ಗುಜರಾತಿನಲ್ಲಿ ಸ್ಕೇಟಿಂಗ್ ಸ್ಪರ್ಧೆ ಗೆದ್ದ ಬೆಂಗ್ಳೂರು ಹುಡ್ಗಿ

Posted By:
Subscribe to Oneindia Kannada

ಬೆಂಗಳೂರು, ಜ. 07: ಬೆಂಗಳೂರಿನ ಹುಡುಗಿ ಸ್ಕೇಟಿಂಗ್ ಪಟು ಧನ್ಯಾ ಟಿ ಅವರು ತಮ್ಮ ಕೊರಳಿಗೆ ಮತ್ತೊಮ್ಮೆ ಚಿನ್ನದ ಪದಕ ಧರಿಸಿದ್ದಾರೆ. ಗುಜರಾತಿನಲ್ಲಿ ನಡೆದ ಸಿಬಿಎಸ್ಇ ರಾಷ್ಟ್ರೀಯ ಕ್ವಾಡ್ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಬೆಂಗಳೂರಿನ ಬಿಜಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಧನ್ಯಾ ಅವರು ಇತ್ತೀಚಿಗೆ ನಡೆದ ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದಿದ್ದರು. ಈಗ 500 ಮೀಟರ್ ರಿಂಕ್ ರೇಸ್ ವಿಭಾಗದಲ್ಲಿ 8 ವರ್ಷ ವಯೋಮಿತಿಯೊಳಗಿನ ಸ್ಪರ್ಧೆಯಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.

7-year-old Bengaluru girl Dhanya

ಗುಜರಾತಿನ ಸಮಾ ವಡೋದರಾದಲ್ಲಿರುವ ಉರ್ಮಿ ಶಾಲೆ ಮತ್ತು ಹಾಸ್ಟೆಲ್ ಮೈದಾನದಲ್ಲಿ ಡಿಸೆಂಬರ್ 30, 2015 ರಿಂದ ಜನವರಿ 2, 2016ರ ತನಕ ಸ್ಪರ್ಧೆ ಜರುಗಿತ್ತು.

ಎಚ್ ಆರ್ ಟಿ ಮಲ್ಲಿಕಾರ್ಜುನ ಹಾಗೂ ಛಾಯಾ ಬಿಯು ಅವರ ಪುತ್ರಿ 7 ವರ್ಷ ವಯಸ್ಸಿನ ಧನ್ಯಾ ಅವರು ರಾಜರಾಜೇಶ್ವರಿ ನಗರದ ಬೆಸ್ಟ್ ಕ್ಲಬ್ ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. 5 ವರ್ಷ ವಯಸ್ಸಿನಿಂದ ತರಬೇತಿ ಪಡೆದುಕೊಂಡು ಸ್ಕೇಟಿಂಗ್ ಸ್ಪರ್ಧೆಯಲ್ಲಿ ತೊಡಗಿಕೊಂಡಿರುವ ಧನ್ಯಾ ಅವರು ಇಲ್ಲಿ ತನಕ 11 ಚಿನ್ನದ ಪದಕ ಹಾಗೂ 1 ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಕರ್ನಾಟಕ ರಾಜ್ಯವಲ್ಲದೆ ಅನೇಕ ರಾಜ್ಯಗಳಲ್ಲಿ ತಮ್ಮ ಪ್ರತಿಭೆ ಮೂಲಕ ಗಮನ ಸೆಳೆದಿದ್ದಾರೆ.

ಧನ್ಯಾ ಅವರ ಸಾಧನೆ
* 2014 ಜಿಲ್ಲಾ ಹಾಗೂ ರಾಜ್ಯ ಮಟ್ಟದ ಮುಕ್ತ ಸ್ಪರ್ಧೆ (6 ವರ್ಷ ವಯೋಮಿತಿಯೊಳಗಿನ) 5 ಚಿನ್ನ ಹಾಗೂ 1 ಬೆಳ್ಳಿ.
* 2015 ಜಿಲ್ಲಾ ಹಾಗೂ ರಾಜ್ಯ ಮಟ್ಟದ ಮುಕ್ತ ಸ್ಪರ್ಧೆ (6 ವರ್ಷ ವಯೋಮಿತಿಯೊಳಗಿನ) 2 ಚಿನ್ನ ಹಾಗೂ 2 ಬೆಳ್ಳಿ.
* 2015ರ ಸಿಬಿಎಸ್ಇ ದಕ್ಷಿಣ ವಲಯ ಚಾಂಪಿಯನ್ ಶಿಪ್, ಹೈದರಾಬಾದ್ (8 ವರ್ಷ ವಯೋಮಿತಿಯೊಳಗಿನ) (1 ಚಿನ್ನ)
* 2015-16ರ ಸಿಬಿಎಸ್ಇ ರಾಷ್ಟ್ರೀಯ ಚಾಂಪಿಯನ್ ಶಿಪ್, ವಡೋದರಾ, ಗುಜರಾತ್ (8 ವರ್ಷ ವಯೋಮಿತಿಯೊಳಗಿನ) (1 ಚಿನ್ನ) (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru City girl Dhanya T added another gold medal in her short skating career when she topped in the Quad Roller Skating event of CBSE National Skating Championship 2015-16.
Please Wait while comments are loading...