ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕ: 5ನೇ ಸ್ಥಾನಕ್ಕೇರಿದ ಸೈನಾ

Posted By:
Subscribe to Oneindia Kannada

ನವದೆಹಲಿ, ಜುಲೈ 01: ಭಾರತದ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಪ್ರಕಟಿಸಿರುವ ಹೊಸ ಶ್ರೇಯಾಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ. ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ಅವರು ಮಹಿಳಾ ಸಿಂಗಲ್ಸ್ ನಲ್ಲಿ ಉನ್ನತ ಸ್ಥಾನ ಪಡೆದ ಸಾಧನೆ ಮಾಡಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್(ಬಿಡಬ್ಲ್ಯೂಎಫ್) ಗುರುವಾರ (ಜೂನ್ 30) ದಂದು ಪ್ರಕಟಿಸಿದ ಪಟ್ಟಿಯಲ್ಲಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ನಾಲ್ಕು ಸ್ಥಾನಕ್ಕೆ ಕುಸಿತ ಕಂಡು 20ನೇ ಸ್ಥಾನದಲ್ಲಿದ್ದಾರೆ.[ಭಾರತದ ಸೈನಾ ನೆಹ್ವಾಲ್ ಗೆ ಆಸ್ಟ್ರೇಲಿಯನ್ ಓಪನ್ ಕಿರೀಟ]

ಸೈನಾ ಅವರು ಇತ್ತೀಚೆಗೆ ನಡೆದ ಆಸ್ಟ್ರೇಲಿಯನ್ ಓಪನ್ ಫೈನಲ್ ಪಂದ್ಯದಲ್ಲಿ ಚೀನಾದ ಸನ್ ಯು ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಈ ಸಾಧನೆ ಮೂಲಕ 6ನೇ ಸ್ಥಾನದಲ್ಲಿದ್ದ ಸೈನಾ ಅವರು ಒಂದು ಸ್ಥಾನ ಮೇಲಕ್ಕೆ ಜಿಗಿದಿದ್ದಾರೆ.

Badminton Rankings: Saina Nehwal rises to 5th spot; Jwala-Ashwini slip 4 places

ಈ ಮೊದಲು ಐದನೇ ಸ್ಥಾನದಲ್ಲಿದ್ದ ಜಪಾನಿನ ನೊಝೋಮಿ ಒಕುಹರ ಆರನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಹಿಳಾ ಸಿಂಗಲ್ಸ್ ನಲ್ಲಿ ಸ್ಪೇನಿನ ಕ್ಯಾರೊಲಿನಾ ಮರಿನ್ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.[ಕ್ರೀಡಾ ಸೆಲೆಬ್ರಿಟಿ ಉಡುಗೆ ತೊಡುಗೆ ಸಾನಿಯಾ ಬೆಸ್ಟ್]

ಹೈದರಾಬಾದಿನ ಸೈನಾ ಅವರ ಜೊತೆಗಾರ್ತಿ ಭಾರತದ ಪಿ.ವಿ ಸಿಂಧು ಅವರು 10ನೇ ಸ್ಥಾನದಲ್ಲಿದ್ದಾರೆ. ಮಹಿಳಾ ಡಬಲ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿರುವ ಕಾಮನ್ ವೆಲ್ತ್ ಗೇಮ್ಸ್ ಚಾಂಪಿಯನ್ಸ್ ಜೋಡಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಅವರು ಶ್ರೇಯಾಂಕದಲ್ಲಿ ಕುಸಿದಿರುವುದು ಆತಂಕ ತಂದಿದೆ.[ಮೈಸೂರು ಸ್ಯಾಂಡಲ್ ಉತ್ಪನ್ನಕ್ಕೆ ಅಶ್ವಿನಿ ಪೊನ್ನಪ್ಪ ರಾಯಭಾರಿ!]

ಪುರುಷರ ಸಿಂಗಲ್ಸ್​ನಲ್ಲಿ ಮಲೇಷಿಯಾದ ಲೀ ಚೊನ್ಗ್ ವೆಯ್ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಸಮೀರ್ ವರ್ಮ 36, ಬಿ ಸಾಯಿ ಪ್ರಣೀತ್ 37ನೇ ಶ್ರೇಯಾಂಕದಲ್ಲಿದ್ದಾರೆ. ಪುರುಷರ ಡಬಲ್ಸ್ ನಲ್ಲಿ ಮನು ಅತ್ರಿ ಹಾಗೂ ಬಿ ಸುಮೀತ್ ರೆಡ್ಡಿ ಅವರು 23, ಪ್ರಣವ್ ಜೆರಿ ಚೋಪ್ರಾ ಹಾಗೂ ಅಕ್ಷಯ್ ದಿವಾಲ್ಕರ್ ಅವರು 29ನೇ ಸ್ಥಾನದಲ್ಲಿದ್ದಾರೆ (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
London Olympics bronze medallist Saina Nehwal rose one place to the No. 5 spot in women's singles while women's doubles combination of Jwala Gutta and Ashwini Ponnappa slipped 4 places to be placed 20th in the latest Badminton World Federation (BWF) rankings which were released on Thursday (June 30).
Please Wait while comments are loading...