ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿ ವಿಧಿವಶ

Posted By:
Subscribe to Oneindia Kannada

ಫಿನಿಕ್ಸ್, ಜೂನ್ 04 : ಬಾಕ್ಸಿಂಗ್ ಲೋಕದ ದಂತಕಥೆ ಮೊಹಮ್ಮದ್ ಅಲಿ ಅವರು ವಿಧಿವಶರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಅಮೆರಿಕಾದ ಫಿನಿಕ್ಸ್ ನಲ್ಲಿರುವ ಆಸ್ಪತ್ರೆಯಲ್ಲಿ ಮೊಹಮ್ಮದ್ ಅಲಿ (74) ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.

muhammad ali

ಮೊಹಮ್ಮದ್ ಅಲಿ ಅವರು ಹತ್ತು ವರ್ಷಗಳಿಂದ ಪಾರ್ಕಿನ್ಸನ್ ಖಾಯಿಲೆಯಿಂದ ಬಳಲುತ್ತಿದ್ದರು. ತಮ್ಮ ಆರೋಗ್ಯಕ್ಕೆ ಅನುಕೂಲವಾದ ವಾತಾವರಣವಿದ್ದ ಅರಿಜೋನಾದಲ್ಲಿ ಅವರು ವಾಸ್ತವ್ಯ ಹೂಡಿದ್ದರು. [ನನ್ನ ಗೆಲುವು ಹುತಾತ್ಮ ಯೋಧರಿಗೆ ಅರ್ಪಣೆ: ವಿಜೇಂದರ್]

1942ರ ಜನವರಿ 17ರಂದು ಮೊಹಮ್ಮದ್ ಅಲಿ ಜನಿಸಿದ್ದರು. ಹೆವಿವೇಟ್ ಬಾಕ್ಸಿಂಗ್‌ನಲ್ಲಿ ಮೂರು ಬಾರಿ ಅವರು ವಿಶ್ವ ಚಾಂಪಿಯನ್ ಆಗಿದ್ದರು. 1971ರ ಮಾರ್ಚ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಜೋ ಫ್ರೇಜರ್ ಮತ್ತು ಅಲಿ ನಡುವಿನ ಪಂದ್ಯ ವಿಶ್ವದ ಗಮನ ಸೆಳೆದಿತ್ತು. ಫೈಟ್ ಆಫ್‌ ದಿ ಸೆಂಚುರಿ ಎಂದೇ ಪಂದ್ಯ ಪ್ರಸಿದ್ಧಿ ಪಡೆದಿದೆ.

1981ರಲ್ಲಿ ಮೊಹಮ್ಮದ್ ಅಲಿ ಅವರು ಬಾಕ್ಸಿಂಗ್‌ನಿಂದ ನಿವೃತ್ತರಾಗಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಆಡಿದ ಪಂದ್ಯಗಳ ಪೈಕಿ 56 ರಲ್ಲಿ ಗೆಲುವು ಸಾಧಿಸಿರುವ ಅಲಿ ಅವರು 5 ಪಂದ್ಯಗಳಲ್ಲಿ ಮಾತ್ರ ಸೋಲು ಅನುಭವಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Boxing legend Muhammad Ali (74) no more. Ali died at a Phoenix-area hospital, where he had spent the past few days being treated for respiratory complications.
Please Wait while comments are loading...