ರಗ್ಬಿ ಆಟಗಾರ್ತಿ ಮದ್ವೆಗೆ ಗೆಳತಿಯ ಚುಂಬನ ಮುದ್ರೆ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 10 : ರಿಯೋ ಒಲಿಂಪಿಕ್ಸ್​ ಗೇಮ್ಸ್ ಒಂದು ವಿಶಿಷ್ಟ ಹಾಗೂ ಪ್ರಥಮ ಬಾರಿಗೆ ಒಂದು ಮದುವೆ ಪ್ರಪೋಸ್, ಕಿಸ್ ಗೆ ಸಾಕ್ಷಿಯಾಗಿದೆ. ಬ್ರೆಜಿಲ್ ನ ರಗ್ಬಿ ಆಟಗಾರ್ತಿಗೆ ಆಕೆಯ ಗೆಳತಿಯಿಂದ ಬಂದ ಮದುವೆ ಆಹ್ವಾನಕ್ಕೆ ಸಿಹಿ ಚುಂಬನದ ಒಪ್ಪಿಗೆ ಮುದ್ರೆ ಸಿಕ್ಕಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಬ್ರೆಜಿಲ್​ನ ರಗ್ಬಿ ಸೆವೆನ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಆಸ್ಟ್ರೇಲಿಯಾ ತಂಡ ಸೋಲಿಸಿ ಚಿನ್ನದ ಪದಕ ಗೆದ್ದ ಬಳಿಕ ಮೈದಾನದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

Brazilian Rugby Player Cerullo accept Her Girlfriend’s Marriage Proposal at the Olympics

ಇಬ್ಬರು ಮಹಿಳೆಯರ ಮದುವೆ ಪ್ರೊಪೊಸಲ್ ಪ್ರಸಂಗಕ್ಕೆ ಸಹ ಆಟಗಾರರು ಸಾಕ್ಷಿಯಾಗಿ, ಚಪ್ಪಾಳೆ ತಟ್ಟಿ ಶುಭಹಾರೈಸಿದ್ದಾರೆ.[ರಿಯೋ ಒಲಿಂಪಿಕ್ಸ್ 2016 : ಪತ್ರಕರ್ತರಿದ್ದ ಬಸ್ಸಿನ ಮೇಲೆ ದಾಳಿ]

ಬ್ರೆಜಿಲ್ ​ನ ಆಟಗಾರ್ತಿ ಇಸಾದೊರ ಸೆರೆಲ್ಲೊ (25) ಮುಂದೆ ಮದುವೆ ಪ್ರಸ್ತಾಪ ಇಟ್ಟಿದ್ದು ಆಕೆಯ ಗೆಳತಿ ಹಾಗೂ ರಗ್ಬಿ ಫೈನಲ್ಸ್ ನಡೆದ ದಿಯೊದೊರಾ ಕ್ರೀಡಾಂಗಣದ ಮ್ಯಾನೆಜರ್ ಮಾರ್ಜೊರಿ ಎನ್ಯಾ(28) .

ಸೆರೆಲ್ಲೋ ಬೆರಳಿಗೆ ಉಂಗುರದಂತೆ ಹಳದಿ ಬಣ್ಣದ ರಿಬ್ಬನ್ ಕಟ್ಟುವ ಮೂಲಕ ಎನ್ಯಾ ಮದುವೆ ಬಗ್ಗೆ ಕೇಳಿದ್ದಾರೆ.


ಬ್ರೆಜಿಲ್ ಮೂಲದವರಾದರೂ ಸೆರೆಲ್ಲೋ ಓದಿದ್ದು ಬೆಳೆದಿದ್ದು ಉತ್ತರ ಕರೋಲಿನಾ ಹಗೂ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ, ಓದಿನ ನಡುವೆ ರಿಯೋದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ.[ಹಾಕಿ: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಜಯ]

ಗೆಳತಿ ಎನ್ಯಾಳ ಮನವಿ ಒಪ್ಪಿದ ಸೆರೆಲ್ಲೋ ಕ್ರೀಡಾಂಗಣದಲ್ಲೆ ಆಕೆಯನ್ನು ಅಪ್ಪಿಕೊಂಡು ಚುಂಬಿಸುವ ಮೂಲಕ ಮದುವೆಗೆ ಒಪ್ಪಿಗೆ ಮುದ್ರೆ ಹಾಕಿದ್ದಾರೆ. ನಾವಿಬ್ಬರು ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ, ಸರಿಯಾದ ಸಮಯಕ್ಕೆ ಕಾಯುತ್ತಿದ್ದೆ ಎಂದು ಎನ್ಯಾ ಭಾವುಕರಾಗಿ ಹೇಳಿದರು.

ರಿಯೋದಲ್ಲಿ ಸಲಿಂಗಿ, ತೃತಿಯಲಿಂಗಿ ಅಥ್ಲಿಟ್​ಗಳ ಸಮೇತ ಮೂವರು ಕೋಚ್​ಗಳು ಸದ್ಯ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿರುವುದು ವಿಶೇಷ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Brazilian women’s rugby player accepting a marriage proposal from her girlfriend of two years. Marjorie Enya, a 28-year-old manager at Deodoro Stadium, asked 25-year-old Isadora Cerullo to marry her after Australia won gold over New Zealand in the women’s rugby sevens finals.
Please Wait while comments are loading...