ರಿಯೋ ಸಾಧನೆ: ಪಿವಿ ಸಿಂಧುಗೆ ಬಿಎಂಡಬ್ಲೂ ಕಾರ್ ಗಿಫ್ಟ್

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ ಆಗಸ್ಟ್, 19: ಭಾರತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರಿಗೆ ಭರ್ಜರಿ ಕೊಡುಗೆಗಳು ಬರಲಾರಂಭಿಸಿವೆ. ರಿಯೋನಲ್ಲಿ ಪದಕಗಳಿಸುವ ಮೂಲ ಪದಕದ ಬರ ನೀಗಿಸಿದ ಸಿಂಧು ದೇಶದೆಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿಬುತ್ತಿವೆ ಇನ್ನು ಕೆಲವರು ಬಹುಮಾನಗಳನ್ನು ನೀಡಲು ಮುಂದಾಗುತ್ತಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಉದ್ಯಮಿ ಚಾಮುಂಡೇಶ್ವರಿನಾಥ್ ಅವರು ಪಿವಿ ಸಿಂಧು ಅವರಿಗೆ ಬಿಎಂಡಬ್ಲೂ ಐಷರಾಮಿ ಕಾರ್ ಗಿಫ್ಟ್ ನೀಡುವುದಾಗಿ ಘೋಷಿಸಿದ್ದಾರೆ. ರಿಯೋ ಒಲಿಂಪಿಕ್ಸ್ ಮುಗಿದ ನಂತರ ತವರಿಗೆ ಬಂದ ಮೇಲೆ ಐಷಾರಾಮಿ ಕಾರು ನೀಡುತ್ತೇನೆಂದು ಚಾಮುಂಡೇಶ್ವರಿನಾಥ್ ಹೇಳಿದ್ದಾರೆ. [ಪಿವಿ ಸಿಂಧು, ಬಾಡ್ಮಿಂಟನ್ ತಾರೆಯ ಬಗ್ಗೆ ತಿಳಿದುಕೊಳ್ಳಿ]

BMW gift for PV Sindhu after Rio super show

ರಿಯೋ ಒಲಿಂಪಿಕ್ ಆರಂಭಕ್ಕೂ ಮುನ್ನ ಆಂಧ್ರಪ್ರದೇಶ ಮತ್ತು ತೆಲಂಗಾಣದ ಕ್ರೀಡಾಪಟುಗಳು ರಿಯೋನಲ್ಲಿ ಪದಕ ಜಯಿಸಿದರೆ ಬಿಎಂಡಬ್ಲೂ ಕಾರ್ ನೀಡುತ್ತೇನೆಂದು ಚಾಮುಂಡೇಶ್ವರಿನಾಥ್ ಆಫರ್ ಘೋಷಿಸಿದ್ದರು. ಇನ್ನು ಹೈದ್ರಬಾದ್ ಮೂಲದ ಸೈನಾ ನೆಹ್ವಾಲ್ ಹಾಗು ಶ್ರೀಕಾಂತ್ ನಿರಾಸೆ ಮೂಡಿಸಿದ್ದಾರೆ. [ಒಲಿಂಪಿಕ್ಸ್ ಪದಕ ವಿಜೇತರು: ಲಿಯಾಂಡರ್ ನಿಂದ ಸಾಕ್ಷಿ ತನಕ]

ಆದರೆ, ಇದೇ ಹೈದರಾಬಾದ್ ಮೂಲದ ಮತ್ತೊಬ್ಬ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಈಗ ಫೈನಲ್ ಪ್ರವೇಶಿಸಿದ್ದು ಗೆದ್ದರೇ ಚಿನ್ನ ಸೋತರೇ ಬೆಳ್ಳಿ ಪದಕಗಳಿಸುವುದು ಖಚಿತವಾಗಿದೆ. ಇದರಿಂದ ಬಿಎಂಡಬ್ಲೂ ಕಾರ್ ನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hyderabad District Badminton Association president V. Chamundeswarnath says he will make good on his promise and gift the posh car to Sindhu on her return.
Please Wait while comments are loading...