ವಿಜೇಂದರ್ ಸೋಲಿಸಲೆಂದೇ ಹಾವಿನ ರಕ್ತ ಹೀರುತ್ತಿರುವ ಅಲೆಕ್ಸಾಂಡರ್!

By: ರಮೇಶ್ ಬಿ
Subscribe to Oneindia Kannada

ನವದೆಹಲಿ. ಮಾರ್ಚ್ 09: ವೃತ್ತಿಪರ ಬಾಕ್ಸಿಂಗ್ ನಲ್ಲಿ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದ ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಅವರನ್ನು ಶತಾಯಗತಾಯವಾಗಿ ಸೋಲಿಸಲು ಎದುರಾಳಿ ಬಾಕ್ಸರ್ ಅಲೆಂಕ್ಸಾಂಡರ್ ಹೋರ್ವರ್ ಏನೆಲ್ಲ ಕಸರತ್ತು ಮಾಡುತ್ತಿದ್ದಾರೆ ಗೊತ್ತೆ? ನಿಮಗೆ ಗೊತ್ತಾದರೆ ನೀವು ಆಶ್ಚರ್ಯ ಪಡುವಂಥ ಕಸರತ್ತು ನಡೆಸಿದ್ದಾರೆ.

2008 ರ ಒಲಿಂಪಿಕ್ಸ್ ನಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ವಿಜೇಂದರ್ ಅವರು 2015 ಅಕ್ಟೋಬರ್ ನಿಂದ ಇಲ್ಲಿಯ ವರೆಗೆ ನಡೆದ ಮೂರು ಬಾಕ್ಸಿಂಗ್ ಪಂದ್ಯದಲ್ಲಿ ಗೆದ್ದ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ವಿಶ್ವದ ಇತರೆ ಬಾಕ್ಸರ್ ಗಳಿಗೆ ತಲೆ ನೋವಾಗಿರುವ ವಿಜೇಂದರ್ ಅವರನ್ನು ಸೋಲಿಸುವುದಕ್ಕೆ ಅಲೆಕ್ಸಾಂಡರ್ ಭಾರಿ ತಯಾರಿ ನಡೆಸಿದ್ದಾರೆ.[ಜಗದೇಕ ಬಾಕ್ಸಿಂಗ್ ವೀರ ಮೇವೆದರ್ ಗೆ ಸಕತ್ ಪಂಚ್]

ಮಾರ್ಚ್ 12 ರಂದು ಲಿವರ್ ಪೂಲ್ ನಲ್ಲಿ ನಡೆಯುವ ವಿಜೇಂದರ್ ವಿರುದ್ಧದ ಪಂದ್ಯಕ್ಕೆ ಅಲೆಕ್ಸಾಂಡರ್ ಹೊರ್ವತ್ ಭಾರಿ ಕಸರತ್ತು ನಡೆಸುವುದರ ಜೊತೆಗೆ ಹೆಚ್ಚಿನ ಶಕ್ತಿಗೆ ಹಾವಿನ ರಕ್ತ ಕುಡಿದು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರಂತೆ.

Hungarian boxer Alexander Horvath drinks Snakes blood to gain Magical powers

ಹಾವಿನ ರಕ್ತ ಕುಡಿದವರು ಬಲಿಷ್ಠರಾಗಿರುತ್ತಾರಂತೆ. ಅದರಂತೆ ಅಮೇರಿಕದ ಮರೀನ್ಸ್ ಸೇನಾ ತರಬೇತಿಯಲ್ಲಿ ಹಾವಿನ ರಕ್ತವನ್ನು ಕುಡಿಸಲಾಗುತ್ತದೆ. ಹೀಗಾಗಿ ಆ ಸೈನಿಕರು ಶಕ್ತಿಶಾಲಿಯಾಗಿದ್ದಾರೆ, ಆದ್ದರಿಂದ ನಾನು ಪ್ರತಿ ದಿನ ಭೋಜನ ವೇಳೆಯಲ್ಲಿ ಹಾವಿನ ರಕ್ತವನ್ನು ಕುಡಿದು ಮತ್ತಷ್ಟು ಬಲಶಾಲಿಯಾಗುತ್ತೇನೆಂದು ಅಲೆಕ್ಸಾಂಡರ್ ಹೇಳಿದ್ದಾರೆ.

ಸತತ ಮೂರು ಬಾರಿ ಗೆದ್ದಿರುವ ವಿಜೇಂದರ್ ಅವರನ್ನು ಈ ಬಾರಿ ಸೋಲಿಸುವುದು ಗ್ಯಾರಂಟಿ ಎಂದು 20 ವರ್ಷದ ಬಾಕ್ಸರ್ ಅಲೆಕ್ಸಾಂಡರ್ ಹೋರ್ವತ್ ಅವರು ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಮಾರ್ಚ್ 12 ರಂದು ನಾಲ್ಕನೇ ಪಂದ್ಯ ಲಿವರ್ ಪೂಲ್ ನಲ್ಲಿ ನಡೆಯಲಿದ್ದು ಹಾವಿನ ರಕ್ತ ಕುಡಿದು ಬಾಕ್ಸಿಂಗ್ ಆಡುತ್ತಿರುವ ಅಲೆಕ್ಸಾಂಡರ್ ಅವರ ಆಟವನ್ನು ನೋಡಲು ಇಡೀ ವಿಶ್ವವೇ ಕಾದು ಕುಳಿತಿದೆ.

ಹಾವಿನ ರಕ್ತ ಕುಡಿಯುವ ಅಲೆಕ್ಸಾಂಡರ್ ನನ್ನು ಸೋಲಿಸಿ 4ನೇ ಪಂದ್ಯವನ್ನು ಜಯಿಸಿ ವಿಜೇಂದರ್ ದಾಖಲೆ ನಿರ್ಮಿಸಲಿ ಎಂದು ಭಾರತ ಅಭಿಮಾನಿಗಳ ಆಶಯವಾಗಿದೆ. ಒಟ್ಟಿನಲ್ಲಿ ಈ ಜೋಡಿಗಳ ಆಟವನ್ನು ನೋಡಲು ಕಾತುರದಿಂದ ಕಾಯುತ್ತಿದ್ದು ಯಾರಿಗೆ ಗೆಲವು ದೊರೆಯಲಿದೆ ಎಂಬುವುದು ತೀವ್ರ ಕುತೂಹಲ ಕೆರಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hungarian boxer Alexander Horvath has made an unusual dietary choice as he prepares to take on Indian pugilist Vijender Singh at the Liverpool Echo Arena on March 12, he is drinking snake's blood.
Please Wait while comments are loading...