ಬ್ಯಾಡ್ಮಿಂಟನ್ ಶ್ರೇಯಾಂಕ ಪಟ್ಟಿ: ಸೈನಾ 9ನೇ ಸ್ಥಾನಕ್ಕೆ ಕುಸಿತ, ಸಿಂಧು?

By: ಕ್ರೀಡಾ ಡೆಸ್ಕ್
Subscribe to Oneindia Kannada

ನವದೆಹಲಿ ಆಗಸ್ಟ್, 26 : ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್‌ (ಬಿಡಬ್ಲ್ಯುಎಫ್) ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ. ರಿಯೋ ಒಲಿಂಪಿಕ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ನಾಲ್ಕು ಸ್ಥಾನ ಕುಸಿದು 9ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಸಾಧನೆಗೈದರೂ ಪಿ.ವಿ. ಸಿಂಧು 10ನೇ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ. ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ನೀರಸ ಪ್ರದರ್ಶನ ನೀಡಿ ನಾಕೌಟ್ ಹಂತಕ್ಕೇರಲು ವಿಫಲರಾಗಿದ್ದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ನಾಲ್ಕು ಸ್ಥಾನ ಕೆಳಗಿಳಿದು 26ನೇ ಸ್ಥಾನದಲ್ಲಿದ್ದಾರೆ.

ಕಿಡಾಂಬಿ ಶ್ರೀಕಾಂತ್‌ ಪುರುಷರ ಸಿಂಗಲ್ಸ್ ವಿಭಾಗದ ಶ್ರೇಯಾಂಕ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ . ರಿಯೋದಲ್ಲಿ ಕ್ವಾರ್ಟರ್ ಫೈನಲ್‌ ಹಂತಕ್ಕೇರಿದ್ದ ಕಿಡಾಂಬಿ ಶ್ರೀಕಾಂತ್‌ ಒಂದು ಸ್ಥಾನ ಮೇಲಕ್ಕೇರಿದ್ದು 10ನೇ ಸ್ಥಾನದಲ್ಲಿ ನಿಂತಿದ್ದಾರೆ. ಅಜಯ್ ಜಯರಾಮ್‌ 22ನೇ ಸ್ಥಾನ ಪಡೆದಿದ್ದಾರೆ.

Badminton World Rankings: Saina Nehwal drops to 9th spot, PV Sindhu remains at 10th

ಲಂಡನ್‌ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿದ್ದ ಸೈನಾ ಅವರು ಗಾಯದ ಸಮಸ್ಯೆಯಿಂದ ರಿಯೋದಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದ್ದರು. ಕಳಪೆ ಪ್ರದರ್ಶನದಿಂದಾಗಿ ನಾಲ್ಕು ಸ್ಥಾನ ಕೆಳಗೆ ಜಾರಿ 9ನೇ ಸ್ಥಾನ ಪಡೆದರು. ರಿಯೋದಲ್ಲಿ ಕಂಚಿನ ಪದಕ ಪಡೆದ ಜಪಾನಿನ ನೊಜೋಮಿ ಒಕುಹರಾ ಮತ್ತು ಚೀನದ ಶಿಕ್ಸಿಯಾನ್ ವಾಂಗ್ ಮೂರು ಸ್ಥಾನ ಮೇಲಕ್ಕೇರಿದ್ದು ಕ್ರಮವಾಗಿ ಮೂರನೇ ಮತ್ತು ಆರನೇ ಸ್ಥಾನ ಪಡೆದುಕೊಂಡಿದ್ದಾರೆ.

ರಿಯೋದಲ್ಲಿ ಸೆಮಿಫೈನಲ್ ತಲುಪಿದ್ದ ಲಿ ಕ್ಸುರುಯಿ ದ್ವಿತೀಯ ಸ್ಥಾನಕ್ಕೇರಿದ್ದರೆ ಯಿಹಾನ್ ವಾಂಗ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ವಾಂಗ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಸೋಲಿಸಿದ್ದರು. ರಿಯೋದಲ್ಲಿ ಅಮೋಘ ಪ್ರದರ್ಶನ ನೀಡಿ ಬೆಳ್ಳಿಯ ಪದಕ ಗೆದ್ದು ಭಾರತದ ಮಾನ ಉಳಿಸಿದ ಸಿಂಧು ಅವರ ಶ್ರೇಯಾಂಕ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಮಾಜಿ ವಿಶ್ವ ಚಾಂಪಿಯನ್ ಥೈಲ್ಯಾಂಡ್ ನ ರಚನಾಕ್ ಇಂತನಾನ್ ಐದನೇ ಮತ್ತು ಚೈನೀಸ್‌ ನ ತೈಪೆಯ ತಯಿ ತಝಿ ಯಿಂಗ್ ಏಳನೇ ಸ್ಥಾನದಲ್ಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ತೀವ್ರ ಪೈಪೋಟಿ ನಡೆಸಿ ಲಿನ್‌ ಡಾನ್ ಕೈಯಲ್ಲಿ ಶರಣಾಗಿದ್ದ ಶ್ರೀಕಾಂತ್‌ 10ನೇ ಸ್ಥಾನ ಪಡೆದಿದ್ದಾರೆ. ರಿಯೋದಲ್ಲಿ ಚೆನ್ ಲಾಂಗ್‌ ಅವರಿಗೆ ಶರಣಾಗಿ ಬೆಳ್ಳಿಯ ಪದಕ ಪಡೆದಿದ್ದ ಮಲೇಶ್ಯದ ಲೀ ಚಾಂಗ್ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಡಾನ್ ಮೂರನೇ ಸ್ಥಾನದಲ್ಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಭಾರತದ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ 21ನೇ ಸ್ಥಾನದಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's Saina Nehwal on Thursday (August 25) dropped four points to be 9th, while compatriot PV Sindhu remained in the 10th spot in the Badminton World Federation (BWF) rankings despite getting a silver in the women's singles competition at the recently-concluded Olympics.
Please Wait while comments are loading...