ರಿಯೋ ಬಾಕ್ಸಿಂಗ್ : ಭಾರತದ ವಿಕಾಸ್ ಪ್ರೀ ಕ್ವಾರ್ಟರ್ ಫೈನಲಿಗೆ ಲಗ್ಗೆ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 10: ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ವಿಕಾಸ್ ಕೃಷ್ಣನ್ ಅವರು ರಿಯೋ ಒಲಿಂಪಿಕ್ಸ್ ನ 75 ಕೆ.ಜಿ ಬಾಕ್ಸಿಂಗ್ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಅಮೆರಿಕದ 18 ವರ್ಷ ವಯಸ್ಸಿನ ಚಾರ್ಲ್ಸ್ ಕಾನ್ವೇಲ್ ವಿರುದ್ಧ ಗೆಲುವು ದಾಖಲಿಸಿದಾರೆ. 24ರ ಹರೆಯದ ವಿಕಾಸ್ ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದರು. ಮೊದಲ ಸುತ್ತಿನಲ್ಲಿ 3-0 ಅಂತರದಲ್ಲಿ ಗೆಲುವು ಸಾಧಿಸಿದರು.

Boxer Vikas Krishan

ರೌಂಡ್ 32ನಲ್ಲಿ ಎಲ್ಲಾ ಮೂರು ಸುತ್ತಿನಲ್ಲಿ ಉತ್ತಮ ಪಂಚ್ ನೀಡುವ ಮೂಲಕ ಹರ್ಯಾಣದ ಬಾಕ್ಸರ್ ಮುಂದಿನ ಹಂತಕ್ಕೇರಿದರು.

ಅಂತಿಮವಾಗಿ 29-28, 29-28, 29-28 ಅಂತರದಲ್ಲಿ ವಿಕಾಸ್ ಗೆ ಜಯ ಲಭಿಸಿತು. ವಿಕಾಸ್ ಪ್ರೀ ಕ್ವಾಟರ್ ಫೈನಲ್​ನಲ್ಲಿ ಟರ್ಕಿ ತಂಡದ ಒಂಡರ್ ಸಿಪಲ್​ರನ್ನು ಎದುರಿಸಲಿದ್ದಾರೆ. ವಿಕಾಸ್ ಸಾಧನೆಗೆ ಹರ್ಯಾಣ ಪೊಲೀಸರು ಹರ್ಷ ವ್ಯಕ್ತಪಡಿಸಿದ್ದಾರೆ. ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ವಿಕಾಸ್ ಕಾರ್ಯನಿರ್ವಹಿಸುತ್ತಾರೆ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rio de Janeiro : Vikas Krishan Yadav gave India's boxing campaign a rousing start at the Rio Olympics with a dominant victory over Charles Conwell of the US at the Riocentrio Pavilion here.
Please Wait while comments are loading...