ನನ್ನ ಗೆಲುವು ಹುತಾತ್ಮ ಯೋಧರಿಗೆ ಅರ್ಪಣೆ: ವಿಜೇಂದರ್

Posted By:
Subscribe to Oneindia Kannada

ಲಿವರ್‌ಪೂಲ್, ಮಾರ್ಚ್ 14: ಭಾರತದ ಸ್ಟಾರ್ ಬಾಕ್ಸರ್ ವಿಜೇಂದ್ರ ಸಿಂಗ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಗೆಲುವಿನ ಪಂಚಿಂಗ್ ಆಟ ಮುಂದುವರೆಸಿದ್ದಾರೆ. ಎಕೋ ಅರೇನಾದಲ್ಲಿ ಹಂಗೇರಿಯ ಅಲೆಗ್ಸಾಂಡರ್ ಹೊರ್ವಾತ್ ಅವರನ್ನು ಸೋಲಿಸಿದ ವಿಜೇಂದರ್ ಈ ಗೆಲುವನ್ನು ಪಠಾಣ್ ಕೋಟ್ ಹಾಗೂ ಜಮ್ಮುವಿನಲ್ಲಿ ಹುತಾತ್ಮರಾದ ಯೋಧರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.

ವಿಜೇಂದರ್ ಸಿಂಗ್ ರನ್ನು ಸೋಲಿಸಲು ಹಾವಿನ ರಕ್ತ ಕುಡಿದು ತಯಾರಿ ನಡೆಸಿದ್ದ 20 ವರ್ಷದ ಹಂಗೇರಿಯ ಹೊರ್ವಾತ್ ಕೇವಲ ಮೂರು ಸುತ್ತುಗಳಲ್ಲೇ ರಿಂಗ್ ನಲ್ಲಿ ಸುಸ್ತಾಗಿ ಕುಸಿದರು. ಬಾಕ್ಸಿಂಗ್ ರಿಂಗ್ ನಿಂದ ನಿವೃತ್ತರಾಗುವಂತೆ ಮಾಡಿದ ವಿಜೇಂದರ್, 75 ಕೆ.ಜಿ. ವಿಭಾಗದಲ್ಲಿ ಸತತ ನಾಲ್ಕು ಗೆಲುವು ಸಾಧಿಸಿದ್ದಾರೆ.[ವಿಜೇಂದರ್ ಸೋಲಿಸಲೆಂದೇ ಹಾವಿನ ರಕ್ತ ಹೀರುತ್ತಿರುವ ಅಲೆಕ್ಸಾಂಡರ್!]

Boxer Vijender Singh dedicates win to Indian military martyrs

ಇದಕ್ಕೂ ಮುನ್ನ ಆರಂಭಿಕ ಹಣಾಹಣಿಯಲ್ಲಿ ಹರ್ಯಾಣ ಮೂಲದ ಬಾಕ್ಸರ್, ಇಂಗ್ಲೆಂಡ್‌ನ ಸೋನಿ ವಿತಿಂಗ್, ಡೀನ್ ಗಿಲೆನ್ ಅವರನ್ನು ಸೋಲಿಸಿದ್ದಾರೆ. ಮೂರನೇ ಪಂದ್ಯದಲ್ಲಿ ಬಲ್ಗೇರಿಯಾದ ಸಮೆಟ್ ಹ್ಯುಸನೋವ್ ಕೂಡಾ ವಿಜೇಂದರ್ ಗೆ ಶರಣಾಗಿದ್ದರು.

"ಇತರ ಎದುರಾಳಿಗಳಿಗೆ ಹೋಲಿಸಿದರೆ ಆತ ಅನುಭವಿ ಬಾಕ್ಸರ್. ಇದಕ್ಕಾಗಿ ನನಗೆ ಒಂದು ತಿಂಗಳು ಹೆಚ್ಚು ತರಬೇತಿಯೂ ಸಿಕ್ಕಿತ್ತು. ಆತನ ಕೈಗಳಿಗೆ ಏನಾಯಿತು ಎಂದು ನನಗೆ ತಿಳಿಯದು. ಅದಕ್ಕೆ ಆತ ನೆಪಗಳನ್ನು ಹೇಳಬಹುದು. ನನಗೆ ಇದು ನಾಲ್ಕನೇ ಜಯವಾಗಿರುವುದರಿಂದ ಸಂತಸವಾಗಿದೆ" ಎಂದು ವಿಜೇಂದರ್ ಪ್ರತಿಕ್ರಿಯಿಸಿದ್ದಾರೆ.

2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಭಾರತ ಪರ ಕಂಚಿನ ಪದಕ ಗೆದ್ದಿದ್ದ ವಿಜೇಂದರ್ ಸಿಂಗ್ ಅವರು ವೃತ್ತಿಪರ ಬಾಕ್ಸಿಂಗ್ ನ ಮುಂದಿನ ಪಂದ್ಯವನ್ನು ಏಪ್ರಿಲ್ 02ರಂದು ಆಡಲಿದ್ದಾರೆ. ವಿಜೇಂದರ್ vs ಅಲೆಕ್ಸಾಂಡರ್ ಬಾಕ್ಸಿಂಗ್ ನೋಡಿ:


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian pugilist Vijender Singh dedicated his fourth consecutive victory in professional boxing to the martyrs of Indian armed forces after defeating Hungary's Alexander Horvath at the Liverpool Echo Arena here.
Please Wait while comments are loading...