ವಿಜೇಂದರ್ ಸಿಂಗ್ ಗೆ ಸತತ 5ನೇ ನಾಕೌಟ್ ಗೆಲುವು

Posted By:
Subscribe to Oneindia Kannada

ಲಂಡನ್, ಮೇ 01: ಭಾರತದ ಹೆಮ್ಮೆಯ ಪ್ರೋ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಸತತ ಐದನೇ ಬಾರಿಎಗ್ ನಾಕೌಟ್ ಗೆಲುವು ಸಾಧಿಸಿದ್ದಾರೆ. ಫ್ರಾನ್ಸಿನ ಬಾಕ್ಸರ್ ಮಾಟಿಯಾಜ್ ರಾಯರ್ ವಿರುದ್ಧ ಶನಿವಾರ ನದೆದ ಪಂದ್ಯದಲ್ಲಿ ವಿಜೇಂದರ್ ನಿರೀಕ್ಷಿತವಾಗಿ ಸುಲಭ ಜಯ ದಾಖಲಿಸಿದರು.

ಸೂಪರ್ ಮಿಡ್ಲ್​ವೇಟ್ ವಿಭಾಗದ 6 ಸುತ್ತಿನ ಪಂದ್ಯದಲ್ಲಿ ವಿಜೇಂದರ್ ಅವರು 5ನೇ ಸುತ್ತಿನಲ್ಲೇ ಜಯಭೇರಿ ಬಾರಿಸಿದರು. 5ನೇ ಸುತ್ತಿನ ಮೊದಲ ನಿಮಿಷದಲ್ಲೇ ವಿಜಯ ಒಲಿದು ಬಂದಿತು. ವಿಜೇಂದರ್ ಅವರು ಎಚ್ಚರಿಕೆಯ ಆಟವಾಡುತ್ತಾ ಹೆಚ್ಚು ಹೊತ್ತು ಕಳೆದಿದ್ದು ಗಮನಾರ್ಹ. ಫ್ರಾನ್ಸಿನ ಬಾಕ್ಸರ್ ಕೂಡಾ ರಕ್ಷಣಾತ್ಮಕ ಆಟದಲ್ಲೇ ಹೆಚ್ಚಿನ ಸಮಯ ಕಳೆದರು.[ನನ್ನ ಗೆಲುವು ಹುತಾತ್ಮ ಯೋಧರಿಗೆ ಅರ್ಪಣೆ: ವಿಜೇಂದರ್]

Boxing: India's Vijender Singh registers 5th consecutive pro win

ಆದರೆ, 30 ವರ್ಷ ವಯಸ್ಸಿನ ಹರ್ಯಾಣದ ಬಾಕ್ಸರ್ ವಿಜೇಂದರ್ ಅವರು ತಮ್ಮ ಎತ್ತರ ದೇಹದ ಲಾಭ ಪಡೆದು ರಾಯರ್ ಗೆ ಪಂಚ್ ಕೊಟ್ಟು ರಕ್ತ ಸುರಿಯುವಂತೆ ಮಾಡಿದರು. ಈ ಸಮಯದಲ್ಲಿ ರೆಫ್ರಿ ಪಂದ್ಯ ನಿಲ್ಲಿಸಿದರು. ವೈದ್ಯರು ಬಂದು ಪರೀಕ್ಷಿಸಿದ ಬಳೀಕ ಪಂದ್ಯವನ್ನು ಅಲ್ಲಿಗೆ ಮುಕ್ತಾಯಗೊಳಿಸಲಾಯಿತು.

ಈ ಪಂದ್ಯಕ್ಕೂ ಮುನ್ನ ಎಕೋ ಅರೇನಾದಲ್ಲಿ ಹಾವಿನ ರಕ್ತ ಕುಡಿದು ತಯಾರಿ ನಡೆಸಿದ್ದ ಹಂಗೇರಿಯ ಅಲೆಗ್ಸಾಂಡರ್ ಹೊರ್ವಾತ್ ಅವರನ್ನುವಿಜೇಂದರ್ ಸೋಲಿಸಿ, ಗೆಲುವನ್ನು ಪಠಾಣ್ ಕೋಟ್ ಹಾಗೂ ಜಮ್ಮುವಿನಲ್ಲಿ ಹುತಾತ್ಮರಾದ ಯೋಧರಿಗೆ ಅರ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
London: Vijender Singh registered the fifth consecutive win of his fledgling professional career with a technical knockout of Matiouze Royer of France at the Copper Box Arena here on Saturday (April 30).
Please Wait while comments are loading...