[ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?]

ಮಾರ್ಗನ್ ಟ್ವೀಟ್ ನಲ್ಲಿ ಏನಿದೆ?: 1.2 ಬಿಲಿಯನ್ ಜನರಿರುವ ದೇಶದಲ್ಲಿ 2 ಪದಕ ಗೆದ್ದ(ಸೋಲುವ ಪದಕ)ಸಂಭ್ರಮಾಚರಣೆ ಮುಜುಗರ ತರಿಸುವುದಿಲ್ಲವೇ? ಎಂದು ಮಂಗಳವಾರ ಟ್ವೀಟ್ ಮಾಡಿದ್ದರು. ಹಿರಿಯ ಪತ್ರಕರ್ತ ಮಾರ್ಗನ್ ಅವರ ಟ್ವೀಟ್ ಬಗ್ಗೆ ಪ್ರತಿಕ್ರಿಯೆಗಳು ಇಲ್ಲಿವೆ...[ಬೆಳ್ಳಿ ಪದಕ ಗೆದ್ದ ಪಿವಿ ಸಿಂಧು ಈಗ 13 ಕೋಟಿ ರು ಒಡತಿ]

ಮಾರ್ಗನ್ ಟ್ವೀಟ್ ನಲ್ಲಿ ಏನಿದೆ?

ಮಾರ್ಗನ್ ಟ್ವೀಟ್ ನಲ್ಲಿ ಏನಿದೆ?

1.2 ಬಿಲಿಯನ್ ಜನರಿರುವ ದೇಶದಲ್ಲಿ 2 ಪದಕ ಗೆದ್ದ(ಸೋಲುವ ಪದಕ)ಸಂಭ್ರಮಾಚರಣೆ ಮುಜುಗರ ತರಿಸುವುದಿಲ್ಲವೇ? ಎಂದು ಮಂಗಳವಾರ ಟ್ವೀಟ್ ಮಾಡಿದ್ದರು. ಹಿರಿಯ ಪತ್ರಕರ್ತ ಮಾರ್ಗನ್ ಅವರ ಟ್ವೀಟ್ ಬಗ್ಗೆ ಪ್ರತಿಕ್ರಿಯೆಗಳು ಇಲ್ಲಿವೆ

ಸಾಧನೆಗೂ ಜನಸಂಖ್ಯೆಗೂ ಸಂಬಂಧವಿಲ್ಲ

ಸಾಧನೆಗೂ ಜನಸಂಖ್ಯೆಗೂ ಸಂಬಂಧವಿಲ್ಲ, ಎಷ್ಟು ಮಂದಿ ಬ್ರಿಟಿಷರು ನಾಸಾದಲ್ಲಿದ್ದಾರೆ?

ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಕ್ರೀಡೆಗಳಿಗೆ ಬೆಂಬಲವಿದೆ

ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಕ್ರೀಡೆಗಳಿಗೆ ಬೆಂಬಲವಿದೆ, ನಮ್ಮ ರಾಷ್ಟ್ರದಲ್ಲಿ ಸಿಗುವ ಸೌಲಭ್ಯದ ಬಗ್ಗೆ ನಿಮಗೆ ಗೊತ್ತಿದೆಯೇ

ಇಷ್ಟಕ್ಕೂ ನಿಮಗೆ ಏಕೆ ಉರಿ?

ಸಣ್ಣಗ್ರಾಮದಿಂದ ಬಂದವರ ಈ ಸಾಧನೆ ಸಂಭ್ರಮಿಸುವುದರಿಂದ ನಿಮಗೆ ಏಕೆ ಉರಿ?

1966ರಿಂದ ಇಂಗ್ಲೀಷ್ ಫುಟ್ಬಾಲ್ ಏಳಿಗೆ ಕಂಡಿಲ್ಲ ಏಕೆ?

1966ರಿಂದ ಇಂಗ್ಲೀಷ್ ಫುಟ್ಬಾಲ್ ಏಳಿಗೆ ಕಂಡಿಲ್ಲ ಏಕೆ?

ತೀರಾ ಕೆಳಮಟ್ಟದ ಕಾಮೆಂಟ್ ಕೂಡಾ ಬಂದಿದೆ

ಮಾರ್ಗನ್ ಟ್ವೀಟ್ ಗೆ ತೀರಾ ಕೆಳಮಟ್ಟದ ಕಾಮೆಂಟ್ ಕೂಡಾ ಬಂದಿದೆ

ಐಒಸಿಗೆ ಮನವಿ ಮಾಡಿ ಹೊಸ ಕ್ರೀಡೆ ಸೇರ್ಪಡೆ ಮಾಡಿ

ಐಒಸಿಗೆ ಮನವಿ ಮಾಡಿ ಹೊಸ ಕ್ರೀಡೆ(ಫೋನ್ ಟ್ಯಾಪಿಂಗ್) ಸೇರ್ಪಡೆ ಮಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Eminent British journalist Piers Morgan was slammed on Twitter by Indian fans after he tweeted mocking India for celebrating the country's performance at the Rio Olympics 2016.
Please Wait while comments are loading...