ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೋಪಾ ಅಮೆರಿಕಾದಿಂದ ಬ್ರೆಜಿಲ್ ತಂಡವನ್ನು ಹೊರಗಟ್ಟಿದ ಪೆರು

By Mahesh

ಬೆಂಗಳೂರು, ಜೂಣನ್ 13: ಶತಕದ ಸಂಭ್ರಮದಲ್ಲಿರುವ ಕೋಪಾ ಅಮೆರಿಕಾ ಫುಟ್ಬಾಲ್ ಟೂರ್ನಿಯಿಂದ ಬಲಿಷ್ಠ ಬ್ರೆಜಿಲ್ ತಂಡ ಹೊರ ನಡೆದಿದೆ. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಪೆರು ತಂಡದೆದೆರು ಒಂದು ಗೋಲಿನ ಅಂತರದಲ್ಲಿ ಬ್ರೆಜಿಲ್ ಸೋಲು ಕಂಡಿದೆ.

ಕ್ವಾರ್ಟರ್ ಫೈನಲ್ ಹಂತ ಕೂಡಾ ತಲುಪದೇ ಲೀಗ್ ಹಂತದಿಂದಲೇ ಬ್ರೆಜಿಲ್ ಹೊರಬಿದ್ದಿದ್ದು 1987 ರ ನಂತರ ಇದು ಅತ್ಯಂತ ಕಳಪೆ ಪ್ರದರ್ಶನವಾಗಿದೆ.

ಬಿ ಗುಂಪಿನ ಪಂದ್ಯದಲ್ಲಿ ಬ್ರೆಜಿಲ್ ವಿರುದ್ಧ ಎರಡನೇ ಅವಧಿಯಲ್ಲಿ ಪೆರುವಿನ ರಾಲ್ ರೂಡಿಯಾಜ್ ಹೊಡೆದ ಏಕೈಕ ಗೋಲು ನಿರ್ಣಾಯಕವಾಯಿತು.[ಕೋಪಾ ಅಮೆರಿಕಾ 2016 ಟೂರ್ನಿ ಟೈಂ ಟೇಬಲ್]

Brazil crash out of Copa America after Peru upset

ಐದು ಬಾರಿ ವಿಶ್ವಚಾಂಪಿಯನ್ ಬ್ರೆಜಿಲ್ ಗೆ ಲಕ್ ಕೂಡಾ ಸಾಥ್ ನೀಡಲಿಲ್ಲ. ಪೆರುವಿನ ರಾಲ್ ಹೊಡೆದ ಗೋಲಿಗೆ ತಲೆ ಜೊತೆಗೆ ಕೈ ಕೂಡಾ ಸಾಥ್ ನೀಡಿದ್ದು ಕಾಣುತ್ತಿತ್ತು. ಆದರೆ,ರೆಫ್ರಿ ಆಗಲೇ ಗೋಲ್ ಎಂದು ಘೋಷಿಸಿಯಾಗಿತ್ತು.

ಬ್ರೆಜಿಲ್ ಕಳಪೆ ಪ್ರದರ್ಶನದಿಂದಾಗಿ ತಂಡ ಕೋಚ್, ಒಂದು ಕಾಲದ ವಿಶ್ವಕಪ್ ವಿಜೇತ ತಂಡದ ಸದಸ್ಯ ಡುಂಗಾ ಅವರ ಸ್ಥಾನ ಅಲುಗಾಡುತ್ತಿದೆ. ಬ್ರೆಜಿಲ್ ವಿರುದ್ಧ ಅದೃಷ್ಟದ ಗೆಲುವು ಸಾಧಿಸಿರುವ ಪೆರು ಈಗ ಕ್ವಾರ್ಟರ್ ಫೈನಲ್ ನಲ್ಲಿ ಕೊಲಂಬಿಯಾವನ್ನು ಎದುರಿಸಲಿದೆ. (ಎಎಫ್ ಪಿ/ಪಿಟಿಐ)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X