ಬೆಂಗಳೂರಲ್ಲಿ BMW ಗಾಲ್ಫ್ ಕಪ್ ಇಂಟರ್‍ನ್ಯಾಷನಲ್

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 05: ಬಿಎಂಡಬ್ಲ್ಯೂ ಇಂಡಿಯಾ ತನ್ನ ಅತ್ಯಂತ ನಿರೀಕ್ಷೆಯ ಗಾಲ್ಫ್ ಟೂರ್ನಮೆಂಟ್-BMW ಗಾಲ್ಫ್ ಕಪ್ ಇಂಟರ್‍ನ್ಯಾಷನಲ್ 2017 ಕ್ಕೆ ಬೆಂಗಳೂರು ನಲ್ಲಿ ಚಾಲನೆ ನೀಡಿತು.

BMW ಗಾಲ್ಫ್ ಇಂಟರ್‍ನ್ಯಾಷನಲ್ 2017 ಭಾರತದ ಹನ್ನೆರಡು ನಗರಗಳು-ಚೆನ್ನೈ, ಬೆಂಗಳೂರು,ಹೈದರಾಬಾದ್, ಜೈಪುರ, ಚಂಡೀಗಢ, ಅಹಮದಾಬಾದ್, ಮುಂಬೈ, ಪುಣೆ, ಕೊಲ್ಕತಾ, ಲಖನೌ, ನೊಯಿಡಾ ಮತ್ತು ಗುರ್‍ಗಾಂವ್‍ಗಳಲ್ಲಿ ನಡೆಯಲಿದೆ.

ಎಕ್ಸ್ ಕ್ಲೂಸಿವ್ ಆಹ್ವಾನಿತರಿಗೆ ಮಾತ್ರ ಆಯೋಜಿಸಿರುವ ಗಾಲ್ಫ್ ಕಪ್ ಇಂಟರ್‍ನ್ಯಾಷನಲ್ 2017BMW ಗ್ರಾಹಕರಿಗೆಂದೇ ವಿನ್ಯಾಸಗೊಳಿಸಿದ ಅಮೆಚೂರ್ ಗಾಲ್ಫ್ ಟೂರ್ನಮೆಂಟ್ ಸೀರೀಸ್ ಆಗಿದೆ. ಭಾರತ ಭಾಗವಹಿಸಲಿರುವ 42 ದೇಶಗಳಲ್ಲಿ ಒಂದಾಗಿದ್ದು 100,000 ಆಟಗಾರರು 1,000 ಅರ್ಹತಾ ಟೂರ್ನಮೆಂಟ್‍ಗಳಲ್ಲಿ ಸ್ಪರ್ಧಿಸಲಿದ್ದಾರೆ.

ಭಾರತದ ಪ್ರತಿ ನಗರದ ವಿಜೇತರು ರಾಷ್ಟ್ರೀಯ ಫೈನಲ್‍ನಲ್ಲಿ ಸ್ಪರ್ಧಿಸಲಿದ್ದಾರೆ. ರಾಷ್ಟ್ರೀಯ ವಿಜೇತರು BMW ಗಾಲ್ಫ್ ಕಪ್ ಇಂಟರ್‍ನ್ಯಾಷನಲ್ 2017 ವರ್ಲ್ಡ್ ಫೈನಲ್‍ನಲ್ಲಿ ಒಗ್ಗೂಡಲಿದ್ದಾರೆ.

BMW India hosts Bangalore edition of the BMW Golf Cup International 2017

ಮಿ.ಫ್ರಾಂಕ್ ಶ್ಲೋಡರ್, ಪ್ರೆಸಿಡೆಂಟ್(ಆ್ಯಕ್ಟ್), BMW ಗ್ರೂಪ್ ಇಂಡಿಯಾ, BMW ಗಾಲ್ಫ್ ಕಪ್ ಇಂಟರ್‍ನ್ಯಾಷನಲ್ ಅತ್ಯಂತ ನಿರೀಕ್ಷೆಯ ಅಮೆಚೂರ್ ಗಾಲ್ಫ್ ಟೂರ್ನಮೆಂಟ್ ಆಗಿದೆ ಮತ್ತು ನಾವು ಇದನ್ನು ಬೆಂಗಳೂರಿನಲ್ಲಿ ಆಯೋಜಿಸಲು ಹೆಮ್ಮೆಪಡುತ್ತೇವೆ. ಗಾಲ್ಫ್ ಅನ್ನು ದೇಶಾದ್ಯಂತ ನಮ್ಮ ಗ್ರಾಹಕರು ಮತ್ತು ಪೋಷಕರು ಅಪ್ಪಿಕೊಂಡಿರುವುದು ನಮಗೆ ಬಹಳ ಸ್ಫೂರ್ತಿ ತಂದಿದೆ. ಈ ಟೂರ್ನಮೆಂಟ್‍ನ ಯಶಸ್ವಿ ವರ್ಷ ಪೂರೈಸಲು ನಮಗೆ ಬಹಳ ಸಂತೋಷವಾಗಿದೆ ಮತ್ತು ಭಾಗವಹಿಸುವ ಎಲ್ಲರಿಗೂ ಅತ್ಯುತ್ತಮ ಪರ್ಫಾರ್ಮೆನ್ಸ್‍ಗಳನ್ನು ನೀಡುವ ಭರವಸೆ ಇದೆ' ಎಂದರು.

BMW ಇಂಡಿಯಾ ಡೀಲರ್‍ಗಳು ಟೂರ್ನಮೆಂಟ್‍ನಲ್ಲಿ ಭಾಗವಹಿಸಲು ಆಸಕ್ತಿ ಇರುವ ಅಮೆಚೂರ್ ಗಾಲ್ಫರ್‍ಗಳನ್ನು ಃಒW ಮಾಲೀಕರಲ್ಲಿ ಗುರುತಿಸುತ್ತಾರೆ. ಟೂರ್ನಮೆಂಟ್‍ಗಳು ಆಯಾ ಸ್ಥಳೀಯ ಗಾಲ್ಫ್ ಕ್ಲಬ್ ನಿಯಮಗಳ ಅನುಸಾರ ನಡೆಯುತ್ತವೆ.

ನವ್‍ನೀತ್ ಮೋಟಾರ್ಸ್‍ನ ವ್ಯವಸ್ಥಾಪಕ ನಿರ್ದೇಶಕ ನವ್‍ನೀತ್ ಕಚಾಲಿಯಾ, BMW ಗಾಲ್ಫ್ ಕಪ್ ಇಂಟರ್‍ನ್ಯಾಷನಲ್ ಗಾಲ್ಫರ್‍ಗಳಿಗೆ ಸ್ಪರ್ಧಿಸಲು ಮತ್ತು ಅವರ ಕೌಶಲ್ಯಗಳನ್ನು ಸುಧಾರಿಸಿಕೊಲ್ಳಲು ಅದ್ಭುತ ವೇದಿಕೆಯಾಗಿದೆ. ಬೆಂಗಳೂರು ಟೂರ್ನಮೆಂಟ್‍ನ ಪ್ರತಿಕ್ರಿಯೆಯಿಂದ ನಮಗೆ ಬಹಳ ಥ್ರಿಲ್ ಆಗಿದೆ. BMW ಗಾಲ್ಫ್ ಕಪ್ ಇಂಟರ್‍ನ್ಯಾಷನಲ್ ನಮ್ಮ ಗ್ರಾಹಕರೊಂದಿಗೆ ಅತ್ಯಂತ ಆನಂದ ಹಾಗೂ ವಿರಾಮದ ವಾತಾವರಣದಲ್ಲಿ ಸಕ್ರಿಯವಾಗಲು ಅವಕಾಶ ಕಲ್ಪಿಸುತ್ತದೆ' ಎಂದರು.

BMW ಗಾಲ್ಫ್ ಕಪ್ ಇಂಟರ್‍ನ್ಯಾಷನಲ್ 2017 ರಲ್ಲಿ ಮೂರು ವಿಭಾಗಗಳಿರುತ್ತವೆ, ಎ (12ರವರೆಗಿನ ಹ್ಯಾಂಡಿಕಪ್ಸ್‍ಗೆ), ಬಿ (13-28 ಹ್ಯಾಂಡಿಕಪ್ಸ್‍ಗೆ) ಮತ್ತು ಮಹಿಳಾ ವಿಭಾಗ (28ರವರೆಗಿನ ಹ್ಯಾಂಡಿಕಪ್ಸ್‍ಗೆ).

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BMW India kick started its much awaited golf tournament – BMW Golf Cup International 2017 in Bangalore. The BMW Golf Cup International 2017 will be held across twelve cities in India–Chennai, Bangalore, Hyderabad, Jaipur, Chandigarh, Ahmedabad, Mumbai, Pune, Kolkata, Lucknow, Noida and Gurgaon
Please Wait while comments are loading...