ರಿಯೋ : ಬಾಡ್ಮಿಂಟನ್ ತಾರೆ ಸೈನಾ, ಸಿಂಧುಗೆ ಗೆಲುವಿನ ರುಚಿ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 11 : ಭಾರತದ ಬಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧು ಅವರು ರಿಯೋದಲ್ಲಿ ಗೆಲುವಿನ ಮೊದಲ ರುಚಿ ಕಂಡಿದ್ದಾರೆ.

ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ಬ್ರೆಜಿಲಿನ ಆಟಗಾರ್ತಿ ಮೋಹೈನಿಯನ್ನು ಸೋಲಿಸಿ ಗೆಲುವು ದಾಖಲಿಸಿದರೆ, ಪಿ.ವಿ.ಸಿಂಧು ಅವರು ಹಂಗೇರಿಯ ಆಟಗಾರ್ತಿ ಲೌರಾರನ್ನು ಸೋಲಿಸಿದರು.[ಮೊದಲ ಪಂದ್ಯದಲ್ಲೇ ಜ್ವಾಲಾ- ಅಶ್ವಿನಿಗೆ ಸೋಲು]

ಲಂಡನ್ ಒಲಿಂಪಿಕ್ಸ್​ನ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ಗುರುವಾರ ನಡೆದ ಸಿಂಗಲ್ಸ್ ಪಂದ್ಯದಲ್ಲಿ ಬ್ರೆಜಿಲ್ಲಿನ ಲೋಹೈನಿ ವಿಸೆಂಟೆ ವಿರುದ್ಧ 21-17, 21-17 ಅಂತರದಲ್ಲಿ ಗೆಲುವು ದಾಖಸಿದರು. ಎರಡನೇ ಪಂದ್ಯದಲ್ಲಿ ಆಗಸ್ಟ್ 14 ರಂದು ಉಕ್ರೇನ್ನಿನನ ಮರಿಯಾ ಉಲಿಟಿನಾ ಅವರನ್ನು ಸೈನಾ ಎದುರಿಸಲಿದ್ದಾರೆ.

Badminton: Saina Nehwal starts Rio campaign with a win, beats Brazil's Lohaynny

ಪಿ.ವಿ.ಸಿಂಧು ಅವರು ಲೀಗ್ ಹಂತದ ಮೊದಲ ಪಂದ್ಯದಲ್ಲಿ ಹಂಗೇರಿಯ ಲೌರಾ ಸರೋಸಿ ವಿರುದ್ಧ 21-8, 21-9 ನೇರ ಸೆಟ್ ಗಳಿಂದ ಸುಲಭದ ಜಯ ಗಳಿಸಿದರು. ಸಿಂಧು ಅವರ ಮುಂದಿನ ಪಂದ್ಯದಲ್ಲಿ ಆಗಸ್ಟ್ 14 ರಂದು ಕೆನಡಾದ ಲಿ ಮಿಷಲ್ ಅವರ ವಿರುದ್ಧ ಇದೆ.

ಮಹಿಳೆಯರ ಡಬಲ್ಸ್ ವಿಭಾದಲ್ಲಿ ಭಾರತದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಮೊದಲ ಸುತ್ತಿನಲ್ಲೇ ಸೋಲು ಕಂಡರು. ಪುರುಷರ ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ ಮತ್ತು ಬಿ ಸುಮೀತ್ ರೆಡ್ಡಿ ಅವರು ವಿಶ್ವ ನಂ.2 ಜೋಡಿ ಇಂಡೋನೇಷ್ಯಾದ ಮೊಹಮ್ಮದ್ ಆಶಾನ್ ಮತ್ತು ಹೆಂಡ್ರ ಸೆತವಾನ್ ವಿರುದ್ಧ 18-21, 13-21 ನೇರ ಸೆಟ್ ಗಳಿಂದ ಸೋಲು ಅನುಭವಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ace Indian shuttler Saina Nehwal beat local hope Vicente Lohaynny 21-17, 21-17 in her opening Group C match in the women singles event here on Thursday (Aug 11).
Please Wait while comments are loading...