ಇಟಲಿಯಲ್ಲಿ ಮಿಂಚಿದ ಬೆಂಗಳೂರಿನ ಅದ್ಭುತ ಬಾಲಕ!

Posted By:
Subscribe to Oneindia Kannada

ಸಿಯಾನಾ(ಇಟಲಿ), ಮೇ 15: ಇಟಲಿಯಲ್ಲಿ ಮಿಂಚಿದ ಬೆಂಗಳೂರಿನ ಅದ್ಭುತ ಬಾಲಕ ಈ ಚಾಲಕ. 10 ವರ್ಷ ವಯಸ್ಸಿನ ರುಹಾನ್ ಆಳ್ವ, 60ಸಿಸಿ ಈಸಿ ಕಾರ್ಟ್ ಚಾಂಪಿಯನ್ ಶಿಪ್ ನಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ.

14 ಸುತ್ತಿನ ಥ್ರಿಲ್ಲಿಂಗ್ ಫೈನಲ್ ರೇಸಿನಲ್ಲಿ ರುಹಾನ್ ಅವರು ಸ್ವಲ್ಪದರಲ್ಲೇ ಪ್ರಥಮ ಸ್ಥಾನದಿಂದ ವಂಚಿತರಾದರು. ಇಟಲಿಯಾ ಕಾರ್ಟ್ ಉತ್ಪಾದಕ ಸಂಸ್ಥೆ ಬಿರೆಲ್ ಆರ್ಟ್ ನ ಪ್ರಾಯೋಜಕತ್ವ ಪಡೆದುಕೊಂಡಿರುವ ರುಹಾನ್ ಅವರು ಎಂಎಲ್ ಜಿ ರೇಸಿಂಗ್ ಸ್ಪರ್ಧಿಗಳಾದ ಲೊರೆಂಜೊ ಪ್ಯಾಟ್ರೆಸ್ ಹಾಗೂ ಆಂಡ್ರಿಯಾ ಪಿರೊವಾನೋ ಅವರಿಗೆ ತಕ್ಕ ಪೈಪೋಟಿ ನೀಡಿದರು. [ಬಾಲ ಪ್ರತಿಭೆ : ರುಹಾನ್ ಆಳ್ವಾ ಭವಿಷ್ಯದ ಎಫ್ 1 ಚಾಲಕ]

10-year-old Bengaluru boy Ruhaan Alva finishes 2nd in Italian Easykart event

ಈ ರೇಸಿನಲ್ಲಿ ಪೋಡಿಯಂ ಏರಿದ್ದರಿಂದ ಒಟ್ಟಾರೆ ಚಾಂಪಿಯನ್ ಶಿಪ್ ನಲ್ಲಿ ರುಹಾನ್ ಈಗ ನಾಲ್ಕನೇ ಸ್ಥಾನಕ್ಕೇರಿದ್ದಾನೆ. ಮೊದಲ ಸುತ್ತಿನಲ್ಲಿ 60ಮಿನಿ ಕೆಟಗರಿಯಲ್ಲಿ ಸ್ಪರ್ಧಿಸಿದ್ದರಿಂದ ಕೆಲ ಅಂಕಗಳಿಂದ ವಂಚಿತನಾಗಿದ್ದ ರುಹಾನ್ ಈ 60ಸಿಸಿ ಈಶಿ ಕಾರ್ಟ್ ಚಾಂಪಿಯನ್ ಶಿಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾನೆ. ರುಹಾನ್ ಮುಂದಿನ ರೇಸಿಂಗ್ ಜೂನ್ 10-11ರ ತನಕ ಲೊನಾಟೋದಲ್ಲಿ ನಾಲ್ಕನೇ ಸುತ್ತಿನ ರೇಸ್ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ruhaan Alva, a 10-year old schoolboy from Bengaluru, missed a second consecutive win in the 60cc class by a whisker and settled for second spot in the third round of the Italian Easykart Championship here on Sunday (May 14).
Please Wait while comments are loading...