ಆಸ್ಟ್ರೇಲಿಯನ್ ಓಪನ್: ವಿಶ್ವದ ನಂ.1 ಆಟಗಾರ 4ನೇ ಸುತ್ತಿನಲ್ಲೇ ಔಟ್

Posted By:
Subscribe to Oneindia Kannada

ಮೆಲ್ಬೋರ್ನ್, ಜನವರಿ 22: ಆಸ್ಟ್ರೇಲಿಯನ್ ಓಪನ್ ಟೆನಿಸ್ ಹಾಲಿ ಚಾಂಪಿಯನ್ ಜೊಕೊವಿಕ್ ನಿರ್ಗಮನದ ನಂತರ ಟೂರ್ನಮೆಂಟ್ ನಲ್ಲಿ ವಿಶ್ವದ ನಂ.1 ಆಟಗಾರ ಇಂಗ್ಲೆಂಡಿನ ಆಂಡಿ ಮರೆ ಭಾನುವಾರ ಹೊರಬಿದ್ದಿದ್ದಾರೆ. 4ನೇ ಸುತ್ತಿನಲ್ಲೇ ಮರೆ ಅವರನ್ನು ಜರ್ಮನಿಯ ವಿಶ್ವದ ನಂ.50ನೆ ಆಟಗಾರ ಮಿಶ್ಚಾ ಝ್ವೆರೆವ್ ಅವರು ಮನೆಗೆ ಕಳಿಸಿದ್ದಾರೆ.

ರಾಡ್ ಲಾವೆರ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್ ಆಟಗಾರ ಮರ್ರೆ ಅವರನ್ನು ಜರ್ಮನಿಯ ವಿಶ್ವದ ನಂ.50ನೇ ಅನ್ ಸೀಡೆಡ್ ಆಟಗಾರ ಮಿಶ್ಚಾ ಝ್ವೆರೆವ್ ವರು 7-5,5-7, 6-2, 6-4 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

Australian Open: Top seed Andy Murray stunned by unseeded Mischa Zverev in fourth round

ಜೊಕೊವಿಕ್ ಗುರುವಾರ ನಡೆದಿದ್ದ ಎರಡನೆ ಸುತ್ತಿನ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಡೆನಿಸ್ ಇಸ್ಟೊಮಿನ್ ವಿರುದ್ಧ ಸೋತಿದ್ದರು. ಆರು ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಲಗ್ಗೆ ಇಟ್ಟು ಪ್ರಶಸ್ತಿ ವಂಚಿತರಾಗಿರುವ ಮರ್ರೆ ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದರು.

ಇನ್ನೊಂದೆಡೆ ಭಾರತಕ್ಕೆ ಇಂದು ಮಿಶ್ರಫಲ ಸಿಕ್ಕಿದೆ. ಪೇಸ್ ಹಾಗೂ ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ಜೋಡಿ ಮಿಶ್ರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಡೆಸ್ಟನೀ ಅಲಾವಾ ಹಾಗೂ ಮಾರ್ಕ್ ಪಾಲ್ಮನ್ಸ್ ರನ್ನು 6-4, 6-3 ಸೆಟ್‌ ಗಳ ಅಂತರದಿಂದ ಸೋಲಿಸಿದೆ.

ಮಹಿಳೆಯರ ಡಬಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ಸಾನಿಯಾ ಹಾಗೂ ಅವರ ಜೊತೆಗಾರ್ತಿ ಸ್ಟ್ರೈಕೋವಾ ಅವರು ಜಪಾನಿನ ಹೊಝುಮಿ ಹಾಗೂ ಮಾಟೊ ವಿರುದ್ಧ 3-6, 6-2, 2-6 ಸೆಟ್‌ಗಳ ಅಂತರದಿಂದ ಸೋಲು ಕಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Unseeded German Mischa Zverev produced a bold display of tennis to shock top seed Andy Murray 7-5, 5-7, 6-2, 6-4 in the fourth round of the Australian Open here on Sunday (Jan 22).
Please Wait while comments are loading...