ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಬೋಪಣ್ಣ ಜೋಡಿಗೆ ಸೋಲು

Posted By:
Subscribe to Oneindia Kannada

ಲಂಡನ್, ಜುಲೈ 13: ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಜೋಡಿ ಸೋಲು ಕಂಡಿದೆ.

ಗುರುವಾರ ತಡರಾತ್ರಿ ಮುಗಿದ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಕೆನಡಾದ ಗ್ಯಾಬ್ರಿಯೆಲಾ ಡಬ್ರೊವ್ ಸ್ಕಿ ಜೋಡಿ, ಫಿನ್ಲೆಂಡ್ ನ ಹೆನ್ರಿ ಕೊಂಟಾನನ್ ಹಾಗೂ ಬ್ರಿಟನ್ ನ ಹೀತರ್ ವ್ಯಾಟ್ಸನ್ ಜೋಡಿ ವಿರುದ್ಧ 7-6 (7-4), 4-6, 5-7 ಸೆಟ್ ಗಳ ಅಂತರದಲ್ಲಿ ಸೋಲು ಕಂಡಿತು.

Bopanna suffers defeat at Wimbledon Quarter finals mixed doubles

ಇದೇ ವಿಭಾಗದಲ್ಲಿ ಕಣಕ್ಕಿಳಿದಿದ್ದ ಭಾರತದ ಮತ್ತೊಬ್ಬ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಕ್ರೊವೇಶಿಯಾದ ಇವಾನ್ ಡೋಡಿಗ್ ಜೋಡಿಯು, ರೋಹನ್ ಜೋಡಿಯನ್ನು ಗುರುವಾರ ಮಣಿಸಿದ ಹೆನ್ರಿ ಕೊಂಟಾನನ್ ಹಾಗೂ ಹೀತರ್ ವ್ಯಾಟ್ಸನ್ ವಿರುದ್ಧವೇ ಸೋತು ಈ ವಿಭಾಗದಿಂದ ಆಚೆ ನಿರ್ಗಮಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian Tennis player Rohan Bopanna and his partner G. Dabrowski of Canada suffer defeat in mixed doubles quarter finals of Wimbledon 2017, against Finland's Henry Kontinen and Britain's Heather Watson on June 13th, 2017.
Please Wait while comments are loading...