ಒಲಿಂಪಿಕ್ಸ್ ಗೆ ಬಾಕ್ಸರ್ ಶಿವ ಆಯ್ಕೆ, ಮೇರಿಗೆ ಸದ್ಯಕ್ಕೆ ನಿರಾಸೆ!

Posted By:
Subscribe to Oneindia Kannada

ಕ್ವಿನಾನ್(ಚೀನಾ), ಏಪ್ರಿಲ್ 01: ರಿಯೋ ಒಲಿಂಪಿಕ್ಸ್ ಅರ್ಹತೆಗಾಗಿ ನಡೆದಿರುವ ಏಷ್ಯನ್ ಹಾಗೂ ಓಷಿಯಾನಿಕ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್‌ಗೆ ಪ್ರವೇಶಿಸಿರುವ ಭಾರತದ ಶಿವ ಥಾಪ (56 ಕೆಜಿ) ಈ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಕೊಂಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಮೊದಲ ಬಾಕ್ಸರ್ ಎನಿಸಿಕೊಂಡಿದ್ದಾರೆ.

ಭಾರತದ ಹಿರಿಯ ಬಾಕ್ಸಿಂಗ್ ಸ್ಟಾರ್ ಎಂ.ಸಿ. ಮೇರಿಕೋಮ್ (51 ಕೆಜಿ) ಟೂರ್ನಿಯ ಸೆಮಿ ಫೈನಲ್‌ನಲ್ಲಿ ಸೋ ಲು ಅನುಭವಿಸಿದ ಹಿನ್ನೆಲೆಯಲ್ಲಿ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದರೆ, ಮೇರಿಗೆ ಮತ್ತೊಂದು ಅವಕಾಶ ಸಿಗಲಿದೆ.[ನನ್ನ ಗೆಲುವು ಹುತಾತ್ಮ ಯೋಧರಿಗೆ ಅರ್ಪಣೆ: ವಿಜೇಂದರ್]

Shiv Thapa

ಶಿವ ಥಾಪಾ ಅವರು 56 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಬಾಕ್ಸರ್ ಆಗಿ ಕಣಕ್ಕಿಳಿದಿದ್ದರು. 2013ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಕಝಕ್‌ಸ್ತಾನದ ಬಾಕ್ಸರ್ ಕೈರಟ್ ಯೆರಾಲಿಯೇವ್‌ರನ್ನು 3-0 ಅಂತರದಿಂಡ ಮಣಿಸಿದರು. ಶುಕ್ರವಾರ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಎರಡನೇ ಶ್ರೇಯಾಂಕದ ಚಾಟ್‌ಚೈ ಬಟ್‌ಡೀ ಅವರನ್ನು ಎದುರಿಸಲಿದ್ದಾರೆ.

ಎರಡನೇ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಶಿವ ಥಾಪಾ ಅವರು ಭಾರತಕ್ಕೆ ಪದಕ ಗೆಲ್ಲುವ ಆಸೆ ಚಿಗುರಿಸಿದ್ದಾರೆ. ಕಳೆದ ಒಲಿಂಪಿಕ್ಸ್ ನಲ್ಲೂ ಶಿವ ಸ್ಪರ್ಧಿಸಿದ್ದರು. ರಿಯೋಗೆ ಆಯ್ಕೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿ, 'ನನಗೆ ಫೈನಲ್ ಪಂದ್ಯಕ್ಕೆ ತಯಾರಾಗಲು ಸ್ವಲ್ಪವೇ ಸಮಯ ಲಭಿಸಿದೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದೇನೆ, ನಾನು ದೇವರಿಗೆ ಋಣಿ' ಎಂದಿದ್ದಾರೆ.

Mary Kom

ಮೇರಿ ಕೋಮ್ ಗೆ ನಿರಾಶೆ: ಪ್ರಸ್ತುತ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಚಿನ್ನ ಹಾಗೂ ಬೆಳ್ಳಿ ಜಯಿಸುವ ಬಾಕ್ಸರ್‌ಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ.ಆದರೆ, ಮಹಿಳೆಯರ ಬಾಕ್ಸಿಂಗ್‌ನ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತೆ ಮೇರಿ ಕೋಮ್ ಅವರು ಚೀನಾದ ರೆನ್ ಕ್ಯಾನನ್ ವಿರುದ್ಧ ಸೋಲುವ ಮೂಲಕ ನಿರಾಸೆಗೊಳಿಸಿದರು.[ರಿಯೋ ಒಲಿಂಪಿಕ್ಸ್ ನಂತರ ಉಸೇನ್ ಬೋಲ್ಟ್ ಓಟ ಸ್ಥಗಿತ]

ಆದರೆ, ಐದು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಮೇರಿ ಅವರಿಗೆ ಮತ್ತೊಮ್ಮೆ ಅವಕಾಶ ಸಿಗಲಿದ್ದು, ಎಐಬಿಎ ಅರ್ಹತಾ ಸುತ್ತಿನ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮೇರಿ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಳ್ಳಬಹುದಾಗಿದೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a good news for Indian pugilists, boxer Shiva Thapa has qualified for the upcoming Rio Olympics 2016 in the 56kg event category after entering AIBA Asian and Oceanic Olympic boxing qualifier's final in Qian'an, China.
Please Wait while comments are loading...