ಚೀನಾದ ಬಾಕ್ಸರ್ ನನ್ನು ಹಣಿದ ಭಾರತದ ಹೆಮ್ಮೆಯ ವಿಜೇಂದರ್ ಸಿಂಗ್

Posted By:
Subscribe to Oneindia Kannada

ಮುಂಬೈ, ಆಗಸ್ಟ್ 5: ಭಾರೀ ಕುತೂಹಲ ಕೆರಳಿಸಿದ್ದ ಪ್ರೊಬಾಕ್ಸಿಂಗ್ ಪಂದ್ಯದಲ್ಲಿ ವಿಜೇಂದರ್ ಸಿಂಗ್ ಅವರು, ಚೀನಾದ ನಂಬರ್ ಒನ್ ಬಾಕ್ಸರ್ ಝುಲ್ಪಿಕರ್ ಮೈಮೈತಿಯಾಲಿ ಅವರ ವಿರುದ್ಧ ಜಯ ಸಾಧಿಸಿದ್ದಾರೆ.

ಈ ಜಯದ ಮೂಲಕ ವಿಜೇಂದರ್ ಸಿಂಗ್ ಅವರು, ಡಬ್ಲ್ಯೂಬಿಒ ಏಷ್ಯಾ ಪೆಸಿಫಿಕ್ ಸೂಪರ್ ಮಿಡಲ್ ವೇಯ್ಟ್ ಚಾಂಪಿಯನ್ಸ್ ಶಿಪ್ ಗೆದ್ದಿದ್ದಾರೆ. ಅಷ್ಟೇ ಅಲ್ಲ, ಪ್ರೊ ಬಾಕ್ಸಿಂಗ್ ಗೆ ಬಂದ ನಂತರದ ಎಲ್ಲಾ ಪಂದ್ಯಗಳಲ್ಲಿ ಜಯ ಸಾಧಿಸಿರುವ ಅವರೀಗ ತಮ್ಮ ಗೆಲುವಿನ ಅಂತರವನ್ನು 9-0ಕ್ಕೆ ಹಿಗ್ಗಿಸಿಕೊಂಡಿದ್ದಾರೆ.

Battleground Asia Boxing: Vijender Singh beats Zulipikar by unanimous decision

ಇಲ್ಲಿನ ಭಿವಾನಿ ಕ್ರೀಡಾಂಗಣದಲ್ಲಿ ನಡೆದ ಭಾರೀ ಪೈಪೋಟಿಯ ಈ ಪಂದ್ಯದಲ್ಲಿ, ವಿಜೇಂದರ್ ಗೆಲುವು ಸಾಧಿಸುವಲ್ಲಿ ವಿಫಲವಾಗಿದ್ದರು.

ಇತ್ತೀಚೆಗಷ್ಟೇ, ಟ್ವಿಟ್ಟರ್ ನಲ್ಲಿ ಚೀನಾದ ಬಾಕ್ಸರ್ ನನ್ನು ಕೆಲವೇ ನಿಮಿಷಗಳಲ್ಲಿ ಬಗ್ಗು ಬಡಿಯುವುದಾಗಿ ತಿಳಿಸಿದ್ದರು. ಅವರಂದುಕೊಂಡಷ್ಟು ಸುಲಭವಾಗಿ ಚೀನಾ ಬಾಕ್ಸರ್ ನನ್ನು ಸೋಲಿಸಲು ಸಾಧ್ಯವಾಗದಿದ್ದರೂ, ಗೆಲವನ್ನಂತೂ ಬಿಟ್ಟುಕೊಡಲಿಲ್ಲ ಈ ಹರ್ಯಾಣದ ಬಾಕ್ಸರ್.

ಕೆಲವು ತಿಂಗಳುಗಳ ಹಿಂದಷ್ಟೆ, ಡಬ್ಲ್ಯೂಬಿಒ ಓರಿಯಂಟಲ್ ಸೂಪರ್ ಮಿಡಲ್ ವೇಯ್ಟ್ ಪಂದ್ಯಾವಳಿಯನ್ನು ಗೆದ್ದುಕೊಂಡಿದ್ದ ಅವರು, ಇದೀಗ, ಮತ್ತೊಂದು ಕಿರೀಟಕ್ಕೆ ಭಾಜನವಾಗಿರುವುದು ವಿಶೇಷ.

ಈ ಪಂದ್ಯಕ್ಕೂ ಮುನ್ನ ನಡೆದ ಮತ್ತೆರಡು ಪಂದ್ಯಗಳಲ್ಲಿ ಭಾರತದ ಇತರ ಬಾಕ್ಸರ್ ಗಳಾದ ಅಖಿಲ್ ಕುಮಾರ್ ಹಾಗೂ ಜಿತೇಂದರ್ ಕುಮಾರ್ ಅವರು, ಕ್ರಮವಾಗಿ ಟೈ ಗಿಲ್ ಕ್ರಿಸ್ಟ್ ಮತ್ತು ಥಾನೆಟ್ ಲಿಖಿಟ್ ಕಾಂಪೊರ್ನ್ ವಿರುದ್ಧ ಗೆಲವು ಕಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vijender Singh once again headlined a quality packed card but this time things weren’t simple for the boxer from Haryana. The card also featured former Olympics boxers in Akhil Kumar and Jitender Kumar who made their debut having competed at the Beijing Olympics.
Please Wait while comments are loading...